ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ​ನಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗಿಲ್ಲ : ಟ್ರಾಯ್

By Mahesh
|
Google Oneindia Kannada News

ಬೆಂಗಳೂರು, ಜುಲೈ 30: ಟೆಲಿಕಾಂ ನಿಯಂತ್ರಕ (ಟ್ರಾಯ್) ಮುಖ್ಯಸ್ಥ ಆರ್.ಎಸ್. ಶರ್ಮಾ ಅವರು ಟ್ವಿಟ್ಟರ್ ನಲ್ಲಿ ಹಾಕಿದ ಹ್ಯಾಕಿಂಗ್ ಸವಾಲಿನ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ. ಶರ್ಮಾ ಅವರು ಆಧಾರ್ ಸಂಖ್ಯೆ ನೀಡಿ, ಮಾಹಿತಿ ಹ್ಯಾಕ್ ಮಾಡುವಂತೆ ಬಹಿರಂಗ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಸಂಶೋಧಕ ಎಲ್ಲಿಯೊಟ್ ಆಲ್ಡೆರ್ಸನ್ ಅವರು ಮಾಹಿತಿ ಬಹಿರಂಗಪಡಿಸಿದ್ದರು. ಮುಂದೇನಾಯ್ತು?. . .

ಟ್ವಿಟ್ಟರ್ ​ನಲ್ಲಿ ಆಧಾರ್ ಸವಾಲು ಟ್ರೆಂಡಿಂಗ್ ಆಗುತ್ತಿದ್ದಂತೆ ಈ ಕುರಿತಂತೆ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಖಾಸಗಿ ಮಾಹಿತಿ ಸೋರಿಕೆ ಬಗ್ಗೆ ಸ್ಪಷ್ಟನೆ ನೀಡಿದೆ. ಟ್ರಾಯ್ ಮುಖ್ಯಸ್ಥ ಆರ್.ಎಸ್. ಶರ್ಮಾ ಅವರ ಆಧಾರ್ ಸಂಖ್ಯೆ ಬಳಸಿ ಟ್ವಿಟ್ಟರ್ ​ನಲ್ಲಿ ಹಾಕಲಾಗಿರುವ ಅವರ ಕೆಲವು ವೈಯಕ್ತಿಕ ಮಾಹಿತಿಗಳು ಆಧಾರ್ ಡೇಟಾಬೇಸ್​ನಿಂದ ತೆಗೆದಿರುವುದಲ್ಲ. ನಮ್ಮ ಸರ್ವರ್​ಗಳು ಹ್ಯಾಕ್ ಆಗಿಲ್ಲ. ಸರ್ಕಾರಿ ಅಧಿಕಾರಿಯಾಗಿರುವ ಶರ್ಮಾ ಅವರ ಬಗ್ಗೆ ಈಗಾಗಲೇ ಕೆಲವು ವೆಬ್​ಸೈಟ್​ಗಳಲ್ಲಿರುವ ಅಲ್ಪಸ್ವಲ್ಪ ವೈಯಕ್ತಿಕ ಮಾಹಿತಿ ಸುಲಭವಾಗಿ ಸಿಗುತ್ತದೆ, ಇದನ್ನು ಹ್ಯಾಕ್ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಪ್ರಕಟಣೆ ಹೊರಡಿಸಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಖ್ಯಸ್ಥ ಆರ್.ಎಸ್. ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಆಧಾರ್ ಸಂಖ್ಯೆ ಬಹಿರಂಗಗೊಳಿಸಿ, ಇದರಿಂದ ತನಗೆ ಯಾವ ತೊಂದರೆ ನೀಡಲು ಸಾಧ್ಯವಿದೆ ಎಂದು ಟ್ವಿಟ್ ಲೋಕದಲ್ಲಿ ಸವಾಲು ಹಾಕಿದ್ದರು. ಒಂದು ವೇಳೆ ತನ್ನ ಆಧಾರ್ ಮಾಹಿತಿ ಹ್ಯಾಕ್ ಮಾಡಿ ಟ್ವೀಟ್​ನಲ್ಲಿ ಹಾಕಿದರೂ ಅಂಥವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದ್ದರು.

ಎಲ್ಲಿಯೊಟ್ ಆಲ್ಡೆರ್ಸನ್ ಅವರಿಂದ ಹ್ಯ್

ಎಲ್ಲಿಯೊಟ್ ಆಲ್ಡೆರ್ಸನ್ ಅವರಿಂದ ಹ್ಯ್

ಫ್ರೆಂಚ್ ಹ್ಯಾಕರ್ ರಾಬರ್ಟ್ ಬಾಪ್ಟಿಸ್ಟ್ ಅವರು ಎಲ್ಲಿಯೊಟ್ ಆಲ್ಡೆರ್ಸನ್ ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದು, ಭದ್ರತಾ ಸಂಶೋಧಕರಾಗಿ ಈ ಹ್ಯಾಕಿಂಗ್ ಸವಾಲನ್ನು ಸ್ವೀಕರಿಸಿದರು. ಆರ್.ಎಸ್. ಶರ್ಮಾ ಟ್ವೀಟ್ ಗೆ ಪ್ರತಿಕ್ರಿಯಿಸಿ, ಅವರಿಗೆ ಸಂಬಂಧಿತ ಹಲವು ವೈಯಕ್ತಿಕ ಮಾಹಿತಿಗಳನ್ನು ಹಾಕಿದ್ದರು.

ಆಧಾರ್ ಸಂಸ್ಥೆಯಿಂದ ಪ್ರತಿಕ್ರಿಯೆ

ಆಧಾರ್ ಸಂಸ್ಥೆಯಿಂದ ಪ್ರತಿಕ್ರಿಯೆ

ಆಧಾರ್ ಸಂಖ್ಯೆ ಸಿಕ್ಕರೆ ವ್ಯಕ್ತಿಯ ಪ್ಯಾನ್, ಬ್ಯಾಂಕ್ ಖಾತೆ ಸಂಖ್ಯೆ, ಖಾಸಗಿ ಫೋನ್ ನಂಬರ್, ಜನ್ಮದಿನಾಂಕದಂಥ ಹಲವು ವೈಯಕ್ತಿಕ ಮಾಹಿತಿಗಳನ್ನು ಹ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ. ಆದರೆ, ಇದೆಲ್ಲವೂ ತಪ್ಪು ಮಾಹಿತಿ, ಶರ್ಮಾ ಅವರ ಹಳೆ ಮನೆ ವಿಳಾಸ ಎಂದು ಆಧಾರ್ ಸಂಸ್ಥೆ ಹೇಳಿದೆ.

ಭದ್ರತೆ ಬಗ್ಗೆ ಅಷ್ಟು ನಂಬಿಕೆ ಇದ್ದರೆ, ಮಾಹಿತಿ ಕೊಡಿ

13 ಸ್ತರದ ಭದ್ರತೆ ಬಗ್ಗೆ ಅಷ್ಟು ನಂಬಿಕೆ ಇದ್ದರೆ, ನಿಮ್ಮ ಆಧಾರ್ ವಿವರಗಳನ್ನು ಬಹಿರಂಗಪಡಿಸಿ ಎಂದು ಸವಾಲು

ಎಲ್ಲಿಯೋಟ್ ಅಲ್ಡರ್ಸನ್ ಅವರಿಂದ ಮಾಹಿತಿ

ಎಲ್ಲಿಯೋಟ್ ಅಲ್ಡರ್ಸನ್ ಅವರಿಂದ ಮಾಹಿತಿ ಬಹಿರಂಗ, ಶರ್ಮಾ ಅವರ ಆಧಾರ್ ಜತೆ ಜೋಡಣೆಯಾಗಿರುವ ಫೋನ್ ನಂಬರ್ ಇದೆ ಎಂದು ತಿಳಿಸಿದ ಅಲ್ಡರ್ಸನ್.

ಆಧಾರ್ ಸಂಖ್ಯೆ ಸವಾಲಿಗೆ ಇಲ್ಲಿದೆ ಉತ್ತರ

ರಾಮ್ ಸೇವಕ್ ಶರ್ಮ ಅವರೇ, ನಿಮ್ಮ ಆಧಾರ್ ಸಂಖ್ಯೆ ಬಹಿರಂಗಪಡಿಸುವ ಮೂಲಕ ನೀವು ನೀಡಿದ ಸವಾಲಿನಂತೆ, ನಿಮ್ಮ ಮಾಹಿತಿ ಬಹಿರಂಗಪಡಿಸುತ್ತಿದ್ದೇನೆ. ನಿಮ್ಮ ಬದಲಿ ಮೊಬೈಲ್ ಸಂಖ್ಯೆ, ವಿಳಾಸ ಎಲ್ಲವೂ ಇಲ್ಲಿದೆ. ಇಷ್ಟು ಸಾಕು

English summary
The UIDAI asserted that the personal details of Trai chief R S Sharma being put out on Twitter are not from the Aadhaar database or its servers, and that "so called hacked information" is easily available with a simple search on Google and other sites, without using the 12-digit unique identity number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X