ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಸಂಜೆ ಮೊದಲ ಕೇಂದ್ರ ಸಂಪುಟ ಸಭೆ, ಮೊದಲ ನಿರ್ಣಯವೇನು?

|
Google Oneindia Kannada News

Recommended Video

ಪ್ರಧಾನಿಯಾದ ನಂತರ ಮೋದಿ ಇಂದು ತೆಗೆದುಕೊಳ್ಳಲಿರುವ ಮೊದಲ ನಿರ್ಧಾರ ಏನು ಗೊತ್ತಾ..? | Oneindia kannada

ನವದೆಹಲಿ, ಮೇ 31: ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಸೇರಿ 58 ಸಚಿವರು ಇಂದು ಸಂಜೆ ಮೊದಲ ಸಂಪುಟ ಸಭೆ ನಡೆಸಲಿದ್ದಾರೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಯಾವುದೇ ನಿರ್ಧಿಷ್ಟ ಅಜೆಂಡಾಗಳಿಲ್ಲ, ಆದರೆ ಸಚಿವರ ಪರಿಚಯ ಹಾಗೂ ಲೋಕಸಭಾ ಅಧಿವೇಶನ ಕರೆಯುವುದು ಸಭೆಯ ಪ್ರಮುಖ ಉದ್ದೇಶವಾಗಿರಲಿದೆ.

ಸಭೆಗೂ ಮುನ್ನ ಸಚಿವರ ಖಾತೆಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮೇ 23ರಂದು ಆಯ್ಕೆಯಾಗಿರುವ 542 ಲೋಕಸಭಾ ಸದಸ್ಯರ ಪ್ರಮಾಣ ವಚನ ಸ್ವೀಕಾರವು ಮೊದಲ ಅಧಿವೇಶನದಲ್ಲಿ ನಡೆಯಲಿದೆ. ಹೀಗಾಗಿ ಅಧಿವೇಶನ ಕರೆಯಲು ರಾಷ್ಟ್ರಪತಿಗೆ ಇಂದು ಶಿಫಾರಸ್ಸು ಮಾಡುವ ಸಾಧ್ಯತೆ ಇದೆ.

First meeting of new Union Cabinet likely Today evening

ಕಳೆದ ಬಾರಿ ಮೊದಲ ಸಂಪುಟ ಸಭೆಯಲ್ಲೇ ಕಪ್ಪು ಹಣದ ವಿರುದ್ಧದ ತನಿಖಾ ಸಮಿತಿಯನ್ನು ರಚಿಸಲಾಗಿತ್ತು.ಈ ಮೂಲಕ ದೇಶದ ಜನತೆಗೆ ಸರ್ಕಾರದ ಸ್ಪಷ್ಟ ಸಂದೇಶ ರವಾನಿಸುವ ಪ್ರಯತ್ನ ಮಾಡಲಾಗಿತ್ತು.

ಈ ಬಾರಿಯೂ ಇದೇ ರೀತಿಯ ಸಾಂಕೇತಿಕ ತೀರ್ಮಾನವನ್ನು ತೆಗೆದುಕೊಳ್ಳುವ ಬಗೆಗೂ ಊಹಾಪೋಹಗಳು ಹರಿದಾಡುತ್ತಿವೆ.

English summary
The first meeting of the new Union Cabinet is likely to be held Friday evening, official sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X