ಹಾಡಹಗಲೇ ಯುವತಿಯ ಅಪಹರಣ, ಸಿಸಿಟಿವಿಯಲ್ಲಿ ಸೆರೆ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್,28: ರಾಜಧಾನಿ ನವದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಮತ್ತೇ ಮತ್ತೇ ಸಾಬೀತಾಗುತ್ತಿದೆ. ದುಷ್ಕರ್ಮಿಗಳು ಕಾಲೇಜು ಯುವತಿಯನ್ನು ಹಾಡಹಗಲೇ ಅಪಹರಣ ಮಾಡಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ಅಪಹರಣಕ್ಕೆ ಒಳಗಾದ 19 ವರ್ಷದ ಯುವತಿ ನವದೆಹಲಿಯ ಗುರ್ ಗಾಂವ್ ನಲ್ಲಿರುವ ದ್ರೋಣಾಚಾರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯನ್ನು ದುಷ್ಕರ್ಮಿಗಳು ಸೋಮವಾರ ಬೆಳಗ್ಗೆ ಬಿಳಿ ಬಣ್ಣದ ಕಾರಿನಲ್ಲಿ ಅಪಹರಿಸಿದ್ದಾರೆ.[ಪ್ರೀತಿ ನಿರಾಕರಿಸಿದವಳಿಗೆ ಚೂರಿ ಹಾಕಿದ ಭಗ್ನ ಪ್ರೇಮಿ]

Gurgaon: Girl kidnapped in broad daylight, rescued within hours

ಯುವತಿಯು ಕಾಲೇಜಿನಲ್ಲಿ ನಡೆಯುತ್ತಿದ್ದ ಸೆಮಿಸ್ಟರ್ ಪರೀಕ್ಷೆಯನ್ನು ಮುಗಿಸಿ ಹೊರ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 9.15ಕ್ಕೆ ಗುರ್ ಗಾಂವ್ ಪೊಲೀಸರಿಗೆ ಮಾಹಿತಿ ದೊರೆತಿದೆ.

ಬೆಳಿಗ್ಗೆ 10.15ರ ವೇಳೆಗೆ ಗುರ್ ಗಾಂವ್ ಪೊಲೀಸರು ಯುವತಿಯ ಹುಡುಕಾಟಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಆಗ ಅಪಹರಣ ಸಂದರ್ಭದಲ್ಲಿ ಆಕೆ ಹಳದಿ ಬಣ್ಣದ ವಸ್ತ್ರ ಧರಿಸಿದ್ದಳು ಎಂದು ತಿಳಿದು ಬಂದಿದೆ.[ಬಯಲಾಯ್ತು ಹುಬ್ಬಳ್ಳಿ ಪ್ರಿನ್ಸಿಪಾಲರ ವಿಕೃತ ಕಾಮುಕತನ]

ತಕ್ಷಣ ವಿಶೇಷ ತಂಡದೊಂದಿಗೆ ಕಾರ್ಯಪ್ರವೃತ್ತರಾದ ಗುರ್ ಗಾಂವ್ ಪೊಲೀಸರು ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಈ ಘಟನೆ ಸಂಬಂಧ ಪ್ರತ್ಯಕ್ಷದರ್ಶಿಗಳು ಗುರುತಿಸಿದ ಮೂವರನ್ನು ಹುಡುಕಲು ಈಗಾಗಲೇ ಪೊಲೀಸ್ ತಂಡ ತಯಾರಾಗಿದ್ದು, ಆದಷ್ಟು ಬೇಗ ಅಪಹರಣಕಾರರನ್ನು ಬಂಧಿಸಲಾಗುವುದು ಎಂದು ಗುರ್ ಗಾಂವ್ ಪೊಲೀಸ್ ಕಮೀಷನರ್ ನವದೀಪ್ ವೈರ್ಕ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a broad daylight abduction, a 19-year-old girl was forced inside a car right outside her college gate in Gurgaon on Monday morning.She is student of Dronacharya Government College, Gurgaon, New delhi. The whole incident was captured in CCTV camera
Please Wait while comments are loading...