
ನಿಮ್ಮ ಫೋನಿನಲ್ಲೂ ಆಧಾರ್ ಟೋಲ್ ಫ್ರಿ ನಂಬರ್ ಸೇವ್ ಆಗಿದ್ಯಾ?
ನವದೆಹಲಿ, ಆಗಸ್ಟ್ 04: ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ)ದ ಟೊಲ್ ಫ್ರಿ ನಂಬರ್ ಸಾವಿರಾರು android ಮೊಬೈಲ್ ಗ್ರಾಹಕರ ಫೋನ್ ಗಳಲ್ಲಿ ಸೇವ್ ಆಗಿ ಗೊಂದಲ ಸೃಷ್ಟಿಸಿದೆ. ಈ ಟೋಲ್ ಫ್ರೀ ಸಂಖ್ಯೆ ಡೀಫಾಲ್ಟ್ ಆಗಿ android ಮೊಬೈಲ್ ಗಳಲ್ಲಿ ಸೇವ್ ಆಗಿದ್ದು, ಇದು 2014 ರ UIDAI ಟೋಲ್ ಫ್ರೀ ಸಂಖ್ಯೆಯಾಗಿದೆ.
ಟ್ವಿಟ್ಟರ್ ನಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗಿಲ್ಲ : ಟ್ರಾಯ್
ಈ ಕುರಿತು ಸಾವಿರಾರು ಗ್ರಾಹಕರು ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಯಾಗಿ ಬಳಸಿಕೊಂಡು ದೂರು ಮಾಡಿದ್ದರಿಂದ ಎಚ್ಚೆತ್ತುಕೊಂಡ ಗೂಗಲ್ ತನ್ನ ತಪ್ಪನ್ನು ಒಪ್ಪಿಕೊಂಡಿದೆ.
— Google India (@GoogleIndia) August 3, 2018
'ಇದು ಕೆಲವು ತಾಂತ್ರಿಕ ದೋಷದಿಂದ ಉದ್ಭವಿಸಿದ ಸಮಸ್ಯೆಯಾಗಿದ್ದು, ಇದರಿಂದ ಯಾವುದೇ ಗ್ರಾಹಕರ ಮೊಬೈಲ್ ಡಿವೈಸ್ ಮೂಲಕ ಅವರ ಖಾಸಗಿ ಮಾಹಿತಿಗಳು ಸೋರಿಕೆಯಾಗುವುದಿಲ್ಲ. ಆತಂಕ ಪಡುವ ಅಗತ್ಯವಿಲ್ಲ' ಎಂದು ಗೂಗಲ್ ಇಂಡಿಯಾ ಟ್ವೀಟ್ ಮಾಡಿದೆ.
ಗ್ರಾಹಕರು ತಮ್ಮ ಫೊನಿನಲ್ಲಿ ಡೀಪಾಲ್ಟ್ ಆಗಿ ಸೇವ್ ಆದ ಈ ನಂಬರ್ ಅನ್ನು ಡಿಲೀಟ್ ಮಾಡಿಕೊಳ್ಳಬಹುದು. ನಮ್ಮಿಂದ ಆದ ಈ ತೊಂದರೆಗೆ ಕ್ಷಮೆ ಯಾಚಿಸುತ್ತೇವೆ ಎಂದು ಗೂಗಲ್ ಟ್ವೀಟ್ ಮಾಡಿದೆ.