ಕೋಲ್ ಇಂಡಿಯಾ ನೌಕರರಿಗೆ ಶೇ 20ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ

ನವದೆಹಲಿ, ಅಕ್ಟೋಬರ್ 11: ಕಲ್ಲಿದ್ದಲು ನೌಕರರ ಜತೆಗಿನ ಹತ್ತನೇ ವೇತನ ಒಪ್ಪಂದವು ಮಂಗಳವಾರ (ಅಕ್ಟೋಬರ್ 10) ಸಭೆಯಲ್ಲಿ ಅಂತಿಮವಾಗಿದೆ. ಕಳೆದ ವರ್ಷದ ಜುಲೈನಿಂದ ಕೂಡ ನೌಕರರ ಜತೆಗಿನ ವೇತನ ಒಪ್ಪಂದ ಬಾಕಿಯುಳಿದಿತ್ತು. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ನಡೆಯುತ್ತಿದ್ದ ಮಾತುಕತೆಗೆ ಅಂತೂ ಅಂತಿಮವಾಗಿ ಒಪ್ಪಿಗೆ ಮುದ್ರೆ ಬಿದ್ದಿದೆ.

ನೌಕರರಿಗೆ ಶೇ ಐವತ್ತರಷ್ಟು ವೇತನ ಹೆಚ್ಚಳ ಮಾಡಬೇಕು ಎಂಬುದು ಕಾರ್ಮಿಕ ಒಕ್ಕೂಟದ ಪ್ರತಿನಿಧಿಗಳ ಬೇಡಿಕೆಯಾಗಿತ್ತು. ಆದರೆ ಕೋಲ್ ಇಂಡಿಯಾ ಲಿಮಿಟೆಡ್ ನಿಂದ ಸಾಧಕ-ಬಾಧಕಗಳು, ಸ್ಥಿತಿ ಗತಿ ಪರಾಮರ್ಶಿಸಿ ಶೇಕಡಾ ಇಪ್ಪತ್ತರಷ್ಟು ವೇತನ ಹೆಚ್ಚಳ ಮಾಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

Historic wage agreement by Coal India Limited

ಪ್ರತಿ ನೌಕರರಿಗೂ ವಾರದಲ್ಲಿ ಒಂದು ದಿನ ರಜಾ ಸಿಗಲಿದೆ. ಇನ್ನು ಇದೇ ತಿಂಗಳ ಹದಿನಾರನೇ ತಾರೀಖಿನಿಂದ ಒಂದು ತಿಂಗಳ ಕಾಲ ನೌಕರರ ಕಲ್ಯಾಣ, ಸುರಕ್ಷತೆ ಹಾಗೂ ಉತ್ಪಾದನೆಗೆ ಸಂಬಂಧಿಸಿದಂತೆ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ನೌಕರರಿಗೆ ಬಾಕಿ ಇರುವ ಮೊತ್ತವನ್ನು 40, 30, 30ರಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ.

ಒಂದು ಸಲದ ಮುಂಗಡವಾಗಿ ಈ ಬಾರಿಯ ದೀಪಾವಳಿಗೂ ಮುನ್ನ ಪ್ರತಿ ನೌಕರರಿಗೆ ನಲವತ್ತು ಸಾವಿರ ರುಪಾಯಿ ನೀಡಲಾಗುತ್ತದೆ. ನಿವೃತ್ತಿ ನಂತರದ ನೌಕರರ ಆರೋಗ್ಯ ಯೋಜನೆಗಾಗಿ ಪ್ರತಿ ನೌಕರರಿಗೆ ತಲಾ ಹದಿನೆಂಟು ಸಾವಿರ ರುಪಾಯಿ ಮೀಸಲಿಡಲು ತೀರ್ಮಾನಿಸಲಾಗಿದೆ. ಪೆನ್ಷನ್ ಫಂಡ್ ಗೆ ಶೇ ಏಳರಷ್ಟು ಮೀಸಲಿಡಲಾಗುತ್ತದೆ.

ಮಂಗಳವಾರದ ಈ ಒಪ್ಪಂದವು ಚಾರಿತ್ರಿಕವಾದದ್ದು ಎಂದು ನೌಕರರ ಸಂಘಗಳ ಒಕ್ಕೂಟ ಹಾಗೂ ಆಡಳಿತ ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+