• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಲಿಕೆ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಪಠಣ, ಕಾರಣ ಕೇಳಿ ನೋಟಿಸ್

|

ನವದೆಹಲಿ, ಅಕ್ಟೋಬರ್ 7: ಶಿಕ್ಷಣ ಇಲಾಖೆ ನಡೆಸುವ ಶಾಲೆಗಳಲ್ಲಿ 'ಗಾಯತ್ರಿ ಮಂತ್ರ' ಪಠಣ ಮಾಡುವಂತೆ ಆದೇಶ ನೀಡಿದ್ದಕ್ಕಾಗಿ ದೆಹಲಿ ಅಲ್ಪಸಂಖ್ಯಾತರ ಆಯೋಗವು ಉತ್ತರ ದೆಹಲಿ ನಗರ ಪಾಲಿಕೆಗೆ ನೋಟಿಸ್ ನೀಡಿದೆ. ಆಯೋಗದ ಅಧ್ಯಕ್ಷರಾದ ಝಫರುಲ್ ಇಸ್ಲಾಮ್ ಖಾನ್ ಮಾತನಾಡಿ, ಈಚೆಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇಂಥದ್ದೊಂದು ಆದೇಶ ನೀಡಿದ ಕಾರಣವನ್ನು ವಿವರಿಸುವಂತೆ ನೋಟಿಸ್ ನೀಡಲಾಗಿದೆ. "ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿ ತೆಗೆದುಕೊಂಡ ನಿಲುವಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವಿಭಜನೆ ಮಾಡಿದಂತೆ ಆಗಲ್ಲ. ಅಲ್ಪಸಂಖ್ಯಾತ ಸಮುದಾಯದ ಹಲವರು ವಿದ್ಯಾರ್ಥಿಗಳಿದ್ದು, ಅವರಿಗೆ ಧಾರ್ಮಿಕ ರೀತಿಯಲ್ಲಿರುವ ಈ ಮಂತ್ರ ಪಠಣ ಇಷ್ಟವಾಗುವುದಿಲ್ಲ" ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಗಾಯತ್ರಿ ಮಂತ್ರದೊಂದಿಗೆ ಸಂಸತ್ ಕಲಾಪ ಆರಂಭವಾಲಿ

ಇದಕ್ಕೆ ಉತ್ತರ ನೀಡಿರುವ ಉತ್ತರ ದೆಹಲಿಯ ಪಾಲಿಕೆ, ಗಾಯತ್ರಿ ಮಂತ್ರ ಪಠಣವನ್ನು ಎಲ್ಲರಿಗೂ ಕಡ್ಡಾಯಗೊಳಿಸಿಲ್ಲ ಎಂದು ತಿಳಿಸಿದೆ. ಅಂದ ಹಾಗೆ ಪಾಲಿಕೆಯಿಂದ 765 ಪ್ರಾಥಮಿಕ ಶಾಲೆಗಳನ್ನು ನಡೆಸಲಾಗುತ್ತಿದ್ದು, 2.2 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಬಿಗ್ ಬಾಸ್ ನಲ್ಲಿ ಗಾಯತ್ರಿ ಮಂತ್ರಕ್ಕೆ ಅವಮಾನ, ಬ್ರಾಹ್ಮಣರ ಆಕ್ರೋಶ

ಸೆಪ್ಟೆಂಬರ್ ಆರರಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿ, ಶಾಲೆಗಳಲ್ಲಿ ರಾಷ್ಟ್ರಗೀತೆ ಗಾಯನ, ಪ್ರಾರ್ಥನೆ ಮತ್ತು ಗಾಯತ್ರಿ ಮಂತ್ರ ಪಠಣಕ್ಕೆ ಸೂಚನೆ ನೀಡಿತ್ತು.

English summary
The Delhi Minorities Commission has issued a notice to the North Delhi Municipal Corporation (NDMC) over a circular issued for the recital of 'Gayatri Mantra' in schools run by its education department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X