ಅಧಿಕೃತ ನಿವಾಸ ತೆರವುಗೊಳಿಸಿದ ಮಾಜಿ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ, ಜೂನ್ 29: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ತೊರೆದಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್, 'ನಾನು ನನ್ನ ಅಧಿಕೃತ ನಿವಾಸವಾದ 8, ಸಫ್ದಾರ್ ಜಂಗ್ ಲೇನ್, ನವದೆಹಲಿಯಿಂದ ಹೊರಬಂದಿದ್ದೇನೆ. ಹೀಗಾಗಿ ಇನ್ನು ಮುಂದೆ ನನ್ನ ಹಿಂದಿನ ವಿಳಾಸ ಮತ್ತು ಫೋನ್ ಸಂಖ್ಯೆಯಲ್ಲಿ ನಾನು ಲಭ್ಯ ಇರುವುದಿಲ್ಲ' ಎಂದು ತಿಳಿಸಿದ್ದಾರೆ.

ಬಿಜೆಪಿಯ ಪ್ರಮುಖ ಮಹಿಳಾ ನಾಯಕರಾಗಿದ್ದ ಸುಷ್ಮಾ ಸ್ವರಾಜ್ ಅವರು, ಪ್ರಸಕ್ತ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಅವರು ಕಳೆದ ನವೆಂಬರ್ ತಿಂಗಳಿನಲ್ಲಿಯೇ ಪ್ರಕಟಿಸಿದ್ದರು.

former external minister Sushma swaraj vacate official residence

ಆರೋಗ್ಯದ ಕಾರಣ ಅವರು ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಅವರಿಂದ ತೆರವಾದ ವಿದೇಶಾಂಗ ಸಚಿವ ಸ್ಥಾನವನ್ನು ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರಿಗೆ ನೀಡಲಾಗಿತ್ತು.

ಹಿಂದಿನ ಲೋಕಸಭೆ ವಿಸರ್ಜನೆಗೊಂಡ ಮಾಜಿ ಸಂಸದರು ತಮಗೆ ಅಧಿಕೃತವಾಗಿ ನೀಡಲಾಗಿದ್ದ ಬಂಗಲೆಯನ್ನು ಒಂದು ತಿಂಗಳ ಒಳಗೆ ತೆರವುಗೊಳಿಸಬೇಕು ಎಂಬ ನಿಯಮವಿದೆ.

ತಮ್ಮನ್ನು ಆಂಧ್ರಪ್ರದೇಶದ ನೇಮಿಸಲಾಗಿದೆ ಎಂಬ ವರದಿಯನ್ನು ಸುಷ್ಮಾ ಸ್ವರಾಜ್ ಜೂನ್ 10ರಂದು ತಳ್ಳಿಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+