ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೊಯ್ದು ತೊಪ್ಪೆ ಆಯ್ತು ದಿಲ್ಲಿ: ಜನರು ಓಡಿದ್ದೆಲ್ಲಿ?

By Nayana
|
Google Oneindia Kannada News

ಬೆಂಗಳೂರು, ಜು.17: ಕಳೆದ ಮೂರು ವಾರಗಳಿಂದ ಮುಂಬೈ, ಮಹಾರಾಷ್ಟ್ರ, ಗುಜರಾತ್ ಹಾಗೆ ದೆಹಲಿಯಲ್ಲೂ ಭಾರಿ ಮಳೆಯಾಗುತ್ತಿದೆ. ದೆಹಲಿಯ ರಸ್ತೆಗಳಂತೂ ನದಿಯಂತಾಗಿದೆ.

ಹಾಗಾದರೆ ಜನರು ಓಡಿದ್ದೆಲ್ಲಿಗೆ, ಕೆಲವರು ಬಸ್‌, ಇನ್ನು ಕೆಲವರು, ಕಾರು, ಬಸ್‌ ಸ್ಟಾಪ್‌, ಹತ್ತಿರದ ಕಟ್ಟಡ ಹೀಗೆ ಮಳೆ ಬಂದಾಕ್ಷಣ ದಿಕ್ಕಾಪಾಲಾಗಿ ಓಡಿದರು.

ಕರ್ನಾಟಕ ಕರಾವಳಿಯಲ್ಲಿ ಮತ್ತೆ ಅಬ್ಬರಿಸಲಿದ್ದಾನೆ ವರುಣ!ಕರ್ನಾಟಕ ಕರಾವಳಿಯಲ್ಲಿ ಮತ್ತೆ ಅಬ್ಬರಿಸಲಿದ್ದಾನೆ ವರುಣ!

ದಕ್ಷಿಣ ಭಾರತದ ಮಹಾರಾಷ್ಟ್ರ, ಕರ್ನಾಟಕ ಅಷ್ಟೇ ಅಲ್ಲ. ಉತ್ತರ ಭಾರತದಲ್ಲೂ ಮಳೆ ಅಬ್ಬರ ಜೋರಾಗಿದೆ. ಸೋಮವಾರ ಸಂಜೆ ದೆಹಲಿ ಹಾಗೂ ಗುಜರಾತ್​ನಲ್ಲಿ ಭರ್ಜರಿ ಮಳೆಯಾಗಿದೆ. ದೆಹಲಿಯ ಹಲವೆಡೆ ಸುಮಾರು 100 ಮಿಲಿ ಮೀಟರ್ ಮಳೆಯಾಗಿದ್ದು, ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದವು. ವಾಹನ ಸಂಚಾರರು ಪರದಾಡುವಂತಾಗಿತ್ತು.

ಇನ್ನು ಗುಜರಾತ್‌ನ ಹಲವೆಡೆ ಭಾರಿ ಮಳೆಯಾಗಿದೆ. ಗುಜರಾತ್​ನ ಸೋಮನಾಥ ಜಿಲ್ಲೆಯಲ್ಲಿ 4 ಹಳ್ಳಿಗಳೇ ಜಲಾವೃತಗೊಂಡಿವೆ. ಸೋಮನಾಥ ಪುರ ಜಿಲ್ಲೆಯಲ್ಲಿ 4 ಗ್ರಾಮಗಳಿಗೆ ನೆರೆಭೀತಿ ಶುರುವಾಗಿದೆ. ಹಲವೆಡೆ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಎನ್​ಡಿಆರ್​ಎಫ್ ಪಡೆ ಗುಜರಾತ್​ಗೆ ಆಗಮಿಸಿದ್ದು, ಸಂತ್ರಸ್ತರ ನೆರವಿಗೆ ನಿಂತಿದೆ, ಸಿಎಂ ವಿಜಯ ರೂಪಾಯಿ ಅಧಿಕಾರಿಗಳ ಸಭೆ ನಡೆಸಿ ಸಂತ್ರಸ್ಥರಿಗೆ ಎಲ್ಲಾ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದಾರೆ.

ಚಿತ್ರಗಳು : ನವದೆಹಲಿಯಲ್ಲಿ ಮಳೆ, ಚಿಣ್ಣರ ನೀರಾಟ ಚಿತ್ರಗಳು : ನವದೆಹಲಿಯಲ್ಲಿ ಮಳೆ, ಚಿಣ್ಣರ ನೀರಾಟ

ನ್ನು ಗುಜರಾತ್​ನ ಭಾವ್​ನಗರದಲ್ಲೂ ಭಾರಿ ಮಳೆ. ತಗ್ಗು ಪ್ರದೇಶದಲ್ಲಿದ್ದ ಅಂಗಡಿಗಳೆಲ್ಲಾ ಮುಳುಗಿ ಹೋಗಿವೆ. ಒಡಿಶಾದಲ್ಲಿ ನಿರಂತರ ಮಳೆಯಾಗುತ್ತಿದ್ದವು, ಹಲವೆಡೆ ಭೂಕುಸಿದೆ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನು 48 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಡುರಸ್ತೆಯಲ್ಲೇ ಮುಳುಗಿದ ಬಸ್‌ ಪ್ರಯಾಣಿಕರ ರಕ್ಷಣೆ

ನಡುರಸ್ತೆಯಲ್ಲೇ ಮುಳುಗಿದ ಬಸ್‌ ಪ್ರಯಾಣಿಕರ ರಕ್ಷಣೆ

ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ, ಏಕಾಏಕಿ ಮಳೆ ಆರಂಭಗೊಂಡು, ಬಸ್‌ ಚಲಿಸುತ್ತಿರುವಾಗಲೇ ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಬಸ್‌ ಮುಕ್ಕಾಲು ಭಾಗ ಮುಳುಗಿತು, ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಯಿತು.

ಜಲ ಬಸ್‌ಸ್ಟಾಪ್‌ ನೋಡಿದ್ದೀರ, ಇಲ್ಲಿದೆ ನೋಡಿ

ಜಲ ಬಸ್‌ಸ್ಟಾಪ್‌ ನೋಡಿದ್ದೀರ, ಇಲ್ಲಿದೆ ನೋಡಿ

ನವದೆಹಲಿಯ ಕಾಳಿ ಮಂದಿರ ಬಸ್‌ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ, ಬಸ್‌ಗಾಗಿ ಕಾಯುತ್ತಿರುವಾಗ ಏಕಾಏಕಿ ಮಳೆ ಬಂದಿದ್ದ ಕಾರಣ, ಪ್ರಯಾಣಿಕರಿಗೆ ಮನೆಗೂ ಹೋಗಲಾಗದೆ ಬಸ್‌ಗಳೂ ಸಿಗದೆ ಪರದಾಡುವಂತಾಯಿತು. ನಂತರ ನೀರಿನಲ್ಲೇ ಕಾಲಿಟ್ಟುಕೊಂಡು ಬಸ್‌ ನಿಲ್ದಾಣದಲ್ಲಿ ಅನಿವಾರ್ಯವಾಗಿ ಕುಳಿತುಕೊಳ್ಳಬೇಕಾಯಿತು.

ಮಳೆ ಎಂದು ಹೋಗೋಕಾಗುತ್ತಾ, ಹೊಟ್ಟೆ ಪಾಡು ಸ್ವಾಮಿ

ಮಳೆ ಎಂದು ಹೋಗೋಕಾಗುತ್ತಾ, ಹೊಟ್ಟೆ ಪಾಡು ಸ್ವಾಮಿ

ಕಳೆದ ಎರಡು ದಿನಗಳಿಂದ ನವ ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಳ್ಳುವವರಿಗೂ ತೀವ್ರ ಹೊಡೆತ ಬಿದ್ದಿದೆ, ಮಳೆ ಎಂದು ಹೋಗೋಕೆ ಆಗುತ್ತಾ ಹೊಟ್ಟೆ ಪಾಡನ್ನು ನೋಡಬೇಕಲ್ಲಾ ಎಂದು ಗ್ರಾಹಕರಿಗಾಗಿ ಕಾದುಕುಳಿತಿರುವ ಹಣ್ಣುಗಳ ವ್ಯಾಪಾರಿ.

ನಡುರಸ್ತೆಯ ಕೆಸರ ನೀರಲಿ ಮಕ್ಕಳ ಆಟ

ನಡುರಸ್ತೆಯ ಕೆಸರ ನೀರಲಿ ಮಕ್ಕಳ ಆಟ

ಒಂದೆಡೆ ಭಾರಿ ಮಳೆಗೆ ಸಂಪೂರ್ಣ ರಸ್ತೆಗಳು ಜಲಾವೃತವಾಗಿದ್ದರೆ ಇನ್ನೊಂದೆಡೆಗೆ ಕೆಸರ ನೀರಿನಲ್ಲಿ ಆಟವಾಡಲು ಮಕ್ಕಳಿಗೆ ತವಕ, ನಡುರಸ್ತೆಯಲ್ಲೇ ವಾಹನಗಳ ಮಧ್ಯೆ ಮಕ್ಕಳು ನೀರಿನೊಂದಿಗೆ ಆಟವಾಡಿದ್ದು ಹೀಗೆ.

English summary
Roads, market, shopping complex, streets were waterlogged in capital city Delhi after monsoon rain on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X