ಒಂದು ರಾಷ್ಟ್ರ, ಒಂದು ತೆರಿಗೆ: ಟ್ವಿಟ್ಟರ್ ನಲ್ಲೂ ಜಿಎಸ್ ಟಿ ಜಪ

ನವದೆಹಲಿ, ಜುಲೈ 1: ಭಾರತದ ಪಾಲಿಗೆ ಜುಲೈ 1 ಎಲ್ಲ ದಿನದಂತಲ್ಲ. 'ಒಂದು ರಾಷ್ಟ್ರ, ಒಂದು ತೆರಿಗೆ' ಎಂಬ ಉದ್ದೇಶದೊಂದಿಗೆ ನಿನ್ನೆ (ಜೂನ್ 30) ಮಧ್ಯರಾತ್ರಿಯಿಂದಲೇ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಭರವಸೆ ಎಲ್ಲೆಡೆ ವ್ಯಕ್ತವಾಗಿದೆ.

ಹಾಗೆಯೇ ಜಿಎಸ್ ಟಿ ಶ್ರೀಸಾಮಾನ್ಯನಿಗೆ ಏನಿದ್ದರೂ ಹೊರೆಯೇ ಎಂಬ ಅಭಿಪ್ರಾಯವೂ ಹಲವೆಡೆಯಿಂದ ವ್ಯಕ್ತವಾಗುತ್ತಿದೆ. ಜಿಎಸ್ ಟಿ ಕುರಿತು ದಿನೇ ದಿನೇ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಜೂನ್ 30 ರ ಮಧ್ಯರಾತ್ರಿ ನಡೆದ ಐತಿಹಾಸಿಕ ಸಂಸತ್ ಅಧಿವೇಶನಕ್ಕೆ ವಿಪಕ್ಷಗಳೆಲ್ಲ ಗೈರು ಹಾಜರಾಗಿ ತಮ್ಮ ವಿರೋಧ ವ್ಯಕ್ತಪಡಿಸಿವೆ.

ಹೀಗಿರುವಾಗ ಟ್ವೀಟ್ಟರಿನಲ್ಲಿಯೂ ಜಿಎಸ್ ಟಿ ಯುಗಾರಂಭದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. #OneNationOneTax ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಜಿಎಸ್ ಟಿ ಕುರಿತ ತಮ್ಮ ಅಭಿಪ್ರಾಯಗಳನ್ನು ಹಲವು ಸೆಲೆಬ್ರಿಟಿಗಳು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಾಗಿ ಹಲವು ಸೆಲೆಬ್ರಿಟಿಗಳು ಜಿಎಸ್ ಟಿ ಕುರಿತು ಮುಕ್ತವಾಗಿ ಹಂಚಿಕೊಂಡ ಮಾತುಗಳು ನಿಮಗಾಗಿ ಇಲ್ಲಿವೆ...

ಭಾರತದ ಶಕ್ತಿಯ ದ್ಯೋತಕ

ಜಿಎಸ್ ಟಿಯು ಭಾರತ ಎಂಬ ಒಂದು ಒಗ್ಗಟ್ಟಿನ ತಂಡದ ಶಕ್ತಿ ಏನು ಎಂಬುದನ್ನು ತೋರಿಸಿಕೊಡಲಿದೆ. ಬಡವರ ಉದ್ಧಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಒಂದಾಗಲಿವೆ ಎಂಬುದನ್ನು ಜಿಎಸ್ ಟಿ ತೋರಿಸಿಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಯಾರಿಗೆ ಲಾಭ?

ನಾವು ಜಿಎಸ್ ಟಿ ವಿರೋಧಿಗಳಲ್ಲ, ಆದರೆ ಜಿಎಸ್ ಟಿಯನ್ನು ಜಾರಿಗೆ ತರುವ ಮುನ್ನ ಸರ್ಕಾರ ಇನ್ನೊಂದಷ್ಟು ಸಿದ್ಧತೆ ನಡೆಸಿಕೊಳ್ಳಬೇಕಿತ್ತು. ನಿಜಕ್ಕೂ ಸರ್ಕಾರದ ಈ ನಿರ್ಧಾರದಿಂದ ಬಡವರಿಗೆ, ಸಣ್ಣ ವ್ಯಾಪಾರಿಗಳಿಗೆ ನೆರವಾಗುತ್ತಿದೆಯೇ ಎಂದು ಐಎನ್ ಸಿ ಇಂಡಿಯಾ ಟ್ವೀಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಅಸಮರ್ಥ ಸರ್ಕಾರದ ಪರಿಕಲ್ಪನೆ

ಅಪನಗದಿಕರಣದಂತೆ ಜಿಎಸ್ ಟಿ ಸಹ ಒಂದು ಅಸಮರ್ಥ, ಸೂಕ್ಷ್ಮತೆಯಿಲ್ಲದ ಸರ್ಕಾರ ಜಾರಿಗೆ ತಂದ ದೂರದೃಷ್ಟಿ ಇಲ್ಲದ, ಪೂರ್ವತಯಾರಿಯಿಲ್ಲದ ಪರಿಕಲ್ಪನೆಯೇ ಆಗುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇತಿಹಾಸ ನಿರ್ಮಾಣವಾಗಿದೆ.

ಜಿಎಸ್ ಟಿ ಜಾರಿಯ ಮೂಲಕ ಭಾರತದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಭಾರತದ ಹೊಸ ತೆರಿಗೆ ಯುಗಕ್ಕೆ ಸ್ವಾಗತ, ಜೈ ಹಿಂದ್ ಎಂದು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ದೂರದೃಷ್ಟಿಯ ಹೆಜ್ಜೆ

ಒಂದು ಬಲಾಡ್ಯ ರಾಷ್ಟ್ರ ನಿರ್ಮಾಣದ ದೃಷ್ಟಿಯಿಂದ ಜಿಎಸ್ ಟಿ ಒಂದು ಮಹತ್ವದ ಹೆಜ್ಜೆ. ಒಂದು ರಾಷ್ಟ್ರ, ಒಂದು ತೆರಿಗೆ ಎಂಬ ದಿಟ್ಟ ಮತ್ತು ದೂರದೃಷ್ಟಿಯ ನಿರ್ಧಾರ ನ ಅಭಿನಂದನೀಯ ಎಂದು ಅಧ್ಯಾತ್ಮ ಗುರು ಶ್ರೀ ಸದ್ಗುರು ಜಗ್ಗಿ ವಾಸುದೇವ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+