ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಶೋಧನಾ ಯುವವಿಜ್ಞಾನಿಗಳಿಗೆ ಅಬ್ದುಲ್ ಕಲಾಂ ಫೆಲೋಶಿಪ್

By Vanitha
|
Google Oneindia Kannada News

ನವದೆಹಲಿ, ಅಕ್ಟೋಬರ್, 16 : ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಪಿ.ಎಚ್ ಡಿ ನಂತರ ಹೆಚ್ಚಿನ ಸಂಶೋಧನೆ ಕೈಗೊಳ್ಳುವ ಯುವ ವಿಜ್ಞಾನಿಗಳಿಗೆ ಫೆಲೋಶಿಪ್ ನೀಡುವುದಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಅಕ್ಟೋಬರ್ 16ರ ಶುಕ್ರವಾರ ಘೋಷಿಸಿದೆ.

ಅಬ್ದುಲ್ ಕಲಾಂ ಫೆಲೋಶಿಪ್ ಪಡೆಯುವ ಯುವ ವಿಜ್ಞಾನಿಗಳು ಪಿಚ್ ಡಿಯಲ್ಲಿ ಪರಿಸರ ವಿಷಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡಿರಬೇಕು. 35 ವರ್ಷದೊಳಗಿರಬೇಕು ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.[ಬಾಣಸಿಗನ ನೆನಪಿನ ಹದದಲ್ಲಿ ಕಲಾಂ ಜೀವನ ರಸಾಯನ]

Govt announces post-doctoral research fellowship in APJ Abdul Kalam's name

ಈ ಫೆಲೋಶಿಪ್ ನ್ನು ಮೂರು ವರ್ಷಗಳವರೆಗೆ ನೀಡಲಿದ್ದು, ಇದು ತಿಂಗಳಿಗೊಮ್ಮೆ ಸಂಶೋಧನಾ ವಿಜ್ಞಾನಿಗಳ ಕೈ ಸೇರಲಿದೆ. ಒಟ್ಟಿನಲ್ಲಿ ಒಂದು ವರ್ಷಕ್ಕೆ 1.5 ಲಕ್ಷ ಹಣವನ್ನು ನೀಡಲಾಗುತ್ತದೆ. ಸಂಶೋಧನಾರ್ಥಿಗಳನ್ನು ಕೌನ್ಸಿಲ್ ಆಫ್ ಸೈಂಟಿವಿಕ್ ಆಂಡ್ ಇಂಡಸ್ಟ್ರೀಯಲ್ ರಿಸರ್ಚ್(CSIR)ಅಧಿಕಾರಿಯಾದ ಆರ್ ಎ ಮಶೇಲ್ ಕಾರ್ ಆಯ್ಕೆ ಮಾಡಲಿದ್ದಾರೆ.[ಕಲಾಂ ಆಡಿದ ಕೊನೆ ಘಳಿಗೆಯ ಮಾತುಗಳೇನು?]

'ರಾಷ್ಟ್ರೀಯ ಪರಿಸರ ವಿಜ್ಞಾನ ಕಾರ್ಯಕ್ರಮವನ್ನು ಗುರಿಯಾಗಿರಿಸಿಕೊಂಡು ಅಬ್ದುಲ್ ಕಲಾಂ ಹೆಸರಿನ ಫೆಲೋಶಿಪ್ ನೀಡಲಾಗುತ್ತಿದೆ. ಪರಿಸರದ ವಿಭಿನ್ನ ಕ್ಷೇತ್ರಗಳಲ್ಲಿ ವಿಶೇಷ ಅಧ್ಯಯನ ಕೈಗೊಳ್ಳುವ ಯುವವಿಜ್ಞಾನಿಗಳು ಭಾಜನರಾಗಲಿದ್ದಾರೆ' ಎಂದು ಸಿಎಸ್ ಐಆರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
The Union environment, forests and climate change ministry has announced launching of post-doctoral research fellowships for young scientists in the name of India's former President Dr A P J Abdul Kalam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X