ಸಿಬಿಐ ನೂತನ ನಿರ್ದೇಶಕರಾಗಿ ರಾಕೇಶ್ ಅಸ್ಥನಾ ಅಧಿಕಾರ ಸ್ವೀಕಾರ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್,2: ಸಿಬಿಐ ನಿರ್ದೇಶಕ ಅನಿಲ್ ಕುಮಾರ್ ಸಿನ್ಹಾ ಅವರು ಶುಕ್ರವಾರ ನಿವೃತ್ತಿಯಾಗಿದ್ದು, ಅವರ ಸ್ಥಾನಕ್ಕೆ ಗುಜರಾತ್ ಕೇಡಾರ್ ನ 1984 ಬ್ಯಾಚ್ ನ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥನಾ ಅವರು ಸಿಬಿಐ ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಆದರೆ ಕೇಂದ್ರ ಸರ್ಕಾರ ಕೇಂದ್ರಿಯ ತನಿಖಾ ತಂಡ( ಸಿಬಿಐ)ಗೆ ಪುರ್ಣಾವಧಿ ಮುಖ್ಯಸ್ಥರಾಗಿ ಇದುವರೆಗೆ ಯಾವುದೇ ಮುಖ್ಯಸ್ಥರ ಹೆಸರನ್ನು ಸೂಚಿಸಿಲ್ಲ.

Gujarat cadre IPS officer Rakesh Asthana takes charge as CBI chief

ರಾಕೇಶ್ ಅವರು 1984ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, ಸಿಬಿಐನಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಿಬಿಐ ನಿರ್ದೇಶಕರ ರೇಸ್ ನಲ್ಲಿ ಇದ್ದ ಸಿಬಿಐ ವಿಶೇಷ ನಿರ್ದೇಶಕ ಆರ್.ಕೆ ದತ್ತಾ ಅವರು ಇತ್ತೀಚೆಗಷ್ಟೇ ಗೃಹಸಚಿವಾಲಯದ ವಿಶೇಷ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಪ್ರಧಾನ ಮಂತ್ರಿ, ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷ ನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ ಅವರ ಸಮಿತಿಯು ಸಿಬಿಐ ನಿರ್ದೇಶಕರನ್ನು ನೇಮಕ ಮಾಡುತ್ತದೆ.

ಅಸ್ಥನಾ ಅವರು ಅಧಿಕಾರ ವಹಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.

ನಿವೃತ್ತಿಯಾಗಿರುವ ಸಿನ್ಹಾ ಅವರು ಶೀನಾ ಬೋರಾ ಕೊಲೆ ಪ್ರಕರಣ, ಉದ್ಯಮಿ ವಿಜಯ್ ಮಲ್ಯ ವಂಚನೆಯಂತಹ ಪ್ರಕರಣಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
CBI Director Anil Sinha retired on Friday handing over the baton to his second-in-command Rakesh Asthana, as the government did not name any full-time chief.
Please Wait while comments are loading...