ದೆಹಲಿಯಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ 7 ಸಾವಿರ ಕೊರೊನಾ ಸೋಂಕಿತರು ಪತ್ತೆ

ದೆಹಲಿ, ನವೆಂಬರ್ 07: ದೆಹಲಿಯಲ್ಲಿ ಕೊರೊನಾವೈರಸ್‌ನ ಮೂರನೇ ಅಲೆ ಶುರುವಾಗಿದೆ.

ಈಗ ಜನರಿಗೆ ಮತ್ತಷ್ಟು ನಡುಕ ಶುರುವಾಗಿದೆ. ಎರಡು ಬಾರಿ ಸೋಂಕಿನ ಪ್ರಮಾಣ ಕಡಿಮೆಯಾಗಿ ಪ್ರಕರಣಗಳು ಸಾವಿರಕ್ಕೆ ಇಳಿದು ಮತ್ತೆ ಹೆಚ್ಚಾಗಿದ್ದು, ಆತಂಕ ಆರಂಭವಾಗಿದೆ.

ಒಂದೇ ದಿನ 7178 ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯಲ್ಲಿ ಕೊರೊನಾ ಸೋಂಕು ಆರಂಭವಾದಾಗಿನಿಂದ ಒಂದೇ ದಿನ ಇಷ್ಟೊಂದು ಪ್ರಮಾಣದ ಸೋಂಕಿತರು ಪತ್ತೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ.

For First Time Delhi Crosses 7,000 Daily Coronavirus Cases

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಿತ್ಯ 6 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿದ್ದವು. ನವೆಂಬರ್ 4 ರಂದು 6842 ಪ್ರಕರಣಗಳು ಪತ್ತೆಯಾಗಿತ್ತು.ದೆಹಲಿಯಲ್ಲಿ ಈಗ ಒಟ್ಟು 4,23,831 ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. ಶೇ.89ರಷ್ಟು ಚೇತರಿಕೆ ಕಂಡಿದ್ದಾರೆ.

ಚಳಿಗಾಲದಲ್ಲಿ ವಾಯುಗುಣಮಟ್ಟ ಕುಸಿಯಲಿದ್ದು, ಇದು ಕೊರೊನಾ ಸೋಂಕಿತರಿಗೆ ಮತ್ತಷ್ಟು ಅಪಾಯವನ್ನುಂಟು ಮಾಡಲಿದೆ.ಇದರಿಂದ ಉಸಿರಾಟ ಸಮಸ್ಯೆಯೂ ಹೆಚ್ಚಾಗಲಿದೆ.

ದೆಹಲಿ ಭಾರತದ ಕೊರೊನಾ ರಾಜಧಾನಿಯಾಗಲು ಹೊರಟಿದೆ, ಸೋಂಕನ್ನು ಕಡಿಮೆ ಮಾಡಲು ಶೀಘ್ರ ಕಾರ್ಯಪ್ರವೃತ್ತರಾಗಿ ಎಂದು ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+