ಜ.5 ರವರೆಗೆ ದೆಹಲಿ, ಹರಿಯಾಣದಲ್ಲಿ ಶೀತ ಗಾಳಿ, ಮಳೆಯ ಮುನ್ಸೂಚನೆ
ನವದೆಹಲಿ ಡಿಸೆಂಬರ್ 2: 2022 ರ ಆರಂಭದಲ್ಲಿ ದೆಹಲಿ, ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ತಾಪಮಾನವು ಗಣನೀಯವಾಗಿ ಇಳಿಯುವುದರೊಂದಿಗೆ ಭಾರತದ ಉತ್ತರದ ರಾಜ್ಯಗಳಾದ್ಯಂತ ಚಳಿಗಾಲದ ಚಳಿ ಪ್ರಾರಂಭವಾಗಿದೆ. ಇತ್ತೀಚಿನ ಮುನ್ಸೂಚನೆಗಳ ಪ್ರಕಾರ, ಈ ಶೀತ ಪರಿಸ್ಥಿತಿಗಳು ಮುಂದಿನ ಕೆಲವು ದಿನಗಳವರೆಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಭಾರತೀಯ ಹವಾಮಾನ ಇಲಾಖೆ (IMD) ಜನವರಿ 5 ರವರೆಗೆ ಉತ್ತರದ ಹಲವು ರಾಜ್ಯಗಳಲ್ಲಿ ಶೀತ ಅಲೆ ಇರಲಿದೆ ಎಂದು ಭವಿಷ್ಯ ನುಡಿದಿದೆ. ಪಶ್ಚಿಮದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಕೆಲವು ರಾಜ್ಯಗಳಲ್ಲಿ ಮುಂದಿನ ವಾರ ಅಥವಾ ಎರಡು ದಿನ ಲಘು ಮಳೆ ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.
IANS ವರದಿಗಳ ಪ್ರಕಾರ, ಪಶ್ಚಿಮದಲ್ಲಿ ಚಂಡಮಾರುತದ ಚಲನೆಯಿಂದಾಗಿ ಜನವರಿ 3 ರಿಂದ ವಾಯುವ್ಯ ಭಾರತದ ಪ್ರದೇಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದಾಗಿ ಕೆಲ ಪ್ರದೇಶದಲ್ಲಿ ಜನವರಿ 3 ರಿಂದ 7ರ ಅವಧಿಯಲ್ಲಿ ಮಳೆ ಅಥವಾ ಹಿಮಪಾತವಾಗುವ ಸಾಧ್ಯತೆಯಿದೆ.

IMD ಮುನ್ಸೂಚನೆಯ ಪ್ರಕಾರ ಜನವರಿ 4 ಮತ್ತು 5 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಜನವರಿ 5 ರಂದು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಜನವರಿ 4 ಮತ್ತು 5 ರಂದು ಜಮ್ಮು ಮತ್ತು ಕಾಶ್ಮೀರ ಮತ್ತು ಜನವರಿ 5ರಂದು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾದ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.
ಸಾಧಾರಣ ಮಳೆಯಾಗುವ ಸಾಧ್ಯತೆ
ಇನ್ನೂ ಜನವರಿ 5 ರಿಂದ 7 ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ಮತ್ತು ದೆಹಲಿ, ಉತ್ತರ ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಸಾಕಷ್ಟು ವ್ಯಾಪಕವಾದ ಲಘು/ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು ಪಶ್ಚಿಮ ಮಧ್ಯಪ್ರದೇಶದಲ್ಲಿ ಲಘುವಾಗಿ ಪ್ರತ್ಯೇಕವಾದ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಹವಾಮಾನ ಮುನ್ಸೂಚನೆ ನೀಡಿದೆ. ಜನವರಿ 5 ರಂದು ಆಲಿಕಲ್ಲು ಮಳೆ ಜೊತೆಗೆ ಶೀತ ಗಾಳಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಇರಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ಈ ಪ್ರದೇಶಗಳಲ್ಲಿ ಶೀತ ಅಲೆಯು ಮುಂದಿನ ವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ (IMD) ಕರಾವಳಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾನುವಾರ (ಜನವರಿ 2, 2022) ಪ್ರತ್ಯೇಕವಾದ ಭಾರೀ ಮತ್ತು ಅತಿ ಭಾರೀ ಮಳೆಯ ಚಟುವಟಿಕೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಈ ಮಧ್ಯೆ ವಾಯುವ್ಯ ಭಾರತವು ಶೀತ ಅಲೆಗಳ ಸ್ಥಿತಿಗೆ ಸಾಕ್ಷಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. "ನೈಋತ್ಯ ಬಂಗಾಳ ಕೊಲ್ಲಿಯಲ್ಲಿ, ದಕ್ಷಿಣ ಶ್ರೀಲಂಕಾದ ಕರಾವಳಿಯಲ್ಲಿ ಚಂಡಮಾರುತದ ಚಲನೆಯಿಂದ ತಮಿಳುನಾಡು, ಪುದುಚೇರಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ "ಐಎಂಡಿ ಹೇಳಿದೆ.












Click it and Unblock the Notifications