ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲು ಕ್ಷೇತ್ರದಲ್ಲಿ ಬದಲಾವಣೆ: ವಾಣಿಜ್ಯ ಗಣಿಗಾರಿಕೆಗೆ ಅನುಮತಿ

|
Google Oneindia Kannada News

ನವ ದೆಹಲಿ, ಮೇ 16: ''ಕಲ್ಲಿದ್ದಲು ಕ್ಷೇತ್ರದಲ್ಲಿನ ಸರಕಾರ ಏಕಸ್ವಾಮ್ಯವನ್ನು ತೆಗೆದು ಹಾಕಿ, ವಾಣಿಜ್ಯ ಉದ್ದೇಶದ ಕಲ್ಲಿದ್ದಲು ಗಣಿಗಾರಿಕೆ ಜಾರಿಗೆ ತರಲು ನಿರ್ಧಾರ ಮಾಡಿದೆ'' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸರ್ಕಾರ ಕಲ್ಲಿದ್ದಲು ಕ್ಷೇತ್ರದ ಸಾಗಣೆಯ ಮೂಲ ಸೌಕರ್ಯಕ್ಕೆ 50,000 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಕಲ್ಲಿದ್ದಲು ಆಮದು ಪ್ರಮಾಣವನ್ನು ಕಡಿಮೆ ಮಾಡಿ, ದೇಶದಲ್ಲಿಯೇ ಉತ್ಪಾದನೆ ಮಾಡಲು ಹೆಚ್ಚಿನ ಒತ್ತು ನೀಡಲಾಗಿದೆ. ಮುಕ್ತ ಮತ್ತು ಪಾರದರ್ಶಕ ವ್ಯವಸ್ಥೆಯಲ್ಲಿ 500 ಗಣಿ ಬ್ಲಾಕ್‌ಗಳ ಹರಾಜು ಮಾಡಲಾಗುವುದು ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.

<br>20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: 4ನೇ ಕಂತಿನ ಪ್ರಮುಖ ಘೋಷಣೆಗಳು
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: 4ನೇ ಕಂತಿನ ಪ್ರಮುಖ ಘೋಷಣೆಗಳು

"ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸರ್ಕಾರದ ಏಕಸ್ವಾಮ್ಯವನ್ನು ತೆಗೆದುಹಾಕಲಾಗುತ್ತಿದೆ. ಪ್ರತಿ ಟನ್‌ಗೆ ನಿಗದಿತ ರೂಪಾಯಿ ಆಡಳಿತದ ಬದಲು ಆದಾಯ ಹಂಚಿಕೆ ಕಾರ್ಯ ವಿಧಾನವನ್ನು ಆಧರಿಸಿ ಇದನ್ನು ಮಾಡಲಾಗುತ್ತದೆ. ಯಾರೂ ಬೇಕಾದರೂ ಕಲ್ಲಿದ್ದಲು ನಿರ್ಬಂಧಕ್ಕೆ ಬಿಡ್ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Govt To Allow Private Sector Participation In Coal Sector

"ನಾವು ಇನ್ನೂ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ಈ ದೇಶದಲ್ಲಿ ಹೇರಳವಾದ ಕಲ್ಲಿದ್ದಲು ಇದೆ. ಹೀಗಾಗಿ, ಕಲ್ಲಿದ್ದಲು ಆಮದು ಇಳಿಕೆ ಮಾಡಿ, ಉತ್ಪಾದನೆಯಲ್ಲಿ ಸ್ವಾವಲಂಬನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ." ಎಂದು ಅವರು ಹೇಳಿದರು.

ಇಂದು ಆರ್ಥಿಕ ಪ್ಯಾಕೇಜ್ ನಾಲ್ಕನೇ ಹಂತವನ್ನು ನಿರ್ಮಲಾ ಸೀತಾರಾಮನ್ ವಿವರಿಸಿದರು. ಪ್ರಮುಖವಾಗಿ ಕಲ್ಲಿದ್ದಲು, ನಾಗರಿಕ ವಿಮಾನಯಾನ, ಪರಮಾಣು ಶಕ್ತಿ, ವಿದ್ಯುತ್‌ ಸರಬರಾಜು ಕಂಪನಿಗಳು, ಬಾಹ್ಯಾಕಾಶ, ರಕ್ಷಣೆ ಹಾಗೂ ಖನಿಜಗಳ ಕ್ಷೇತ್ರಗಳ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

English summary
Finance Minister Nirmala Sitharaman on Saturday said that the government would allow commercial mining of coal on revenue sharing basis to remove govt monopoly
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X