'ಹೌಡಿ ಮೋದಿ' ಜಗತ್ತಿನ ದುಬಾರಿ ಕಾರ್ಯಕ್ರಮ: ರಾಹುಲ್ ತಗಾದೆ

ನವದೆಹಲಿ, ಸೆಪ್ಟೆಂಬರ್ 21: ಹ್ಯೂಸ್ಟನ್‌ ನಲ್ಲಿ ಭಾನುವಾರ ನಡೆಯಲಿರುವ 'ಹೌಡಿ ಮೋದಿ' ಕಾರ್ಯಕ್ರಮದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, 'ದೇಶ ಕಷ್ಟದಲ್ಲಿದ್ದಾಗ ಮೋದಿ ದುಬಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ' ಎಂದಿದ್ದಾರೆ.

'ಹೌಡಿ ಮೋದಿ' ಕಾರ್ಯಕ್ರಮವು ಜಗತ್ತಿನ ದುಬಾರಿ ಕಾರ್ಯಕ್ರಮಗಳಲ್ಲಿ ಒಂದು ಎಂದಿರುವ ರಾಹುಲ್, ಆ ಕಾರ್ಯಕ್ರಮಕ್ಕೆ 1.4 ಲಕ್ಷ ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.

'ಆದರೆ ಎಷ್ಟೆ ದುಬಾರಿ ಕಾರ್ಯಕ್ರಮ ಮಾಡಿದರೂ ಸಹ ದೇಶದ ಆರ್ಥಿಕತೆಯ ಸತ್ಯವನ್ನು ಮಾತ್ರ ಬಚ್ಚಿಡಲು ಸಾಧ್ಯವಿಲ್ಲ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Howdy Modi Is Worlds Most Expensive Event: Rahul Gandhi

ಮತ್ತೊಂದು ಟ್ವೀಟ್‌ನಲ್ಲಿ ಇದೇ ಕಾರ್ಯಕ್ರಮದ ಬಗ್ಗೆ ಮೋದಿಯ ಕಾಲೆಳೆದಿರುವ ರಾಹುಲ್ ಗಾಂಧಿ, 'ಹೌಡಿ (ಹೇಗಿದೆ) ಭಾರತದ ಆರ್ಥಿಕ ಸ್ಥಿತಿ ಮೋದಿ? ಎಂದು ಪ್ರಶ್ನಿಸಿ, ಅಷ್ಟೇನೂ ಉತ್ತಮವಾಗಿದ್ದಂತಿಲ್ಲ ಎಂದು ಹೇಳಿದ್ದಾರೆ. ಭಾರತದ ಆರ್ಥಿಕ ಸ್ಥಿತಿಯ ಅಂಕಿ-ಅಂಶದ ಸುದ್ದಿಯ ಲಿಂಕ್ ಅನ್ನು ಸಹ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆಯುತ್ತಿರುವ 'ಹೌಡಿ ಮೋದಿ' ಎಂಬ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮ ಭಾನುವಾರ ನಡೆಯಲಿದ್ದು, ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು, ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+