ಕೇಜ್ರಿವಾಲ್ ಇದಕ್ಕೂ ಪ್ರಧಾನಿ ಮೋದಿಯನ್ನು ದೂಷಿಸಬಹುದಾ?

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 10: ಇದುವರೆಗೆ ಪಕ್ಷದ 12 ಶಾಸಕರ ಬಂಧನಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎನ್ನುತ್ತಿದ್ದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಪಕ್ಷದ ಶಾಸಕರೊಬ್ಬರ ಮನೆ/ಕಚೇರಿ ಮೇಲೆ ನಡೆದ ಆದಾಯ ತೆರಿಗೆ ದಾಳಿಯ ಬಗ್ಗೆ ಮತ್ತೆ ಮೋದಿಯನ್ನು ದೂಷಿಸುತ್ತಾರಾ?

ದೆಹಲಿಯ ಚತ್ತರ್ಪುರ ಅಸೆಂಬ್ಲಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಕರ್ತಾರ್ ಸಿಂಗ್ ತನ್ವರ್ ಅವರ ಮನೆ, ಕಚೇರಿ, ಫಾರ್ಮ್ ಹೌಸ್ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಭರ್ಜರಿ ಭೇಟೆಯಾಡಿದ್ದಾರೆ. (ಮುಂದುವರಿದ ಆಮ್ ಆದ್ಮಿ ಶಾಸಕರ ಬಂಧನ ಪರ್ವ)

ಐಟಿ ಅಧಿಕಾರಿಗಳ ಮಾಹಿತಿಯ ಪ್ರಕಾರ ಇದುವರೆಗೆ ಕರ್ತಾರ್ ಸಿಂಗ್ ಅವರಿಂದ ಲೆಕ್ಕಪತ್ರಕ್ಕೆ ಸಿಗದ 130 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳನ್ನು ಐಟಿ ಇಲಾಖೆ ತಮ್ಮ ವಶಕ್ಕೆ ಪಡೆದುಕೊಂಡಿವೆ.

ಐಟಿ ಇಲಾಖೆಯ ನಿವೃತ್ತ ನೌಕರರಾಗಿರುವ ಅರವಿಂದ್ ಕೇಜ್ರಿವಾಲ್, ಪಕ್ಷದ ಶಾಸಕರೊಬ್ಬರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಯಿಂದಾಗಿ ತೀವ್ರ ಮುಜುಗರಕ್ಕೀಡಾಗುವಂತಾಗಿದೆ.

ಜುಲೈ 27ರಿಂದ ಸತತ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು, ಕರ್ತಾರ್ ಸಿಂಗ್ ಮತ್ತು ಅವರ ಸಹೋದರನ ನಿವಾಸದಿಂದ 130 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಲೆಕ್ಕಪತ್ರಕ್ಕೆ ಸಿಗದ ಆದಾಯ ಮತ್ತು ಇನ್ವೆಸ್ಟ್ಮೆಂಟ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎಲ್ಲದಕ್ಕೂ ಮೋದಿ ಸರಕಾರವೇ ಕಾರಣ, ಇದಕ್ಕೆ ಈಗ ಏನಂತಾರೆಂದು ಟ್ವೀಟಿಗರು ಸಖತ್ತಾಗಿ ಕೇಜ್ರಿವಾಲ್ ಅವರ ಕಾಲೆಳೆಯುತ್ತಿದ್ದಾರೆ. ಕೆಲವೊಂದು ಸ್ಯಾಂಪಲ್ ಹೀಗಿದೆ..

ಚುನಾವಣೆ ವೇಳೆ ಘೋಷಿಸಿದ್ದೇ ಬೇರೆ

ಚುನಾವಣೆ ವೇಳೆ ಘೋಷಿಸಿದ್ದೇ ಬೇರೆ

ಕಳೆದ ಚುನಾವಣೆಯ ವೇಳೆ 17.64 ಕೋಟಿ ರೂಪಾಯಿ ಆಸ್ತಿಯಿದೆ ಎಂದು ಕರ್ತಾರ್ ಸಿಂಗ್ ತನ್ವರ್ ಘೋಷಿಸಿಕೊಂಡಿದ್ದರು. ಇದುವರೆಗೆ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. (ಚಿತ್ರದಲ್ಲಿ ಕರ್ತಾರ್ ಸಿಂಗ್)

ಮೋದಿ ಸರಕಾರ ಕಾರಣ

ಆದಾಯ ತೆರಿಗೆ ದಾಳಿಗೆ ಮೋದಿ ಸರಕಾರವೇ ಕಾರಣ

ಕರ್ತಾರ್ ಸಿಂಗ್ ಟಾರ್ಗೆಟ್ ಮುಟ್ಟಲಿದ್ದಾರೆ

ಇನ್ನೂ ಮೂರು ವರ್ಷ ಅಧಿಕಾರವಿದೆ, ಕರ್ತಾರ್ ಸಿಂಗ್ ಟಾರ್ಗೆಟ್ ರೀಚ್ ಆದರೂ ಆಗಬಹುದು.

ಐಟಿ ಇಲಾಖೆ ಮೇಲೆ ಕೇಸ್ ಹಾಕಲಿ

ದೆಹಲಿ ಸರಕಾರ ಲೋಕ್ ಪಾಲ್ ಬಿಲ್ ಪಾಸ್ ಮಾಡಿದೆ. ಕರ್ತಾರ್ ಸಿಂಗ್ ಬಳಿ ಕಪ್ಪುಹಣ ಇರಲು ಹೇಗೆ ಸಾಧ್ಯ? ಕೇಜ್ರಿವಾಲ್, ಐಟಿ ಇಲಾಖೆ ಮೇಲ್ ಕೇಸ್ ಹಾಕಲಿ.

ಕರೆನ್ಸಿ ನೋಟು

130 ಕೋಟಿ ರೂಪಾಯಿ ಆಪ್ ಶಾಸಕನ ಮನೆಯಿಂದ ವಶ ಪಡಿಸಿಕೊಳ್ಳಲಾಗಿದೆ. ಬಹುಷ: ಆಮ್ ಆದ್ಮಿ ಪಕ್ಷದ ಕರೆನ್ಸಿ ನೋಟು ನೀಡುವ ಹೊಸ ಸಂಸ್ಥೆಯಿರಬಹುದು.

ಮೋದಿ ಮೇಲೆ ಹೇಳ್ಬಿಡಿ

ಇದೂ ಮೋದಿ ಮಾಡಿಸಿದ್ದು ಎಂದು ಹೇಳ್ಬಿಡಿ..

ಇದುವರೆಗೆ ಹನ್ನೆರಡು ಶಾಸಕರ ಬಂಧನ

ಇದುವರೆಗೆ ಹನ್ನೆರಡು ಶಾಸಕರ ಬಂಧನ

ಆಮ್ ಆದ್ಮಿ ಪಕ್ಷದ ಹನ್ನೆರಡು ಶಾಸಕರು ವಿವಿಧ ಆರೋಪದಡಿ ಬಂಧನಕ್ಕೊಳಪಟ್ಟಿದ್ದರು. ಎಲ್ಲದಕ್ಕೂ ಕೇಜ್ರಿವಾಲ್, ಪ್ರಧಾನಿ ಮೋದಿಯವರನ್ನು ದೂಷಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fresh crisis for Delhi CM Arvind Kejriwal with AAP MLA Kartar Singh Tanwar on I-T radar. I-T department has claimed a recovery of Rs 130 crore of unaccounted income and investment from Kartar Singh. Will Kejriwal blame Modi for this too?
Please Wait while comments are loading...