ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಾಯುಮಾಲಿನ್ಯಕ್ಕೆ ಕಾರಣ NASA ಫೋಟೋದಿಂದ ಸತ್ಯ ಬಯಲು

|
Google Oneindia Kannada News

ನವದೆಹಲಿ, ನವೆಂಬರ್ 18: ದಿನೇ ದಿನೇ ದೆಹಲಿ ವಾಯುಮಾಲಿನ್ಯ ಹದಗೆಡುತ್ತಿದ್ದು ಆತಂಕವನ್ನ ಸೃಷ್ಟಿ ಮಾಡಿದೆ. ಇದಕ್ಕೆ ಕಾರಣವೇನು ಎನ್ನುವುದಕ್ಕೆ NASA ಚಿತ್ರ ಉತ್ತರ ನೀಡಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಬೆಂಕಿಯಿಂದ ಹೊಗೆ ನದಿಯಂತೆ ದೆಹಲಿಯತ್ತ ಹರಿಯುತ್ತಿರುವುದನ್ನು ನಾಸಾ ಉಪಗ್ರಹ ಗುರುತಿಸಿದೆ. ನವೆಂಬರ್ 11 ರಂದು ಸೆರೆಹಿಡಿದ ಚಿತ್ರದಲ್ಲಿ ರಾಷ್ಟ್ರ ರಾಜಧಾನಿ ಮತ್ತು ಅದರ ನೆರೆಹೊರೆಯ ಪ್ರದೇಶಗಳು ದೊಡ್ಡ ಹೊಗೆಯಿಂದ ಆವೃತವಾಗಿವೆ.

ಫೋಟೋವು ಪಂಜಾಬ್, ಹರಿಯಾಣ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ದೊಡ್ಡ ಪ್ರಮಾಣದ ಬೆಂಕಿಯನ್ನು ಪ್ರತಿನಿಧಿಸುವ 'ಕೆಂಪು ಚುಕ್ಕೆಗಳನ್ನು' ತೋರಿಸಿದೆ. ಹೆಚ್ಚಿದ ಬೆಂಕಿಯ ಚಟುವಟಿಕೆಗೆ ಪ್ರತಿಕ್ರಿಯಿಸಿದ ನಾಸಾ ವಿಜ್ಞಾನಿ, ಇದೇ ನವೆಂಬರ್ 11ರಂದು ಕನಿಷ್ಠ 22 ಮಿಲಿಯನ್ ಜನರು ಕೃಷಿ ಭೂಮಿಯಲ್ಲಿ ಕಳೆ ಸುಟ್ಟಿದ್ದಾರೆಂದು ಹೇಳಿದರು. "ನವೆಂಬರ್ 11 ರಂದು ಪ್ರದೇಶದ ಗಾತ್ರ ಮತ್ತು ಈ ಪ್ರದೇಶದಲ್ಲಿನ ಜನಸಂಖ್ಯಾ ಸಾಂದ್ರತೆಯನ್ನು ನೋಡಿದಾಗ ಅಂದಾಜಿನ ಪ್ರಕಾರ, ಒಂದು ದಿನದಲ್ಲಿ ಕನಿಷ್ಠ 22 ಮಿಲಿಯನ್ ಜನರು ಕಳೆ ಸುಟ್ಟಿದ್ದಾರೆ ಎಂದು ನಾನು ಹೇಳುತ್ತೇನೆ" ಎಂದು ರಿಸರ್ಚ್ ಅಸೋಸಿಯೇಷನ್ ​​(USRA) ನಾಸಾದ ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್‌ನ ವಿಜ್ಞಾನಿ ಪವನ್ ಗುಪ್ತಾ ಹೇಳಿದರು.

ನಗರದಲ್ಲಿ ಮಾಲಿನ್ಯದ ಮಟ್ಟವು ಅಪಾಯಕಾರಿಯಾಗಿ ಹೆಚ್ಚಿರುವುದರಿಂದ ವಾಯುಮಾಲಿನ್ಯಕ್ಕೆ ಕಾರಣ ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಇನ್ನೂ ಸರ್ಕಾರ ವಾಯುಮಾಲಿನ್ಯದ ತೊಂದರೆಗಳನ್ನು ತಡೆಗಟ್ಟಲು ಐದು ವಿದ್ಯುತ್ ಕೇಂದ್ರಗಳನ್ನು ಮುಚ್ಚಲು ಮತ್ತು ಶಾಲೆಗಳ ಮುಚ್ಚುವಿಕೆಯನ್ನು ವಿಸ್ತರಿಸಲು ಸೂಚಿಸಿದೆ. ಉತ್ತರ ಭಾರತದಲ್ಲಿ ಹೊಸ ಬಿತ್ತನೆಯ ಋತುವಿನ ಮುಂಚೆಯೇ ರೈತರು ತಮ್ಮ ಹೊಲಗಳಲ್ಲಿ ಕಳೆಯನ್ನು ಸುಡುತ್ತಾರೆ. ಇದರ ಪರಿಣಾಮ ವಿಷಕಾರಿ ಹೊಗೆ ದೆಹಲಿಯನ್ನು ಆವರಿಸಿದೆ ಎಂದು ನಾಶಾ ಚಿತ್ರ ತೋರುತ್ತದೆ. ಚಿತ್ರದಲ್ಲಿ ದಟ್ಟವಾದ ಹೊಗೆ ದೆಹಲಿಯಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿರುವುದು ಕಂಡುಬರುತ್ತದೆ.

Farm Fires Burn cause River Of Smoke Over Delhi, Nasa Picture reveals

ಆದಾಗ್ಯೂ ಬೆಳೆ ಬೆಂಕಿಯಿಂದ ಉದ್ಬವಿಸುವ ಹೊಗೆ ಮಾತ್ರ ವಾಯುಮಾಲಿನ್ಯಕ್ಕೆ ಕೊಡುಗೆ ನೀಡುವುದಿಲ್ಲ. ಮೋಟಾರು ವಾಹನಗಳ ಹೊಗೆ, ಕೈಗಾರಿಕಾ ಮತ್ತು ನಿರ್ಮಾಣ ಚಟುವಟಿಕೆ ಮತ್ತು ರಸ್ತೆ ಧೂಳು ಕೂಡ ಮಾಲಿನ್ಯಕಾರಕಗಳನ್ನು ಉತ್ಪಾದಿಸುತ್ತವೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಬಿಕ್ಕಟ್ಟಿಗೆ ರೈತರು ಕಳೆ ಸುಡುವಿಕೆಯನ್ನು ಮಾತ್ರ ದೂಷಿಸುತ್ತಿರುವುದನ್ನು ಸುಪ್ರೀಂ ಕೋರ್ಟ್ ಬುಧವಾರ ಹೊರಗಿಟ್ಟಿದೆ, "ದೆಹಲಿಯಲ್ಲಿ ಪಂಚತಾರಾ ಸೌಲಭ್ಯಗಳಲ್ಲಿ ಕುಳಿತಿರುವ ಜನರು ರೈತರನ್ನು ಅವರ ಕಷ್ಟವನ್ನು ಗಮನಿಸದೆ ಆರೋಪಿಸುತ್ತಾರೆ" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ದೆಹಲಿ ರಸ್ತೆಗಳಲ್ಲಿ "ಹೈ-ಫೈ ಕಾರುಗಳು" ಮತ್ತು "ಗ್ಯಾಸ್ ಗಝ್ಲರ್‌ಗಳು" ಇದಕ್ಕೆ ಕಾರಣವಾಗಿರಬಹುದು ಎಂದು ಅದು ಸೂಚಿಸಿದೆ.

Farm Fires Burn cause River Of Smoke Over Delhi, Nasa Picture reveals

ದೆಹಲಿಯಲ್ಲಿ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸುವುದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಇದರಿಂದ ವಾಯುಮಾಲಿನ್ಯ ನಿಯಂತ್ರಿಸುವುದರ ಮೇಲೆ ಪರಿಣಾಮ ಬೀರುವುದಿಲ್ಲ, ಈ ಕ್ರಮ ಅಷ್ಟರಮಟ್ಟಿಗೆ ಪ್ರಯೋಜನಕಾರಿಯೂ ಆಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ನಿನ್ನೆ ನಡೆದ ವಿಚಾರಣೆ ವೇಳೆ ವಾದಿಸಿತು. ಜೊತೆಗೆ ದೆಹಲಿ ವಾಯುಮಾಲಿನ್ಯಕ್ಕೆ ನೆರೆ ರಾಜ್ಯಗಳ ಕಳೆ ಸುಡುವಿಕೆ ಕಾರಣ ಎಂದು ಹೇಳಿತ್ತು. ಇದಕ್ಕೆ ಸಾಕಷ್ಇ ಎಂಬಂತೆ ನಾಸಾ ಇಂದು ಚಿತ್ರವನ್ನು ಬಿಡುಗಡೆ ಮಾಡಿದೆ.

Recommended Video

ಗೇಮ್ ಪ್ಲ್ಯಾನ್ ಸಕ್ಸಸ್ ಆಗಿದ್ದು ಹೇಗೆ ಅಂತಾ ಹೇಳಿದ ರೋಹಿತ್ | Oneindia Kannada

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಮಂಗಳವಾರ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ವಲಯದಲ್ಲಿ 403 ಆಗಿದೆ. ಸೋಮವಾರ ಇದೇ ಗಾಳಿಯ ಗುಣಮಟ್ಟ ಸೂಚ್ಯಂಕವು 353 ಆಗಿದೆ. ಮಧ್ಯರಾತ್ರಿ 12.27 ಕ್ಕೆ ದೆಹಲಿಯಲ್ಲಿ ಒಟ್ಟಾರೆ AQI 397 ಆಗಿತ್ತು, ಇದು 'ತೀವ್ರ' ವರ್ಗದ ಗಡಿಯಾಗಿದೆ; 400 ಕ್ಕಿಂತ ಹೆಚ್ಚಿನ ಓದುವಿಕೆಗಳನ್ನು 'ತೀವ್ರ' ಅಥವಾ 'ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

English summary
A river of smoke streaming from farm fires in Punjab and Haryana toward Delhi has been spotted by a NASA satellite.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X