ಹಿಮಾಲಯನ್ ಮಿನರಲ್ ವಾಟರ್ ಸ್ಥಾಪಕ ಬಲ್ಸಾರಾ ಇನ್ನಿಲ್ಲ

ನವದೆಹಲಿ, ಜೂನ್ 20: ರಾಜಧಾನಿಯ ತಾಜ್ ಮಾನ್ ಸಿಂಗ್ ಪಂಚತಾರಾ ಹೋಟೆಲ್ 36 ವರ್ಷಗಳ ಹಿಂದೆ ಸ್ಥಾಪನೆಯಾದಾಗಿನಿಂದ ನಿರಂತರವಾಗಿ ಅದೇ ಹೋಟೆಲಲ್ಲಿ ವಾಸ್ತವ್ಯವಿದ್ದ ವ್ಯಕ್ತಿಯೊಬ್ಬರು ತಮ್ಮ 81ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

ದಡಿ ಬಲ್ಸಾರಾ ಎಂಬ ಈ ವ್ಯಕ್ತಿ ದಿನಕ್ಕೆ 15 ಸಾವಿರ ರೂ ಬಾಡಿಗೆ ಕಟ್ಟುತ್ತಾ ಪಂಚತಾರಾ ಹೋಟೆಲಿನಲ್ಲಿ ವಾಸವಾಗಿದ್ದರು. ದೀರ್ಘಕಾಲದ ಅನಾರೋಗ್ಯದ ಬಳಿಕ ಗುರುವಾರ ಬೆಳಗಿನ ಜಾವ 3 ಗಂಟೆಯಲ್ಲಿ ಮೃತಪಟ್ಟಿದ್ದಾರೆ. ದಡಿ ಬಲ್ಸಾರಾ ದೇಹಸ್ಥಿತಿ ಕ್ಷೀಣಿಸಿದಾಗ ಅವರನ್ನು ನೋಡಿಕೊಳ್ಳುತ್ತಿದ್ದ ಹೋಟೆಲಿನ ಪರಿಚಾರಕರೊಬ್ಬರು ಆಸ್ಪತ್ರೆಗೆ ಸೇರಿಸಿದ್ದರು.

himalayan-mineral-water-founder-dadi-balsara-died-in-delhi

ಅಂದಹಾಗೆ ಬಲ್ಸಾರಾ ಅವರು ಪ್ರಾಖ್ಯಾತ ಹಿಮಾಲಯನ್ ಮಿನರಲ್ ವಾಟರ್ ಕಂಪನಿಯ ಸ್ಥಾಪಕರು. ಬಲ್ಸಾರಾ ಅವರ ಪತ್ನಿ (ಚೀನಾ ಮೂಲದವರು) 2009ರಲ್ಲಿಯೇ ಅಸುನೀಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ನಾಗ್ಪುರದಲ್ಲಿ ಎಲ್ಐಸಿಯಲ್ಲಿ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ ದಡಿ ಬಲ್ಸಾರಾ, ಮುಂದೆ ಶಿಷ್ಟವೇತನ ಪಡೆದು ಅಮೆರಿಕದಲ್ಲಿ ಸೈಕಿಯಾಟ್ರಿ ವಿಷಯದಲ್ಲಿ ಡಾಕ್ಟರೇಟ್ ಮಾಡಿದ್ದರು.

ದಡಿ ಬಲ್ಸಾರಾ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರು ಸಹಜ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್ಬಿಎಸ್ ತ್ಯಾಗಿ ಹೇಳಿದ್ದಾರೆ. ಮೃತ ಬಲ್ಸಾರಾಗೆ ಇಬ್ಬರು ಸೋದರರಿದ್ದಾರೆ.

ದಡಿ ಬಲ್ಸಾರಾ ಅವರ ಬ್ಯಾಂಕ್ ಖಾತೆಯಲ್ಲಿ 250 ಕೋಟಿ ರೂಪಾಯಿ ಇದೆ. ಅದರಲ್ಲಿ ಒಂದಷ್ಟು ಹಣವನ್ನು ಬಂಧುಗಳಿಗೂ ಮತ್ತೊಂದಿಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲು ಅವರು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. ಜಮ್ಷೆಡ್ ಪುರದಲ್ಲಿ ಹೃದ್ರೋಗ ತಜ್ಞರಾಗಿರುವ ಅವರ ತಮ್ಮ ಹೋಟೆಲಿಗೆ ಆಗಮಿಸಿದ್ದು, ಅಣ್ಣನ ಅಂತ್ಯಕ್ರಿಯೆ ಏರ್ಪಾಡುಗಳನ್ನು ಮಾಡಿದ್ದಾರೆ.

ಸಿಂಗಪುರದಲ್ಲಿದ್ದ ಅನಿವಾಸಿ ಭಾರತೀಯ ದಡಿ ಬಲ್ಸಾರಾ 1991ರಲ್ಲಿ Mount Everest Mineral Water Limited ಕಂಪನಿಯನ್ನು ಸ್ಥಾಪಿಸಿದ್ದರು. ಮುಂದೆ 2001ರಲ್ಲಿ ಟಾಟಾ ಕಂಪನಿಯು ಪಾರ್ಸಿ ಜನಾಂಗದ ದಡಿ ಬಲ್ಸಾರಾ ಮಾಲೀಕತ್ವದಲ್ಲಿದ್ದ ಈ ಕಂಪನಿಯನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡಿತು. ಅದೀಗ ಹಿಮಾಲಯನ್ ಹೆಸರಿನಲ್ಲಿ ಚಾಲ್ತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+