ಚೀನಾ ಹೇಳಿಕೆಗೆ ಉತ್ತರ ನೀಡಿದ ಭಾರತ ವಿದೇಶಾಂಗ ಸಚಿವಾಲಯ

ದೆಹಲಿ, ಜೂನ್ 20: ಗಾಲ್ವಾನ್ ಕಣಿವೆ ಗಡಿ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ ಚೀನಾ ವಕ್ತಾರ ಪ್ರತಿಕ್ರಿಯೆ ನೀಡಿದ್ದರು. ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆ ಚೀನಾ ಗಡಿ ಪ್ರದೇಶದಲ್ಲಿದೆ ಎಂದು ಹೇಳಿದ್ದರು.

Recommended Video

      ಕಳೆದ 2 ವಾರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 7 ₹ ಹೆಚ್ಚಳ | Petrol Price Hiked | Oneindia Kannada

      ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ಸಚಿವಾಲಯ ''ಎಲ್‌ಎಸಿಯಲ್ಲಿ ಭಾರತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ವಾಸ್ತವವಾಗಿ, ಅವರು ಯಾವ ಘಟನೆಯಿಲ್ಲದೆ ಈ ಪ್ರದೇಶದಲ್ಲಿ ದೀರ್ಘಕಾಲ ಗಸ್ತು ತಿರುಗುತ್ತಿದ್ದಾರೆ. ಭಾರತೀಯ ಕಡೆಯಿಂದ ನಿರ್ಮಿಸಲಾದ ಎಲ್ಲಾ ಮೂಲಸೌಕರ್ಯಗಳು ಸ್ವಾಭಾವಿಕವಾಗಿ ನಮ್ಮ ಗಡಿ ಭಾಗದಲ್ಲಿಯೇ ಇದೆ' ಎಂದು ಸ್ಪಷ್ಟನೆ ನೀಡಿದೆ.

      ''ಗಾಲ್ವಾನ್ ಕಣಿವೆ ಸೇರಿದಂತೆ ಭಾರತ-ಚೀನಾದ ಎಲ್ಲ ಗಡಿ ಭಾಗದಲ್ಲೂ ಭಾರತೀಯ ಸೇನೆಗೆ ಪರಿಚಯ ಇದೆ. ಗಾಲ್ವಾನ್ ಕಣಿವೆ ವಿಚಾರದಲ್ಲಿ ಈಗಾಗಲೇ ಐತಿಹಾಸಿಕವಾಗಿ ನಿಲುವು ಸ್ಪಷ್ಟವಾಗಿದೆ. ಆದರೂ, ಚೀನಾದ ಪ್ರಯತ್ನ ಉತ್ಪ್ರೇಕ್ಷಿತ ಮತ್ತು ಒಪ್ಪಲಾಗದು'' ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

      'ಮೇ 2020ರ ಆರಂಭದಿಂದಲೂ, ಚೀನೀಯರು ಈ ಪ್ರದೇಶದಲ್ಲಿ ಭಾರತದ ಸಾಮಾನ್ಯ ಗಸ್ತು ಮಾದರಿಗೆ ಅಡ್ಡಿಯಾಗುತ್ತಿದ್ದಾರೆ. ಇನ್ನು ಭಾರತವು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸುತ್ತಿದೆ ಎಂಬ ವಾದವನ್ನು ನಾವು ಸ್ವೀಕರಿಸುವುದಿಲ್ಲ' ಎಂದು ಎಂಇಎ ಪ್ರತ್ಯುತ್ತರ ನೀಡಿದೆ.

      galwan-valley-area-has-been-historically-clear-mea-responds-china

      ಚೀನಾ ವಕ್ತಾರ ಹೇಳಿದ್ದೇನು?
      ಪೂರ್ವ ಲಡಾಖ್ ಕಣಿವೆಯ ವಿವಾದ ಪ್ರದೇಶವೂ ವಾಸ್ತವ ನಿಯಂತ್ರಣ ರೇಖೆಯ ಚೀನಾದ ಕಡೆ ಇದೆ. ಈ ಪ್ರದೇಶದಲ್ಲಿ ಭಾರತೀಯರು ಏಪಕಪಕ್ಷೀಯವಾಗಿ ರಸ್ತೆಗಳು, ಸೇತುವೆ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸುತ್ತಿದೆ. ಅನೇಕ ವರ್ಷಗಳಿಂದ ಚೀನಾ ಆ ಪ್ರದೇಶದಲ್ಲಿ ಗಸ್ತು ಮಾಡಿದೆ. ಚೀನಾ ಸೇನೆ ಕರ್ತವ್ಯದಲ್ಲಿದೆ ಎಂದು ಆರೋಪ ಮಾಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+