ಕೃಷಿ ಕಾಯ್ದೆ ವಾಪಸ್ ಪಡೆದರೆ ಮಾತ್ರ, ಮನೆಗೆ ವಾಪಸ್ ಎಂದ ರೈತ ಮುಖಂಡರು!
ನವದೆಹಲಿ, ಜನವರಿ 08: ವಿವಾದಿತ ಮೂರು ಕೃಷಿ ಕಾಯ್ದೆ ಹಿಂಪಡೆಯಬೇಕು ಎಂಬ ತಮ್ಮ ಪ್ರಮುಖ ಬೇಡಿಕೆ ಬಿಟ್ಟುಕೊಡದ ರೈತ ಮುಖಂಡರು ತಮ್ಮ 'ಘರ್ ವಾಪ್ಸಿ' 'ಕಾಯ್ದೆ ವಾಪ್ಸಿ' ನಂತರವೇ ಆಗುತ್ತದೆ ಎಂದು ಹೇಳಿದ್ದಾರೆ.
ರೈತರ ನಡುವೆ ನಡೆದ ಸಭೆಯಲ್ಲಿ ಮತ್ತೊಂದು ಸುತ್ತಿನ ಸಭೆ ತಾರ್ಕಿಕ ಅಂತ್ಯ ಕಾಣದೆ ಮತ್ತೊಮ್ಮೆ ವಿಫಲಗೊಂಡಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಲಿ ಎಂದು ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರ 41 ಸದಸ್ಯರ ಪ್ರತಿನಿಧಿ ಗುಂಪಿನೊಂದಿಗೆ ಎಂಟನೇ ಸುತ್ತಿನ ಮಾತುಕತೆಯಲ್ಲಿ, ಕೃಷಿ ಸಚಿವರು ಕೃಷಿ ಸುಧಾರಣಾ ಕಾನೂನುಗಳನ್ನು ವಿವಿಧ ರಾಜ್ಯಗಳ ದೊಡ್ಡ ಭಾಗದ ರೈತರು ಸ್ವಾಗತಿಸಿದ್ದಾರೆ. ಹೀಗಾಗಿ ಇಡೀ ದೇಶದ ಹಿತಾಸಕ್ತಿಗಳ ಬಗ್ಗೆ ಯೋಚಿಸುವಂತೆ ಒಕ್ಕೂಟಗಳನ್ನು ಕೇಳಿಕೊಂಡರು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ಪಂಜಾಬ್ ಸಂಸದರಾಗಿರುವ ವಾಣಿಜ್ಯ ರಾಜ್ಯ ಸಚಿವ ಸೋಮ್ ಪ್ರಕಾಶ್ ರೈತರೊಂದಿಗೆ ಮಾತುಕತೆ ನಡೆಸಿದ್ದರು.
ಆರಂಭದಲ್ಲಿ, ತೋಮರ್ ಕಾಯ್ದೆಗಳ ಕುರಿತು ಚರ್ಚಿಸಲು ಒಕ್ಕೂಟಗಳಿಗೆ ಮನವಿ ಮಾಡಿದರೆ, ಹೊಸ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ಬೇಡಿಕೆಯನ್ನು ಕೃಷಿ ಮುಖಂಡರು ಪುನರುಚ್ಚರಿಸಿದ್ದಾರೆ. ಇದಕ್ಕೆ ಕೃಷಿ ಸಚಿವರು ಇಡೀ ದೇಶದ ರೈತರ ಹಿತಾಸಕ್ತಿಯನ್ನು ಗಮನಿಸುವಂತೆ ಒತ್ತಿ ಹೇಳಿದರು.
ಮುಂದಿನ ಸುತ್ತಿನ ಸಭೆಯು ಜನವರಿ 15ರಂದು ನಡೆಯಲಿದೆ.












Click it and Unblock the Notifications