ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಮುನ್ನೋಟ
ಬೆಂಗಳೂರು, ಫೆ.9: ದೆಹಲಿಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಬಿಜೆಪಿ ರಾಜಧಾನಿಯಲ್ಲಿ ಮುಗ್ಗರಿಸುವುದೇ? ಎಎಪಿ ಬಹುಮತ ಪಡೆಯುವುದೇ? ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ಹಾಗೂ ಅಜಯ್ ಮಾಕನ್ ಇವರಲ್ಲಿ ಸಿಎಂ ಯಾರು ಎಂಬ ಪ್ರಶ್ನೆಗೆ ಮಂಗಳವಾರ ಉತ್ತರ ದೊರೆಯಲಿದೆ.
ಬಿಜೆಪಿ ಹಾಗೂ ಎಎಪಿ ನಡುವಿನ ಹಣಾಹಣಿಯಿಂದಾಗಿ ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಶೇ. 67.21ರಷ್ಟು ಮತದಾನವಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಎರಡನೇ ಸಲ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಪಕ್ಷ ಎಎಪಿ, ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದೆ. [ಚುನಾವಣೆ: ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ]
ದೆಹಲಿಯಲ್ಲಿ ಆಪ್ ಸರ್ಕಾರ ರಚನೆ ಮಾಡಲಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಹೇಳಿರುವುದು ಬಿಜೆಪಿ ಪಾಳೆಯದಲ್ಲಿ ಆತಂಕ ಮೂಡಿಸಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ, ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ.

ಪ್ರಮುಖ ಕ್ಷೇತ್ರಗಳು : ಕಿರಣ್ ಬೇಡಿ ಕ್ಷೇತ್ರ ಪೂರ್ವ ದೆಹಲಿಯ ಕೃಷ್ಣಾ ನಗರ,ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ. ಅವರಿಗೆ ಬಿಜೆಪಿಯ ಯುವ ನಾಯಕಿ ನೂಪೂರ್ ಶರ್ಮ ಸಡ್ಡು ಹೊಡೆಯುವರೇ? ಕಾದು ನೋಡಬೇಕಿದೆ. ಸದರ್ ಬಜಾರ್‌ನಿಂದ ಅದೃಷ್ಟ ಪರೀಕ್ಷೆಗೊಡ್ಡಿರುವ ಅಜಯ್ ಮಾಕನ್ ಅವರ ಭವಿಷ್ಯ ತಿಳಿಯಲಿದೆ. [ಚಾಣಕ್ಯ ವರದಿಯಲ್ಲಿ ಯಾರಿಗೆ ಬಹುಮತ?]
ಒಟ್ಟು ಮತ ಕ್ಷೇತ್ರ: 70 (58 ಸಾಮಾನ್ಯ,12 ಪರಿಶಿಷ್ಟ ಜಾತಿ)
ಬಹುಮತ ಸಾಬೀತುಪಡಿಸಲು ಬೇಕಾದ ಸಂಖ್ಯೆ : 36
ಸಿಎಂ ಅಭ್ಯರ್ಥಿಗಳು
* ಎಎಪಿ: ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್
* ಕಾಂಗ್ರೆಸ್: ಅಜಯ್ ಮಾಕೇನ್
* ಬಿಜೆಪಿ: ಕಿರಣ್ ಬೇಡಿ
2013ರ ಫಲಿತಾಂಶ
* ಬಿಜೆಪಿ 31 ಸ್ಥಾನ (ಶೇ 33.1ರಷ್ಟು ಮತ ಪಾಲು)
* ಕಾಂಗ್ರೆಸ್ 8 ಸ್ಥಾನ ( ಶೇ24.6ರಷ್ಟು ಮತ ಪಾಲು)
* ಆಮ್ ಆದ್ಮಿ ಪಕ್ಷ 28 ಸ್ಥಾನ ( ಶೇ 29.5 ಮತ ಪಾಲು)
ಮತ ಎಣಿಕೆಯ ನಡು ನಡುವೆ ಅಭ್ಯರ್ಥಿ ಹಾಗೂ ಪಕ್ಷಗಳ ಹಿನ್ನಡೆ, ಮುನ್ನಡೆ ಮತ್ತು ಫಲಿತಾಂಶದ ನೇರ ವರದಿ, ಕ್ಷಣಕ್ಷಣದ ಸುದ್ದಿಗಳನ್ನು ನಮ್ಮ ತಾಣದಲ್ಲಿ ಪ್ರಕಟಿಸಲಾಗುತ್ತದೆ. ಮುಖ್ಯವಾಗಿ ಯಾರು ಗೆದ್ದರು, ಯಾರು ಬಿದ್ದರು ಇತ್ಯಾದಿ.ದೆಹಲಿ ಚುನಾವಣಾ ಫಲಿತಾಂಶದ ಅಂಕಿ ಅಂಶಗಳನ್ನು ಬಿಂಬಿಸುವ ಕೋಷ್ಟಕ ಮುಖ್ಯ ಪುಟದ ಮೇಲ್ಭಾಗದಲ್ಲಿ ಇರುತ್ತದೆ.












Click it and Unblock the Notifications