Get Updates
Get notified of breaking news, exclusive insights, and must-see stories!

ನವದೆಹಲಿಯಲ್ಲಿ ಮೊದಲ ಎಬೋಲಾ ಪ್ರಕರಣ ಪತ್ತೆ

ನವದೆಹಲಿ, ನ. 19 : ವಿಶ್ವದಲ್ಲಿ ಆತಂಕ ಮೂಡಿಸಿರುವ ಮಹಾಮಾರಿ ಎಬೋಲಾ ಭಾರತದಲ್ಲಿಯೂ ಪತ್ತೆಯಾಗಿದೆ. ಲೈಬೀರಿಯಾದಿಂದ ದೆಹಲಿಗೆ ಬಂದಿ­ಳಿದ ಭಾರತದ ಯುವಕನ ವೀರ್ಯ­ದಲ್ಲಿ ಎಬೋಲಾ ವೈರಸ್‌ ಪತ್ತೆಯಾಗಿದೆ. ಆದರೆ, ರೋಗ ಲಕ್ಷಣಗಳು ಕಂಡುಬಂದಿಲ್ಲ.

ನ.10ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಯುವಕನನ ದೇಹದಲ್ಲಿ ಎಬೋಲಾ ಕಾಯಿಲೆಯ ಸೂಚನೆ­ಗಳು ಕಂಡುಬಂದಿಲ್ಲ. ಆದರೂ ಆತನನ್ನು ವಿಮಾನನಿಲ್ದಾಣದ ವಿಶೇಷ ಆರೋಗ್ಯ ಘಟಕದಲ್ಲಿ ಪ್ರತ್ಯೇಕ­ವಾಗಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ. [ಮಹಾಮಾರಿ ಎಬೋಲಾ ತಡೆಗೆ ಒಬಾಮಾ ಸೂತ್ರ]

Ebola

ಸೆಪ್ಟೆಂಬರ್‌ನಲ್ಲಿ ಲೈಬೀರಿ­­ಯಾದ ಆಸ್ಪತ್ರೆಯಲ್ಲಿ ಎಬೋ­ಲಾಗೆ ಯುವಕ ಚಿಕಿತ್ಸೆ ಪಡೆದುಕೊಂಡಿದ್ದ. ಈಗ ಎಬೋಲಾದಿಂದ ಮುಕ್ತನಾಗಿ­ದ್ದಾನೆ ಎಂದು ಲೈಬೀರಿಯಾ ಆರೋಗ್ಯ ಸಚಿವಾ­ಲಯ ಪ್ರಮಾಣಪತ್ರ ನೀಡಿತ್ತು. ವಿಮಾನ ನಿಲ್ದಾಣದಲ್ಲಿ ಕಡ್ಡಾಯ­ವಾಗಿ ಎಬೋಲಾ ತಪಾಸ­ಣೆಗೆ ಒಳಪ­ಡಿಸ­ಲಾ­ಗಿದ್ದು, ರಕ್ತದಲ್ಲಿ ಎಬೋಲಾ ವೈರಸ್‌ ಕಂಡುಬಂದಿಲ್ಲ.[ಹತ್ತು ಸಾವಿರ ಜನರಿಗಂಟಿದ ಮಹಾಮಾರಿ ಎಬೋಲಾ]

ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಹಾಗೂ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ­ಯಲ್ಲಿ ಯುವಕನ ವೀರ್ಯ ತಪಾಸಣೆ ನಡೆಸಲಾಗಿದ್ದು, ವೀರ್ಯ­ದಲ್ಲಿ ಈ ವೈರಸ್‌ ಪತ್ತೆಯಾ­ಗಿದೆ. ವೈರಸ್‌ ಇಲ್ಲ ಎಂದು ಖಚಿತ­ವಾಗುವವರೆಗೂ ವಿಮಾನ ನಿಲ್ದಾಣದಲ್ಲಿಯೇ ಯುವಕನನ್ನು ಇಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+