ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯಾದಾಗ ಅಮ್ಮಂಗೆ ಹೆಚ್ಚು ಖುಷಿಯಾಗಿರಲಿಲ್ಲ: ನರೇಂದ್ರ ಮೋದಿ

|
Google Oneindia Kannada News

Recommended Video

ತಾವು ಪ್ರಧಾನಿಯಾದಾಗ ಅವರ ಅಮ್ಮ ಪ್ರತಿಕ್ರಿಯಿಸಿದ ಕ್ಷಣಗಳನ್ನ ಹಂಚಿಕೊಂಡ ಮೋದಿ | Oneindia Kannada

ನವದೆಹಲಿ, ಫೆಬ್ರವರಿ 04: "ನಾನು ಪ್ರಧಾನಿಯಾದಾಗ ಅಮ್ಮಂಗೆ ಹೆಚ್ಚೇನು ಖುಷಿಯಾಗಿರಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾದಾಗ ಆದಷ್ಟು ಸಂತೋಷ ಪ್ರಧಾನಿಯಾದಾಗ ಆಗಿರಲಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದರು.

ಹ್ಯುಮನ್ಸ್ ಬಾಂಬೆ ಸೋಶಿಯಲ್ ಮಿಡಿಯಾ ಪೇಜ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ 90 ವರ್ಷ ವಯಸ್ಸಿನ ತಾಯಿ ಹೀರಾ ಬೆನ್ ರೊಂದಿಗಿನ ಒಡನಾಟದ ಕೆಲವು ಕ್ಷಣಗಳನ್ನು ನೆನಪಿಸಿಕೊಂಡರು.

ಪ್ರಧಾನಿ ಮೋದಿ ಮೆಚ್ಚುಗೆ ಗಳಿಸಿದ ಬೆಂಗಳೂರು ಹುಡುಗಿಯ ಪ್ರಶ್ನೆ ಪ್ರಧಾನಿ ಮೋದಿ ಮೆಚ್ಚುಗೆ ಗಳಿಸಿದ ಬೆಂಗಳೂರು ಹುಡುಗಿಯ ಪ್ರಶ್ನೆ

ಇತ್ತೀಚೆಗಷ್ಟೆ ತಾವು ದೀಪಾವಳಿಯ ಸಮಯದಲ್ಲಿ ಮೂರು ದಿನ ಕಾಡಿನಲ್ಲಿ ಇರುತ್ತಿದ್ದೆ ಎಂಬ ವಿಷಯವನ್ನೂ ಮೋದಿ ಬಹಿರಂಗ ಪಡಿಸಿದ್ದರು. ಇದೀಗ ತಮ್ಮ ತಾಯಿ ಹೀರಾಬೆನ್ ಅವರೊಂದಿಗಿನ ಕೆಲವು ಒಡನಾಟಗಳ ಬಗ್ಗೆ ಮೋದಿ ಮಾತನಾಡಿದ್ದಾರೆ.

ಮುಖ್ಯಮಂತ್ರಿಯಾದಾಗಲೇ ಹೆಚ್ಚು ಖುಷಿಯಾಗಿತ್ತು!

ಮುಖ್ಯಮಂತ್ರಿಯಾದಾಗಲೇ ಹೆಚ್ಚು ಖುಷಿಯಾಗಿತ್ತು!

"ನಾನು ಪ್ರಧಾನಿಯಾದಾಗ ನಮ್ಮ ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ಆದರೆ ನಾನು ಗುಜರಾತ್ ಮುಖ್ಯಮಂತ್ರಿಯಾದಾಗ ಅಮ್ಮ ತುಂಬಾ ಸಂತಸಪಟ್ಟಿದ್ದರು. ಪ್ರಧಾನಿಯಾದಾಗ ಅವರು ಅಷ್ಟೊಂದು ಸಂತಸ ವ್ಯಕ್ತಪಡಿಸಿರಲಿಲ್ಲ" ಎಂದು ಮೋದಿ ಹೇಳಿದರು.

ಮಕ್ಕಳ ಅಂಕಪಟ್ಟಿ ಪೋಷಕರ ಗುರುತಿನ ಚೀಟಿ ಆಗಬಾರದು: ಮೋದಿ ಮಕ್ಕಳ ಅಂಕಪಟ್ಟಿ ಪೋಷಕರ ಗುರುತಿನ ಚೀಟಿ ಆಗಬಾರದು: ಮೋದಿ

ಗುಜರಾತಿಗೆ ವಾಪಸ್ಸಾಗಿದ್ದಕ್ಕೆ ಸಂತಸ

ಗುಜರಾತಿಗೆ ವಾಪಸ್ಸಾಗಿದ್ದಕ್ಕೆ ಸಂತಸ

"ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ದೆಹಲಿಯಲ್ಲಿದ್ದೆ. ರಾಜಧಾನಿಯಿಂದ ತಾಯಿಯ ಆಶೀರ್ವಾದ ಪಡೆಯಲು ಗುಜರಾತಿಗೆ ತೆರಳಿದಾಗ, ನನ್ನ ತಾಯಿ ನನ್ನನ್ನು ತಬ್ಬಿಕೊಂಡು, ನೀನು ಮತ್ತೆ ಗುಜರಾತಿಗೆ ವಾಪಸ್ ಬಂದೆ ಎಂಬುದೇ ನನಗೆ ಸಂತೋಷ ಎಂದಿದ್ದರು. ತಾಯಿ ಹೃದಯ ಎಂದರೆ ಅದೇ" ಎಂದು ಆ ದಿನಗಳನ್ನು ಮೆಲಕುಹಾಕಿಕೊಂಡರು.

ಪಿಎಂ ಮೋದಿಗೆ ಸೇರಿದ 270 ಗಿಫ್ಟ್ ಹರಾಜು, 5 ಲಕ್ಷ ರು ಗರಿಷ್ಠ ಬಿಡ್ಡಿಂಗ್! ಪಿಎಂ ಮೋದಿಗೆ ಸೇರಿದ 270 ಗಿಫ್ಟ್ ಹರಾಜು, 5 ಲಕ್ಷ ರು ಗರಿಷ್ಠ ಬಿಡ್ಡಿಂಗ್!

ಆಣೆ ಮಾಡಿಸಿಕೊಂಡಿದ್ದ ಅಮ್ಮ

ಆಣೆ ಮಾಡಿಸಿಕೊಂಡಿದ್ದ ಅಮ್ಮ

"ನೋಡು ಮಗನೇ, ನೀನು ಏನು ಮಾಡುತ್ತೀಯಾ ಅನ್ನೋದು ನನಗೆ ಗೊತ್ತಿಲ್ಲ. ಆದರೆ ನೀನು ನನಗೊಂದು ಆಣೆ ಮಾಡಬೇಕು. ನೀವು ಯಾವತ್ತಿಗೂ ಲಂಚ ತೆಗೆದುಕೊಳ್ಳುವುದಿಲ್ಲ, ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಎಂದು ಮಾತುಕೊಡು" ಎಂದಿದ್ದರು. ಆ ಮಾತು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.

ಅಕ್ಕರೆಯ ಸಾಕಾರಮೂರ್ತಿ ಅಮ್ಮ

ಅಕ್ಕರೆಯ ಸಾಕಾರಮೂರ್ತಿ ಅಮ್ಮ

ನಮ್ಮಮ್ಮನಿಗೆ ಪ್ರಧಾನಿ, ಮುಖ್ಯಮಂತ್ರಿ ಎಂಬುದೆಲ್ಲ ಹೆಚ್ಚು ಮಹತ್ವದ್ದೆನ್ನಿಸಲಿಲ್ಲ. ಆಕೆಗೆ ನನಗೊಂದು ಸಾಮಾನ್ಯ ಕೆಲಸ ಸಿಕ್ಕಿದೆ ಎಂದರೂ, ಅವರು ಇಡೀ ಊರಿಗೂ ಮಿಠಾಯಿ ಹಂಚುವಷ್ಟು ಮಮತಾಮಯಿ, ಮುಗ್ಧೆ ಎಂದು ತಮ್ಮಮ್ಮನ ಕುರಿತು ಮೋದಿ ಹೇಳಿದರು.

English summary
Minister Narendra Modi said that for his mother, the bigger milestone was not when he became the Prime Minister but when he became the chief minister of Gujarat, PM Modi said in a five-part interview to popular social media page Humans of Bombay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X