ಮಾಯಾವತಿ ಮದುವೆಯಾಗಿದ್ದರೆ ಕಷ್ಟ ಗೊತ್ತಾಗುತ್ತಿತ್ತು: ಕೇಂದ್ರ ಸಚಿವ
ನವದೆಹಲಿ, ಮೇ 17: 'ಮಾಯಾವತಿಗೆ ಮದುವೆಯಾದಾಗಿದ್ದರೆ ಕುಟುಂಬದ ಮೌಲ್ಯ ಅರ್ಥವಾಗುತ್ತಿತ್ತು. ಪತಿಯನ್ನು ನಿಭಾಯಿಸುವುದು ಹೇಗೆ ಎಂಬುದು ಗೊತ್ತಾಗುತ್ತಿತ್ತು' ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಲೇವಡಿ ಮಾಡಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತಿದ್ದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, "ನರೇಂದ್ರ ಮೋದಿ ಅವರು ಹೆಂಡಿತಿಯನ್ನು ಬಿಟ್ಟವರು. ಅವರು ಪತ್ನಿಗೆ ಗೌರವ ನೀಡಿಲ್ಲ. " ಎಂದಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಅಠಾವಳೆ, "ಮಾಯಾವತಿ ಅವರು ಮೋದಿ ಅವರ ಬಗ್ಗೆ ಮಾತನಾಡುತ್ತಾರೆ, ಅವರ ಪತ್ನಿ ಬಗ್ಗೆ ಮಾತನಾಡುತ್ತಾರೆ. ಅವರು ಮದುವೆಯಾಗದೆ ಇರುವುದಕ್ಕೆ ಅವರಿಗೆ ಕುಟುಂಬದ ಬೆಲೆ ಗೊತ್ತಿಲ್ಲ. ಅವರಿಗೆ ಮದುವೆಯಾಗಿದ್ದರೆ ಪತಿಯನ್ನು ನಿಭಾಯಿಸುವುದು ಹೇಗೆ ಎಂಬುದು ಗೊತ್ತಾಗುತ್ತಿತ್ತು. ಮಾಯಾವತಿ ಅವರ ಬಗ್ಗೆ ನಮಗೆಲ್ಲ ಸಾಕಷ್ಟು ಗೌರವವಿದೆ. ಅವರು ಇಂಥ ಹೇಳಿಕೆ ನೀಡಬಾರದು" ಎಂದು ಅವರು ಹೇಳಿದ್ದಾರೆ.












Click it and Unblock the Notifications