ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿತು 4 ಕೆ.ಜಿ ಚಿನ್ನ!

Posted By:
Subscribe to Oneindia Kannada

ನವದೆಹಲಿ, ನವೆಂಬರ್ 16: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಮೂಲಿಗಿಂತ ಆಶ್ಚರ್ಯದ ಸನ್ನಿವೇಶ. ಅದಕ್ಕೆ ಕಾರಣವಾಗಿದ್ದು ಲಗ್ಗೇಜ್ ಬ್ಯಾಗೊಂದರಲ್ಲಿ ಸಿಕ್ಕ 140 ಚಿನ್ನದ ನಾಣ್ಯಗಳು. ಈ ನಾಣ್ಯಗಳು ಮುಂಬೈ ಮೂಲದ ಫಹಾದ್ ಎಂಬಾತನಿಗೆ ಸೇರಿದ್ದು ಎಂಬುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.

'ಆತನ ಬ್ಯಾಗ್ ನಲ್ಲಿ 143 ಚಿನ್ನದ ನಾಣ್ಯಗಳಿದ್ದವು. ಅದರ ಒಟ್ಟು ತೂಕ 4 ಕಿಲೋಗ್ರಾಮ್. ಆತನನ್ನು ವಿಮಾನ ನಿಲ್ದಾಣದಲ್ಲಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಅವರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಚಿನ್ನದ ನಾಣ್ಯಗಳು ಅಧಿಕೃತವಾಗಿ ಸಾಗಿಸುತ್ತಿದ್ದರೆ ಎಂಬುದನ್ನು ನಿರ್ಧರಿಸಬೇಕು' ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.[ಚೆನ್ನೈ: ಆಭರಣ ಮಳಿಗೆಗಳ ಮೇಲೆ ಆದಾಯ ತೆರಿಗೆ ದಾಳಿ]

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500, 1000 ರುಪಾಯಿ ನೋಟು ರದ್ದು ಘೋಷಣೆಯಾದ ನಂತರ ದೇಶದ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಅದಾಯ ತೆರಿಗೆ ಇಲಾಖೆ ಹಾಗೂ ಸೀಮಾ ಸುಂಕದ ಅಧಿಕಾರಿಗಳು ಜಾಗೃತರಾಗಿದ್ದಾರೆ. ತೆರಿಗೆ ಕದಿಯುವವರು ಹಾಗೂ ಹವಾಲಾ ದಂಧೆ ನಡೆಸುವವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Security agencies on Wednesday intercepted a flier at the Indira Gandhi International Airport, New Delhi, for carrying over 140 gold coins in his hand baggage.
Please Wait while comments are loading...