ವಲಸಿಗರಿಗೆ ಎರಡು ತಿಂಗಳ ಕಾಲ ಉಚಿತ ಆಹಾರ ಧಾನ್ಯ

ನವದೆಹಲಿ, ಮೇ 14: ವಲಸಿಗರಿಗೆ ಮುಂದಿನ ಎರಡು ತಿಂಗಳವರೆಗೆ ಉಚಿತ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಗುರುವಾರ) ತಿಳಿಸಿದ್ದಾರೆ.

Recommended Video

      ಜನರ ಕಷ್ಟದ ಸ್ಥಿತಿಯನ್ನು ಮೋದಿ ಗೇಲಿ ಮಾಡಿದ್ದಾರೆ..? | H D Kumaraswamy | Economy Package

      ಇಂದು ಆರ್ಥಿಕ ಪ್ಯಾಕೇಜ್‌ನ ಎರಡನೇ ಕಂತಿನ ವಿವರವನ್ನು ಅವರು ನೀಡಿದ್ದು, ವಲಸಿಗರಿಗೆ ಎರಡು ತಿಂಗಳ ಕಾಲ ಉಚಿತ ಆಹಾರ ಧಾನ್ಯ ನೀಡುವ ಸರ್ಕಾರ ಯೋಜನೆ ಬಗ್ಗೆ ಮಾಹಿತಿ ನೀಡಿದರು.

      ''ಎನ್‌ಎಫ್‌ಎಸ್‌ಎ ಅಥವಾ ರಾಜ್ಯ ಕಾರ್ಡ್‌ಗಳನ್ನು ಹೊಂದಿರದ ವಲಸಿಗರಿಗೂ 2 ತಿಂಗಳವರೆಗೆ ಉಚಿತ ಆಹಾರ ಧಾನ್ಯ ಪೂರೈಕೆ ಸಿಗಲಿದೆ. 5 ಕೆಜಿ ಗೋಧಿ ಅಥವಾ ಅಕ್ಕಿ ಅಥವಾ 1 ಕೆಜಿ ಚೆನಾವನ್ನು ನೀಡಲಾಗುತ್ತದೆ'' ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

      Free Food Grain Supply To All Migrants For Next 2 Months

      "ಈ ಕ್ರಮಗಳ ಅನುಷ್ಠಾನ, ವಲಸಿಗರನ್ನು ಗುರುತಿಸುವುದು ಮತ್ತು ಪೂರ್ಣ ವಿತರಣೆ ಮತ್ತು ಮಾರ್ಗಸೂಚಿಗಳನ್ನು ಒದಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ" ಎಂದು ಸೀತಾರಾಮನ್ ಹೇಳಿದರು.

      ಸರ್ಕಾರದ ಈ ಹೊಸ ಯೋಜನೆಯಿಂದ ಸುಮಾರು 8 ಕೋಟಿ ವಲಸಿಗರು ಇದರ ಲಾಭ ಪಡೆಯಲಿದ್ದಾರೆ. ಇದರ ವೆಚ್ಚ 3,500 ಕೋಟಿ ರೂಪಾಯಿ ಆಗಲಿದೆ ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+