ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸಲ್ಮಾನರ ನೆರವಿಗೆ ಬಂತು ಉರ್ದು ಮೊಬೈಲ್!

By Srinath
|
Google Oneindia Kannada News

Google Nokia to promote urdu mobile phones for muslims- Congress minister Kapil Sibal
ನವದೆಹಲಿ, ಸೆ.16: ಲೋಕಸಭೆ ಚುನಾವಣೆಗಳು ಸನಿಹದಲ್ಲೇ ಇದೆ. ಓಲೈಕೆ ರಾಜಕಾರಣ ಜೋರಾಗಿಯೇ ರಿಂಗಣಿಸುತ್ತಿದೆ. ಉರ್ದು ಭಾಷಿಕ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವ ಯುಪಿಎ ಸರ್ಕಾರ ಈಗ ಮೊಬೈಲ್‌ ಮೂಲಕ ಮುಸಲ್ಮಾನರನ್ನು ಓಲೈಸಲು ಹೊರಟಿದೆ.

ಉರ್ದು ಭಾಷೆ ಆಧಾರಿತ ಮೊಬೈಲುಗ‌ಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಸರಕಾರವು ವಿಶೇಷವಾಗಿ ನೋಕಿಯಾ ಕಂಪನಿ ಜತೆ 'ಕೈ'ಜೋಡಿಸಿದೆ. ನೋಕಿಯಾ ಕಂಪನಿಗೆ ಇಂತಹ Idea ಕೊಟ್ಟಿರುವುದು ತಾನೇ ಎಂದೂ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರ ಹೇಳಿಕೊಂಡಿದೆ.

ಕೇಂದ್ರ ದೂರಸಂಪರ್ಕ ಖಾತೆ ಸಚಿವ ಕಪಿಲ್‌ ಸಿಬಲ್‌ ಈ ಮೊಬೈಲ್‌ ಅನ್ನು ಕಳೆದ ವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಆ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ 15 ಕೋಟಿ ಉರ್ದು ಭಾಷಿಕರಿದ್ದಾರೆ. ಅವರಿಗಾಗಿಯೇ ವಿಶೇಷವಾದ ಮೊಬೈಲ್‌ ಸಿದ್ಧಪಡಿಸಿ ಎಂದು ನೋಕಿಯಾಗೆ ಸಲಹೆ ನೀಡಿದ್ದೆ. ಅದರಂತೆ ಅಲ್ಪಾವಧಿಯಲ್ಲಿ ಈ ಮೊಬೈಲ್‌ ಸಿದ್ಧಪಡಿಸಿದೆ. ಇದು ಉರ್ದು ಭಾಷಿಕರಿಗೆ ನೆರವಾಗಲಿದೆ' ಎಂದು ಸಂತಸ ಹಂಚಿಕೊಂಡರು.

ಜತೆಗೆ Google ಕಂಪನಿಯೂ ಉರ್ದು ಭಾಷೆ ಅಭಿವೃದ್ಧಿಗೆ ಮುಂದಾಗಬೇಕು ಎಂದೂ ಅವರು ಇದೇ ಸಂದರ್ಭದಲ್ಲಿ ಕೋರಿದ್ದಾರೆ. ಕರ್ನಾಟಕ, ಆಂಧ್ರ, ಮಧ್ಯ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಈ ಮೊಬೈಲ್ ಲಭ್ಯವಿದೆ.

ಕೇಂದ್ರ ಸರ್ಕಾರ ಚುನಾವಣೆಗೂ ಮುನ್ನ ದೇಶದ ಬಡ ಜನರಿಗೆ ಉಚಿತವಾಗಿ ಮೊಬೈಲ್‌ ನೀಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿಯ ಬೆನ್ನಿಗೆ ಗುದ್ದುಕೊಂಡುವಂತೆ ಮೊಬೈಲ್‌ ಮಾರುಕಟ್ಟೆಗೆ ಬಿಡುಗಡೆಯಾಗಿರುವುದು ಕುತೂಹಲ ಕೆರಳಿಸಿದೆ.

English summary
Google Nokia to promote urdu mobile phones for muslims- Congress minister Kapil Sibal. Finnish handset maker Nokia today unveiled its first mobile phone in India built primarily to target about 15 crore Urdu speaking population in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X