• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಫೋಟಕ ಮಾಹಿತಿ: ದೆಹಲಿಯ ಫ್ಯಾಶನ್ ಡಿಸೈನರ್ ನನ್ನು ಕೊಂದಿದ್ದು ಆಕೆಯ ಟೈಲರ್!

|

ನವದೆಹಲಿ, ನವೆಂಬರ್ 15: ದೆಹಲಿಯ ವಸಂತ್ ಕುಂಜ್ ನಲ್ಲಿ ಗುರುವಾರ ಬೆಳಿಗ್ಗೆ ನಡೆದ ಅವಳಿಕೊಲೆ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ.

ಐವತ್ತು ವರ್ಷ ವಯಸ್ಸಿನ ಮಾಲಾ ಲಖನಿ ಮತ್ತು ಆಕೆಯ ಮನೆಕೆಲಸದಾಕೆಯನ್ನು ದುಷ್ಕರ್ಮಿಗಳು ಕೊಂದಿದ್ದಾರೆ.

ನಮ್ಮ ಮಕ್ಕಳಿಗಾಗಿಯಾದರೂ ನನ್ನ ಕೊಲ್ಲಬೇಡಿ ಎಂದು ಬೇಡಿಕೊಂಡರೂ ಕರುಣೆಯೇ ಬರಲಿಲ್

ಬೆಳಿಗ್ಗಿನ ಜಾವ ಸುಮಾರು ಮೂರು ಗಂಟೆಯ ಸಮಯದಲ್ಲಿ ಮಾಲಾ ಲಖನಿ ಮನೆಯಿಂದ ಜೋರಾಗಿ ಗಲಾಟೆಗಳು ಕೇಳಿಸಿವೆ. ಇದರಿಂದ ಆತಂಕಗೊಂಡ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಸಂತ್ ಎನ್ ಕ್ಲೇವ್ ಅಪಾರ್ಟ್ ಮೆಂಟಿನ ಎ ಬ್ಲಾಕ್ ನಲ್ಲಿದ್ದ ಮಾಲಾ ಲಖನಿ ಮನೆಗೆ ಪೊಲೀಸರು ಆಗಮಿಸುವ ಹೊತ್ತಿಗೆ ಅವಳಿ ಕೊಲೆ ನಡೆದಿದೆ.

ಟೈಲರ್ ನಿಂದಲೇ ಕೊಲೆ

ಟೈಲರ್ ನಿಂದಲೇ ಕೊಲೆ

ಫ್ಯಾಶನ್ ಡಿಸೈನರ್ ಆಗಿದ್ದ ಮಾಲಾ ಲಖನಿ ದೆಹಲಿಯಲ್ಲಿ ಎರಡು ಕಡೆ ಹೊಲಿಗೆ ಅಂಗಡಿಗಳನ್ನು ಹೊಂದಿದ್ದರು. ಆಕೆಯ ಬಳಿ ಟೈಲರ್ ಆಗಿ ಕೆಲಸಕ್ಕಿದ್ದ ರಾಹುಲ್ ಅನ್ವರ್ ಎಂಬ ವ್ಯಕ್ತಿಯೇ ಮಾಲಾ ಅವರನ್ನು ಕೊಂದಿರುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಮನೆಯನ್ನು ದೋಚಲು ಬಂದ ದರೋಡೆಕೋರರೇ ಈ ಕೊಲೆ ಮಾಡಿದ್ದಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಪ್ರಕರಣಕ್ಕೆ ಬೇರೆಯದೇ ತಿರುವು ಸಿಕ್ಕಿದೆ.

ಪೊಲೀಸ್ ಠಾಣೆ ಬಳಿ ತೆರಳಿದ್ದ ಕೊಲೆಗಾರರು!

ಪೊಲೀಸ್ ಠಾಣೆ ಬಳಿ ತೆರಳಿದ್ದ ಕೊಲೆಗಾರರು!

ಆರೋಪಿ ರಾಹುಲ್ ಅನ್ವರ್, ಮಾಲಾ ಅವರ ಬಳಿ ಟೈಲರ್ ಕೆಲಸ ಮಾಡುತ್ತಿದ್ದು, ಆತನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡುವ ಸಂದರ್ಭದಲ್ಲಿ ರಾಹುಲ್ ಜೊತೆ ಇನ್ನಿಬ್ಬರು ನೆರವು ನೀಡಿದ್ದರು. ಕೊಲೆ ಮಾಡಿದ ನಂತರ ಈ ಮೂವರೂ ಪೊಲೀಸ್ ಠಾಣೆಯ ಹಾದಿಯಲ್ಲೇ ನಡೆದು ಹೋಗಿದ್ದರು.

ಬೆಂಗಳೂರಲ್ಲಿ ಹಾಡುಹಗಲೇ ಭೀಕರ ಕೊಲೆ: ಭಯ ಹುಟ್ಟಿಸುವಂತಿದೆ

ಹತ್ಯೆ ತಡೆಯಲು ಬಂದ ಮನೆಕೆಲಸದಾಕೆಯ ಕೊಲೆ

ಹತ್ಯೆ ತಡೆಯಲು ಬಂದ ಮನೆಕೆಲಸದಾಕೆಯ ಕೊಲೆ

ಮಾಲಾ ಅವರನ್ನು ಹತ್ಯೆ ಮಾಡಲು ಬಂದಿದ್ದ ಈ ಮೂವರನ್ನು ತಡೆಯಲು ಹೋದ ಮನೆಕೆಲಸದಾಕೆಯನ್ನೂ ದುಷ್ಕರ್ಮಿಗಳು ಕೊಂದಿದ್ದಾರೆ. ಚಾಕುವಿನಿಂದ ಇರಿದುವ ಇಬ್ಬರನ್ನೂ ಕೊಲೆ ಮಾಡಲಾಗಿದ್ದು, ಹಣದಾಸೆಗೇ ಕೊಲೆ ನಡೆದಿದೆ ಎನ್ನಲಾಗಿದೆ. ಮಾಲಾ ಅವರ ಮೃತದೇಹ ಅವರ ಬೆಡ್ ರೂಂ ನಲ್ಲಿ ಪತ್ತೆಯಾದರೆ, ಕೆಲಸದಾಕೆಯ ಮೃತದೇಹ ಹಾಲ್ ನಲ್ಲಿ ಪತ್ತೆಯಾಗಿತ್ತು.

ಮಾಲಾ ಅವರ ಮನೆಗೆ ಬರುತ್ತಿದ್ದ ರಾಹುಲ್

ಮಾಲಾ ಅವರ ಮನೆಗೆ ಬರುತ್ತಿದ್ದ ರಾಹುಲ್

ಮಾಲಾ ಅವರು ಬಟ್ಟೆಯನ್ನು ಕತ್ತರಿಸುವ ಮತ್ತು ಟೈಲರಿಂಗ್ ಮಾಡುವ ಬಗ್ಗೆ ತರಬೇತಿ ನೀಡುವ ಕಾರ್ಯಾಗಾರವನ್ನು ಅವರ ಮನೆಯಲ್ಲಿಯೇ ಹಮ್ಮಿಕೊಂಡಿದ್ದರು. ಆಗ ರಾಹುಲ್ ಅವರ ಮನೆಗೆ ಹಲವು ಬಾರಿ ಬಂದಿದ್ದ. ಮನೆಯ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಆತ ತಮ್ಮ ಸ್ನೇಹಿತರಾದ ರಹಮತ್ ಮತ್ತು ವಾಸಿಮ್ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ. ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು, ಲಖನಿ ಅವರ ಕಾರಿನಲ್ಲೇ ಆರೋಪಿಗಳು ಪರಾರಿಯಾಗಿದ್ದರು.

ಲಂಡನ್ನಿನಲ್ಲಿ ಭಾರತೀಯ ಮೂಲದ ಗರ್ಭಿಣಿ ಹತ್ಯೆ,ಪವಾಡದಂತೆ ಬದುಕಿದ ಶಿಶು!

English summary
A 50 year old fashin designer and her servant were found murdered in her house in Vasant Kunj, Delhi on thursday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X