• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಳಿಗೆ ಉತ್ತರ ಥರ-ಥರ: ದೆಹಲಿಯಲ್ಲಿ ದಾಖಲಾಯ್ತು ದಾಖಲೆ ಚಳಿ

|

ನವದೆಹಲಿ, ಡಿಸೆಂಬರ್ 28: ಚಳಿಗೆ ಭಾರತದ ಉತ್ತರ ಭಾಗ ಥರ-ಥರ ನಡುಗುತ್ತಿದೆ. ದೆಹಲಿಯಲ್ಲಿಯಂತೂ ಮೂವತ್ತು ವರ್ಷದಲ್ಲಿಯೇ ಅತ್ಯದಿಕ ಚಳಿ ದಾಖಲಾಗಿದೆ. ದೆಹಲಿಯಲ್ಲಿ ಮೂವತ್ತು ವರ್ಷಗಳಲ್ಲೇ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ.

ದೆಹಲಿಯಲ್ಲಿ ಇಂದು ಬೆಳಿಗ್ಗೆ 2.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದಟ್ಟ ಮಂಜಿನಿಂದಾಗಿ ಕತ್ತಲು ಆವರಿಸಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿದೆ. ದಟ್ಟ ಮಂಜಿನ ಕಾರಣದಿಂದಾಗಿ ದೆಹಲಿಯಲ್ಲಿ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.

ದಟ್ಟ ಮಂಜು ಮತ್ತು ಕಲುಶಿತ ಹೊಗೆ ಸೇರಿ ದೆಹಲಿಯ ಹವಾಮಾನ ತೀವ್ರವಾಗಿ ಹದಗೆಟ್ಟಿದ್ದು, ಮಾಸ್ಕ್‌ ಇಲ್ಲದೆ ಹೊರಗೆ ಬರುವುದು ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ದೆಹಲಿ ಮಾತ್ರವಲ್ಲದೆ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡಿಘಡ, ರಾಜಸ್ಥಾನದ ಕೆಲವು ಭಾಗಗಳು ತೀವ್ರ ಚಳಿಯಿಂದ ತತ್ತರಿಸಿವೆ. ಈ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಚಳಿ ಹೆಚ್ಚುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದೆ.

ಕಾಶ್ಮೀರದಲ್ಲಿಯಂತೂ ಚಳಿ ಮಿತಿ ಮೀರಿದ್ದು ದಾಲ್ ಸರೋವರ ಕಲ್ಲಾಗಿದೆ. ತೀವ್ರ ಮಂಜು ಆವರಿಸಿ ಶ್ರೀನಗರ ಹಾಗೂ ಕೆಲವು ಭಾಗಗಳು ಬೆಳ್ಳನೆ ಪದರ ಹೊತ್ತು ನಿಂತಿವೆ.

English summary
New Delhi witnessing heavy cold day in last 30 years on December 28. Punjab, Haryana, Kashmir many north states were affected by cold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X