ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ: ಆಭರಣ ಪ್ರಿಯರು ಕಂಗಾಲು
ನವದೆಹಲಿ, ಜುಲೈ 19: ಆಷಾಢದಲ್ಲಿಯೂ ಹಳದಿ ಲೋಹ ದುಬಾರಿಯಾಗುವುದು ಮುಂದುವರಿದಿದೆ. ಆಭರಣ ಪ್ರಿಯರ ಪಾಲಿಗೆ ಚಿನ್ನ ಜೇಬಿಗೆ ಮತ್ತಷ್ಟು ಕತ್ತರಿ ಹಾಕುವ ತಲೆನೋವಾಗಿ ಪರಿಣಮಿಸಿದೆ. ಚಿನ್ನ ಮತ್ತು ಬೆಳ್ಳಿಗಳೆರಡರ ದರದಲ್ಲಿಯೂ ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಚಿನ್ನ ಬೆಳ್ಳಿಯು ದುಬಾರಿಯಾಗುತ್ತಿರುವುದು ದೇಶಿ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಆಷಾಢ ಮುಗಿಡ ಬಳಿಕ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯಲಿವೆ. ಈ ಸಂದರ್ಭಕ್ಕೆ ಆಭರಣ ಖರೀದಿಯ ಉತ್ಸಾಹದಲ್ಲಿರುವ ಜನರನ್ನು ಬೆಲೆ ಏರಿಕೆ ಕಂಗಾಲಾಗಿಸಿದೆ.
ದೇಶದ ಪ್ರಮುಖ ಮಹಾನಗರಗಳಲ್ಲಿ ಚಿನ್ನವು 10 ಗ್ರಾಂಗೆ 300 ರೂ.ನಂತೆ ಏರಿಕೆಯಾಗಿದೆ. ಚಿನ್ನಾಭರಣಕ್ಕೆ ವರ್ತಕರಿಂದ ಬೇಡಿಕೆ ಹೆಚ್ಚುತ್ತಿದೆ. ಅದರ ಜತೆಯಲ್ಲಿಯೇ ಬೆಲೆಯೂ ಮೇಲ್ಮುಖವಾಗಿ ಸಾಗುತ್ತಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 35,252 ರೂಪಾಯಿಗೆ ಮುಟ್ಟಿದ್ದರೆ, ಮುಂಬೈನಲ್ಲಿ 35,057 ರೂ. ತಲುಪಿದೆ. ದೆಹಲಿಯಲ್ಲಿ ದರ ಇನ್ನಷ್ಟು ಹೆಚ್ಚಳವಾಗಿದ್ದು, 35,950 ರೂ.ಗೆ ಹೆಚ್ಚಳ ಕಂಡಿದೆ.
ಬೆಳ್ಳಿ ದರದಲ್ಲಿ ಕೆಜಿಗೆ 500 ರೂ.ನಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ದರ 41,200 ರೂಪಾಯಿ ಇದೆ. ಮುಂಬೈನಲ್ಲಿ 40,585 ರೂ. ಬೆಲೆ ಇದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಲೆಯಲ್ಲಿಯೂ ಹೆಚ್ಚಳವಾಗುತ್ತಿದೆ.












Click it and Unblock the Notifications