'5 ಗಂಟೆಯೊಳಗೆ ಬಿಡುಗಡೆ ಮಾಡಿ': ಮಣಿಪುರ ಹೋರಾಟಗಾರನ ಬಂಧನದ ಬಗ್ಗೆ ಸುಪ್ರೀಂ ಆದೇಶ
ಇಂಫಾಲ, ಜು.19: ಕೆಲವು ಫೇಸ್‌ಬುಕ್ ಪೋಸ್ಟ್‌ಗಳ ವಿಚಾರದಲ್ಲಿ ದೇಶದ್ರೋಹ ಆರೋಪದಡಿ ಬಂಧಿಸಲ್ಪಟ್ಟ ಮಣಿಪುರ ಮೂಲದ ರಾಜಕೀಯ ಕಾರ್ಯಕರ್ತನ ಲೈಚೋಂಬಮ್ ಎರೆಂಡ್ರೊರನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.
ಕೋವಿಡ್ ಚಿಕಿತ್ಸೆಗೆ ಹಸುವಿನ ಸೆಗಣಿ ಹಾಗೂ ಗೋಮೂತ್ರ ಶಿಫಾರಸು ಮಾಡಿದ್ದ ಬಿಜೆಪಿಯ ನಾಯಕನನ್ನು ಟೀಕೆ ಮಾಡಿ "ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವು ಕೆಲಸ ಮಾಡುವುದಿಲ್ಲ" ಎಂದು 37 ವರ್ಷದ ಲೈಚೋಂಬಮ್ ಎರೆಂಡ್ರೊ ಹೇಳಿದ್ದರು. ಈ ಹಿನ್ನೆಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮಣಿಪುರ ನಾಯಕನನ್ನು ಬಂಧಿಸಲಾಗಿತ್ತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣವನ್ನು ನಾಳೆಯವರೆಗೆ ಮುಂದೂಡಬೇಕೆಂದು ಬಯಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಆದರೆ ನ್ಯಾಯಾಧೀಶರು ಕೂಡಲೇ ಲೈಚೋಂಬಮ್ ಎರೆಂಡ್ರೊರನ್ನು ಬಿಡುಗಡೆ ಮಾಡಿ ಎಂದು ಆದೇಶ ನೀಡಿದ್ದಾರೆ.

"ಅರ್ಜಿದಾರನನ್ನು ಬಂಧನದಲ್ಲಿ ಇರಿಸುವುದರಿಂದ 21 ನೇ ವಿಧಿ ಅನ್ವಯ ಜೀವನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ಈ ಹಿನ್ನೆಲೆ ಇಂದು ಸಂಜೆ 5 ಗಂಟೆಯೊಳಗೆ 1,000 ವೈಯಕ್ತಿಕ ಬಾಂಡ್‌ನೊಂದಿಗೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ," ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಶಾ ಹೇಳಿದ್ದಾರೆ. ಎರೆಂಡ್ರೊರ ತಂದೆ ಜಾಮೀನಿಗಾಗಿ ಮನವಿ ಮಾಡಿದ್ದರು.
ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಲೈಚೋಂಬಮ್ ಮತ್ತು ಪತ್ರಕರ್ತ ಕಿಶೋರ್‌ಚಂದ್ರ ವಾಂಗ್ಖೇಮ್, ಅಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಸೈಖೋಮ್ ತಿಕೇಂದ್ರ ಸಿಂಗ್ ಸಾವಿನ ಬಗ್ಗೆ ನೀಡಿದ ಪ್ರತಿಕ್ರಿಯೆಯ ಆಧಾರದಲ್ಲಿ ಬಂಧಿಸಲಾಗಿತ್ತು. ಮಣಿಪುರ ಬಿಜೆಪಿ ಉಪಾಧ್ಯಕ್ಷ ಉಷಾಮ್ ದೇಬನ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ ಪ್ರೇಮಾನಂದ ಮೀಟೆ ಈ ಪೋಸ್ಟ್‌ಗಳು ಆಕ್ರಮಣಕಾರಿ ಎಂದು ದೂರು ನೀಡಿದ್ದರು.
ಇದಕ್ಕೂ ಮುನ್ನ, 2020 ರ ಜೂನ್‌ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ರಾಜ್ಯಸಭಾ ಸಂಸದ ಸನಜೋಬಾ ಲೀಶೆಂಬಾ ಫೋಟೋವನ್ನು ಇದ್ದ ಮತ್ತೊಂದು ಫೇಸ್‌ಬುಕ್ ಪೋಸ್ಟ್ ವಿರುದ್ದ ರಾಜ್ಯ ಪೊಲೀಸರು ದೇಶದ್ರೋಹ ದೂರು ದಾಖಲಿಸಿದ್ದರು. ಮಿನಾಯ್ ಮಚಾ ಅಂದರೆ ಸೇವಕನ ಮಗ ಎಂಬ ಶೀರ್ಷಿಕೆಯ ಫೋಟೋದಲ್ಲಿ ಬಿಜೆಪಿಯ ಹಿರಿಯ ನಾಯಕನ ಮುಂದೆ ಮಣಿಪುರದ ನಾಮಸೂಚಕ ರಾಜ ತಲೆ ಬಾಗಿರುವುದು ತೋರಿಸುತ್ತದೆ. ಇವೆರಡು ಪ್ರಕರಣ ಬಳಿಕ ಲೈಚೋಂಬಮ್ ಜಾಮೀನಿನಲ್ಲಿದ್ದರು.
ಇನ್ನು ಕಳೆದ ವಾರ ಸುಪ್ರೀಂ ಕೋರ್ಟ್, "75 ವರ್ಷಗಳ ಸ್ವಾತಂತ್ರ್ಯದ ನಂತರ ದೇಶದ್ರೋಹ ಕಾನೂನು ಇನ್ನೂ ಅಗತ್ಯವಿದೆಯೇ" ಎಂದು ಪ್ರಶ್ನಿಸಿತ್ತು. "ಈ ಕಾನೂನು ಸಂಸ್ಥೆಗಳ ಕಾರ್ಯಚಟುವಟಿಕೆಗೆ ಗಂಭೀರ ಬೆದರಿಕೆಯಾಗಿದೆ. ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ," ಎಂದು ಹೇಳಿತ್ತು. ಹಾಗೆಯೇ ಇದು ಹರಿತವಿರುವ ಗರಗಸಕ್ಕೆ ಹೋಲಿಸಿದೆ. ವಾದದ ಸಮಯದಲ್ಲಿ, ದೇಶದ್ರೋಹ ಕಾನೂನಿನ ಇತಿಹಾಸದಲ್ಲಿ "ಕನಿಷ್ಠ ಅಪರಾಧ ಅಥವಾ ಕಡಿಮೆ ಪ್ರಮಾಣದ ಶಿಕ್ಷೆ" ಇದೆ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಸರ್ಕಾರದ ಉನ್ನತ ವಕೀಲ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ "ಮಾರ್ಗಸೂಚಿಗಳೊಂದಿಗೆ" ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ವಾದಿಸಿದರು.
(ಒನ್‌ಇಂಡಿಯಾ ಸುದ್ದಿ)
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications