ಬಿಜೆಪಿ ಸೇರ್ಪಡೆಗೊಂಡ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ

ನವದೆಹಲಿ, ಆ. 25: ನಿವೃತ್ತ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಪೊಲೀಸ್ ಹುದ್ದೆ ತೊರೆದು ರಾಜಕೀಯ ರಂಗ ಪ್ರವೇಶಿಸಿದ್ದಾರೆ.

Recommended Video

      Annamalai IPS : ಕಮಲ ಹಿಡಿದು ಕಮಾಲ್ ಮಾಡ್ತಾರ ಸಿಂಗಂ | Oneindia Kannada

      ಮಂಗಳಾವಾರ (ಆಗಸ್ಟ್ 25) ಮಧ್ಯಾಹ್ನ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ್ ರಾವ್ ಸಮ್ಮುಖದಲ್ಲಿ ಅಣ್ಣಾಮಲೈ ಅವರು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

      ಕರ್ನಾಟಕದ 'ಸಿಂಗಂ' ಎಂದೇ ಖ್ಯಾತರಾಗಿದ್ದ ಖಡಕ್ ಪೊಲೀಸ್ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಮಂಗಳವಾರ(ಮೇ 28) ಎಂಬುದು ವಿಶೇಷ.

      Former IPS officer Annamalai Kuppusamy joins BJP

      ಅಣ್ಣಾಮಲೈ ಅವರು ಪೊಲೀಸ್ ಹುದ್ದೆ ತೊರೆದ ಬಳಿಕ ರಾಜಕೀಯ ಪ್ರವೇಶಿಸುವುದು ನಿರೀಕ್ಷಿತವಾಗಿತ್ತು. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ಅವರು 2019ರ ಮೇ 28ರಂದು ಐಜಿ- ಡಿಜಿಪಿ ಹಿರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ಕಳಿಸಿ ಐಪಿಎಸ್ ಹುದ್ದೆ ತೊರೆದಿದ್ದರು.

      2011ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ, ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.

      ತಮಿಳುನಾಡಿನ ಕರೂರು ಮೂಲದವರಾದ ಅಣ್ಣಾಮಲೈ ಅವರು ಪೊಲೀಸ್ ಹುದ್ದೆ ತೊರೆದ ಬಳಿಕ ಸ್ವಗ್ರಾಮಕ್ಕೆ ತೆರಳಲಿದ್ದರು. ಸ್ನೇಹಿತರು, ಆಪ್ತರ ಜೊತೆ ಕೆಲಕಾಲ ಕಳೆದು ತಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿಯಿದೆ. ತಮಿಳುನಾಡಿನಿಂದ ರಾಜಕೀಯ ರಂಗಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಅಣ್ಣಾಮಲೈ ಅವರು ಡಿಎಂಕೆ ಪಕ್ಷ ಸೇರಲಿದ್ದಾರೆ ಎಂಬ ಮಾಹಿತಿಯೂ ಹಬ್ಬಿತ್ತು. ಆದರೆ, ಊಹಾಪೋಹಗಳಿಗೆ ತೆರೆ ಎಳೆದಿದ್ದು, ಬಿಜೆಪಿ ಸೇರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+