ಚಿತ್ರಗಳಲ್ಲಿ ನೋಡಿ ರಾಷ್ಟ್ರಪಿತನಿಗೆ ನಮನ

ನವದೆಹಲಿ, ಅ.2 : ದೇಶದೆಲ್ಲಡೆ ಬುಧವಾರ ಮಹಾತ್ಮ ಗಾಂಧೀಜಿಯವರ 144ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ನವದೆಹಲಿಯ ರಾಜ್ ಘಾಟ್ ನಲ್ಲಿರುವ ಗಾಂಧೀಜಿ ಸಮಾಧಿಗೆ ಗಣ್ಯರು ನಮನ ಸಲ್ಲಿಸಿ, ಗಾಂಧೀಜಿಯವರ ಆದರ್ಶಗಳನ್ನು ಸ್ಮರಿಸಿದರು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್, ಪ್ರತಿಪಕ್ಷ ನಾಯಕ ಎಲ್.ಕೆ.ಅಡ್ವಾಣಿ ಮುಂತಾದವರು ರಾಜ್ ಘಾಟ್ ಗೆ ತೆರಳಿ, ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವಂತೆ ಗಾಂಧೀಜಿ ಕರೆ ನೀಡಿದ್ದ ಭಾಷಣವನ್ನು ರಾಜ್ ಘಾಟ್ ನಲ್ಲಿ ಪ್ರಸಾರ ಮಾಡಲಾಯಿತು. ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಸರ್ವಧರ್ಮ ಸಮನ್ವಯತೆ ಸಾರುವ ಪ್ರಾರ್ಥನೆಯನ್ನು ಮಾಡಿದರು.

ಉತ್ತರ ಪ್ರದೇಶದ ಮುರಾದಾಬಾದ್ ನಲ್ಲಿ ಶಾಲಾ ಮಕ್ಕಳು, ಮಹಾತ್ಮ ಗಾಂಧೀಜಿ ವೇಷಧರಿಸಿ, ರಸ್ತೆಯಲ್ಲಿ ಪಥ ಸಂಚಲ ನಡೆಸುವ ಮೂಲಕ ಗಾಂಧಿ ಜಯಂತಿಯನ್ನು ಆಚರಣೆ ಮಾಡಿದರು. ಚಿತ್ರಗಳಲ್ಲಿ ನೋಡಿ ಗಾಂಧಿ ಜಯಂತಿ ಆಚರಣೆ.

ಬಾಲ ಗಾಂಧಿಗಳು

ಬಾಲ ಗಾಂಧಿಗಳು

ಕೊಲ್ಲಾಪುರದಲ್ಲಿ ಶಾಲಾ ಮಕ್ಕಳು ಗಾಂಧೀ ವೇಷತೊಟ್ಟು ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಕ್ಕಳಿಂದ ಗಾಂಧಿಗೆ ನಮನ

ಮಕ್ಕಳಿಂದ ಗಾಂಧಿಗೆ ನಮನ

ಅಹಮದಾಬಾದ್ ನಲ್ಲಿ ಶಾಲಾ ಮಕ್ಕಳು ಗಾಂಧೀ ಜಯಂತಿ ಅಂಗವಾಗಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು.

ಸೋನಿಯಾ ಗಾಂಧಿಯಿಂದ ನಮನ

ಸೋನಿಯಾ ಗಾಂಧಿಯಿಂದ ನಮನ

ಮಹಾತ್ಮ ಗಾಂಧೀಜಿಯವರ 144ನೇ ಜಯಂತಿ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ ಘಾಟ್ ನಲ್ಲಿರುವ ಗಾಂಧೀಜಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಗಾಂಧಿ ವೇಷಧಾರಿಗಳು

ಗಾಂಧಿ ವೇಷಧಾರಿಗಳು

ಮಹಾತ್ಮ ಗಾಂಧೀಜಿಯವರ 144ನೇ ಜಯಂತಿ ಅಂಗವಾಗಿ ಉತ್ತರ ಪ್ರದೇಶದಲ್ಲಿ ಶಾಲಾ ಮಕ್ಕಳು ಗಾಂಧಿ ವೇಷತೊಟ್ಟು ಮೆರವಣಿಗೆ ಹೊರಟಿದ್ದು ಹೀಗೆ.

ಚರಕ ವೀಕ್ಷಿಸಿದ ಪವನ್ ಕುಮಾರ್ ಬನ್ಸಾಲ್

ಚರಕ ವೀಕ್ಷಿಸಿದ ಪವನ್ ಕುಮಾರ್ ಬನ್ಸಾಲ್

ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಚಂಡೀಗಢದಲ್ಲಿ ಆಯೋಜಿಸಲಾಗಿದ್ದ ಗಾಂಧೀ ಜಿ ಜಯಂತಿ ಕಾರ್ಯಕ್ರಮದಲ್ಲಿ ಚರಕವನ್ನು ವೀಕ್ಷಿಸಿದರು.

ಪ್ರಥಮ ಪ್ರಜೆ ನಮನ

ಪ್ರಥಮ ಪ್ರಜೆ ನಮನ

ಮಹಾತ್ಮ ಗಾಂಧೀಜಿ 144ನೇ ಜಯಂತಿ ಅಂಗವಾಗಿ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.

ಅಡ್ವಾಣಿ ನಮನ

ಅಡ್ವಾಣಿ ನಮನ

ಗಾಂಧಿ ಜಯಂತಿ ಅಂಗವಾಗಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.

ಪ್ರಧಾನಿ ನಮನ

ಪ್ರಧಾನಿ ನಮನ

ಗಾಂಧಿ ಜಯಂತಿ ಅಂಗವಾಗಿ ಪ್ರಧಾನಿ ಮನಮೋಹನ್ ಸಿಂಗ್ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಬೌದ್ಧರಿಂದ ನಮನ

ಬೌದ್ಧರಿಂದ ನಮನ

ಗಾಂಧಿ ಜಯಂತಿ ಅಂಗವಾಗಿ ಬೌದ್ಧ ಧರ್ಮಗುರುಗಳು ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.

ಅಣ್ಣಾ ನಮನ

ಅಣ್ಣಾ ನಮನ

ಗಾಂಧೀ ಜಯಂತಿ ಅಂಗವಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.

ಚರಕ ಹಿಡಿದ ಸಿಎಂ

ಚರಕ ಹಿಡಿದ ಸಿಎಂ

ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಲಕ್ನೋದಲ್ಲಿ ಚರಕದಿಂದ ನೂಲು ತೆಗೆದು ಗಾಂಧೀ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+