ತಿಂಗಳ ನಗದು ವ್ಯವಹಾರ ಮಿತಿ 3ರಿಂದ 2 ಲಕ್ಷಕ್ಕೆ ಇಳಿಸಲು ಪ್ರಸ್ತಾವ

ನಗದುರಹಿತ ವ್ಯವಹಾರಗಳನ್ನು ಉತ್ತೇಜಿಸುವ ಕಾರಣಕ್ಕೆ ಕೇಂದ್ರ ಸರಕಾರ ಬಜೆಟ್ ವೇಳೆ, ತಿಂಗಳ ನಗದು ವ್ಯವಹಾರಕ್ಕೆ 3 ಲಕ್ಷದ ಮಿತಿ ವಿಧಿಸಿತ್ತು. ಆದರೆ ಮಾರ್ಚ್ 21ರಂದು ಮಸೂದೆಯಲ್ಲಿ ಆ ಮಿತಿಯನ್ನು 2 ಲಕ್ಷಕ್ಕೆ ಇಳಿಸುವ ಪ್ರಸ್ತಾವನೆ ಮಾಡಿದೆ

ನವದೆಹಲಿ, ಮಾರ್ಚ್ 21: ಯಾವುದೇ ನಗದು ವ್ಯವಹಾರಕ್ಕೆ 2 ಲಕ್ಷ ರುಪಾಯಿ ಮಿತಿ ವಿಧಿಸಲು ಕೇಂದ್ರ ಸರಕಾರ ಮಂಗಳವಾರ ಪ್ರಸ್ತಾವ ಸಲ್ಲಿಸಿದೆ. ಆರ್ಥಿಕ ಮಸೂದೆಯನ್ನು ಲೋಕಸಭೆಯಲ್ಲಿ ಸಲ್ಲಿಸುವಾಗ ಈ ಪ್ರಸ್ತಾವನೆ ಮಾಡಲಾಗಿದೆ. ಈ ಮಸೂದೆ ಅಂಗೀಕಾರವಾದರೆ ತಿಂಗಳಿಗೆ 2 ಲಕ್ಷ ರುಪಾಯಿ ಮೇಲ್ಪಟ್ಟ ನಗದು ವ್ಯವಹಾರಕ್ಕೆ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.

ಈ ಸಾಲಿನ ಕೇಂದ್ರ ಬಜೆಟ್ ಮಂಡನೆ ವೇಳೆ ಪ್ರತಿ ತಿಂಗಳ ನಗದು ಮಿತಿಯನ್ನು 3 ಲಕ್ಷಕ್ಕೆ ವಿಧಿಸಲು ಪ್ರಸ್ತಾವಿಸಲಾಗಿತ್ತು. ಎಲ್ಲ ಬ್ಯಾಂಕ್ ಗಳು ಸ್ಸಹ 3 ಲಕ್ಷದ ಮೇಲಿನ ನಗದು ವ್ಯವಹಾರಕ್ಕೆ ಸೇವಾ ಶುಲ್ಕ ವಿಧಿಸಲು ಆರಂಭಿಸಿದ್ದವು. ಆದರೆ ಇದೀಗ ಹೊಸ ಪ್ರಸ್ತಾವನೆ ಪ್ರಕಾರ ನಗದು ವ್ಯವಹಾರದ ತಿಂಗಳ ಮಿತಿಯು 2 ಲಕ್ಷಕ್ಕೆ ಇಳಿಯಲಿದೆ.[ಭಾರತದಲ್ಲಿ 101 ಶತಕೋಟಿ ಸಿರಿವಂತರು; ಅಗ್ರಸ್ಥಾನದಲ್ಲಿ ಅಂಬಾನಿ]

Government proposes to cap cash transactions at Rs 2 lakh instead of Rs 3 lakh

ನಗದುರಹಿತ ವ್ಯವಹಾರವನ್ನು ಪ್ರೋತ್ಸಾಹಿಸುವ ಕಾರಣಕ್ಕೆ ಕೇಂದ್ರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಕೊಂಡರು. ಈ ರೀತಿ ಸೇವಾ ಶುಲ್ಕ ವಿಧಿಸುವ ತೀರ್ಮಾನಕ್ಕೆ ಜನ ಸಾಮಾನ್ಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನವೆಂಬರ್ 8, 2016ರಂದು ನೋಟು ನಿಷೇಧ ಘೋಷಣೆ ಮಾಡಿದ ನಂತರ ನಗದುರಹಿತ ವ್ಯವಹಾರಗಳ ಪ್ರೋತ್ಸಾಹಕ್ಕೆ ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+