Breaking: ಸುಪ್ರೀಂಕೋರ್ಟ್‌ ಆವರಣದ ಬ್ಯಾಂಕ್‌ಗೆ ಬೆಂಕಿ

ನವದೆಹಲಿ, ಜೂ. 8: ಮಂಗಳವಾರ ಬೆಳಗ್ಗೆ ಸುಪ್ರೀಂ ಕೋರ್ಟ್‌ನಲ್ಲಿರುವ ಯುಕೊ ಬ್ಯಾಂಕ್‌ನ ಶಾಖೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗೆ 9.10ರ ಸುಮಾರಿಗೆ ಈ ಘಟನೆ ನಡೆದಿದೆ.

ಸುಪ್ರೀಂಕೋರ್ಟ್‌ನ ಒಂದನೇ ಅಂತಸ್ತಿನ ಬ್ಯಾಂಕ್‌ ಕಚೇರಿಯ ದಾಖಲೆ ಕೊಠಡಿಯಲ್ಲಿದ್ದ ಫಾಲ್ಸ್ ಸೀಲಿಂಗ್, ಹವಾನಿಯಂತ್ರಣ ಘಟಕ ಹಾಗೂ ಕಚೇರಿಯ ಕಡತಗಳಿಗೆ ಬೆಂಕಿ ವ್ಯಾಪಿಸಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಆದರೆ, ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ವ್ಯಕ್ತವಾಗಿದೆ.

ಪೂರ್ವ ದೆಹಲಿಯ ಪುಷ್ಪಾಂಜಲಿ ಎನ್‌ಕ್ಲೇವ್ ಪ್ರದೇಶದ ಜೈನ್ ಆಸ್ಪತ್ರೆಯಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡ ನಂತರ ಈ ಘಟನೆ ನಡೆದಿದೆ. ಒಂದು ದಿನದ ಹಿಂದೆ ಫತೇಪುರ್ ಬೆರಿ ಪ್ರದೇಶದಲ್ಲಿ ರಾಸಾಯನಿಕ ಗೋಡೌನ್‌ನಲ್ಲಿಯೂ ಬೆಂಕಿ ಕಾಣಿಸಿಕೊಂಡಿತ್ತು. ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಗ್ನಿಶಾಮಕ ದಳದವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದರು.

Fire Accident at Bank in Supreme Court Premises

2019 ರ ನಂತರ ಅನಾಜ್ ಮಂಡಿ ಬ್ಲೇಜ್ ಬೆಂಕಿ ಅವಘಡ ಸಂಭವಿಸಿದ ನಂತರ ಈ ಅವಘಡ ಸಂಭವಿಸಿದೆ. ಇನ್ನೊಂದು ಘಟನೆಯಲ್ಲಿ ಮುಂಡ್ಕಾದಲ್ಲಿನ ಕಟ್ಟಡದ ಮೊದಲ ಮಹಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ವೈಫೈ ರೂಟರ್‌ಗಳನ್ನು ತಯಾರಿಸುವ ಸಂಸ್ಥೆಯ ಕಚೇರಿಯಲ್ಲಿ ನಡೆದ ಘಟನೆಯಲ್ಲಿ ಸುಮಾರು 27 ಜನರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು.

ನ್ಯಾಯಾಲಯ ಆವರಣದಲ್ಲಿನ ಬ್ಯಾಂಕ್‌ನಲ್ಲಿ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇದು ಭದ್ರತೆಯ ಹಾಗೂ ಮುಂಜಾಗ್ರತೆಯ ಪ್ರಶ್ನೆಯನ್ನು ಮಾತ್ರ ತಳ್ಳಿಹಾಕಿಲ್ಲ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮ ವಹಿಸುವುದು ಅಗತ್ಯ ಎಂದು ಸಾರ್ವಜನಿಕ ಅಭಿಪ್ರಾಯಗಳು ಕೇಳಿಬಂದಿವೆ. ಸದ್ಯ ಈ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮುಂದೆ ಇಂತಹ ಅವಘಡಗಳು ನಡೆಯದಿರಲಿ ಎಂಬುದು ಜನರ ಆಶಯ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+