Breaking: ಒಂದೇ ದಿನ 5242 ಕೇಸ್ ಪತ್ತೆ, ಒಟ್ಟು 3029 ಮಂದಿ ಸಾವು
ದೆಹಲಿ, ಮೇ 18: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 96 ಸಾವಿರ ಗಡಿ ದಾಟಿದೆ. ಅಚ್ಚರಿ ಅಂದ್ರೆ ಒಂದೇ ದಿನ 5242 ಹೊಸ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದುವರೆಗಿನ ಅಂಕಿ ಅಂಶಗಳ ಪೈಕಿ ದಿನವೊಂದರಲ್ಲಿ ಅತಿ ಹೆಚ್ಚು ಹೊಸ ಕೇಸ್ ಪತ್ತೆಯಾಗಿದ್ದು ಇದೇ ಮೊದಲು. ಮೇ 17ರಂದು 4987 ಹೊಸ ಕೇಸ್ ದಾಖಲಾಗಿತ್ತು. ಇದೀಗ, ಅದಕ್ಕಿಂತ ಹೆಚ್ಚು ಕೇಸ್‌ಗಳು ವರದಿಯಾಗಿದೆ.
ಪ್ರಸ್ತುತ ಭಾರತದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 96169ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 5242 ಹೊಸ ಕೇಸ್ ವರದಿಯಾಗಿದ್ದು, 157 ಮಂದಿ ಮೃತಪಟ್ಟಿದ್ದಾರೆ.

96169 ಪ್ರಕರಣಗಳ ಪೈಕಿ 56316 ಜನರು ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 36824 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು 3029 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಹಂತದ ಹಂತವಾಗಿ ಲಾಕ್‌ಡೌನ್ ತೆರವುಗೊಳ್ಳುತ್ತಿದೆ. ಮತ್ತೊಂದೆಡೆ ಹಂತ ಹಂತವಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂದಿನಿಂದ ದೇಶದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಾಗಲಿದೆ.












Click it and Unblock the Notifications