ಗೌರಿ ಹತ್ಯೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಕಾರಣವಿರಬಹದು: ಖರ್ಗೆ
Recommended Video

ನವದೆಹಲಿ, ಸೆಪ್ಟೆಂಬರ್, 9: ಪತ್ರಕರ್ತೆ ಗೌರಿ ಲಂಕೇಶ್ ಅಂಥವರ ಹತ್ಯೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವೇ ಕಾರಣವಿದ್ದಿರಬಹುದು. ಆದರೆ ಅವರ ಕೊಲೆಗೆ ಆರ್ ಎಸ್ ಎಸ್ ಅಥವಾ ಬಿಜೆಪಿ ಹೊಣೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನವದೆಹಲಿಯಲ್ಲಿಂದು(ಸೆ.9) ಗೌರಿ ಲಂಕೇಶ್ ಹತ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಅಪರಾಧಿಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬಂಧಿಸಬೇಕು. ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬೇಕು. ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಅವರು ಹೇಳಿದರು.
ಅಪರಾಧಿಗೆ ಸರಿಯಾದ ಪಾಠ ಕಲಿಸಬೇಕಿದೆ. ನಾನು ಕರ್ನಾತಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಮಂತ್ರಿ ರಾಮಲಿಂಗಾ ರೆಡ್ಡಿಯವರೊಂದಿಗೆ ಮಾತನಾಡಿದ್ದೇನೆ. ಹಾಗೆಯೇ ಗೌರಿ ಲಂಕೇಶ್ ಹತ್ಯೆಯ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸಹ ಕಂಬನಿ ಮಿಡಿದಿದ್ದಾರೆ. ಶೀಘ್ರ್ ತನಿಖೆ ನಡೆಯಬೇಕೆಂದು ಅವರೂ ಬಯಸಿದ್ದಾರೆ ಎಂದರು.
ಸೆ.5 ಮಂಗಳವಾರದಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಮನೆಯಲ್ಲಿ ದುಷ್ಕರ್ಮಿಗಳು












Click it and Unblock the Notifications