• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲಿನ ಜಿಎಸ್‌ಟಿ ಇಳಿಕೆ

|

ನವದೆಹಲಿ, ಜುಲೈ 27: ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.5ಕ್ಕೆ ಕಡಿತಗೊಳಿಸಲಾಗಿದೆ.

ಹಾಗೂ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ನಲ್ಲಿರುವ ಇವಿಎಸ್‌ ಮೇಲೆ ಶೇ. 18ರಿಂದ ಶೇ.5ಕ್ಕೆ ಜಿಎಸ್‌ಟಿ ಇಳಿಸಲಾಗಿದೆ.ಈ ಹೊಸ ಜಿಎಸ್‌ಟಿಯು ಆಗಸ್ಟ್‌ 1 ರಿಂದ ಜಾರಿಗೆ ಬರಲಿದೆ. 36ನೇ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯ ತಿಳಿಸಿದ್ದಾರೆ.

ಸಭೆಯಲ್ಲಿ ಸಚಿವ ಅನುರಾಗ್ ಠಾಕೂರ್, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹಾಗೂ ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸರಕು ಮತ್ತು ಸಾಗಾಣಿಕೆ ಮೇಲಿನ ಜಿಎಸ್‌ಟಿ ಕೂಡ ಬದಲಾವಣೆಯಾಗಿದೆ.

ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಶೇ.12ರಿಂದ ಶೇ.5ಕ್ಕೆ ಇಳಿಕೆಯಾಗಿದೆ.12 ಜನರನ್ನು ಕರೆದೊಯ್ಯಬಲ್ಲ ಎಲೆಕ್ಟ್ರಿಕ್ ಬಸ್‌ಗಳಿಗೆ ತೆರಿಗೆ ರಿಯಾಯಿತಿ ನೀಡಲಾಗಿದೆ.

ಇಂಟಿಮೇಷನ್ ಜಿಎಸ್‌ಟಿ ಸಿಎಂಪಿ-02 ಫಾರ್ಮ್ ಸಲ್ಲಿಸಲು ಸೆಪ್ಟೆಂಬರ್ 30 ಅಂತಿಮ ದಿನಾಂಕವಾಗಿದೆ. ಫಾರ್ಮ್ ಜಿಎಸ್‌ಟಿ ಸಿಎಂಪಿ-08 ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ.

English summary
Gst council took a decision to vutidown tax on E-Vehicles, GST rate on all Electric Vehicles reduced from 12percent to 5percent and of charger or charging stations for EVs from 18percent to 5percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X