ಪೈಲಟ್ ಅಭಿನಂದನ್ ವರ್ಧಮಾನ್ ಹೆಸರಲ್ಲಿ 'ನಕಲಿ' ಟ್ವಿಟ್ಟರ್ ಖಾತೆ

ಬೆಂಗಳೂರು, ಮಾರ್ಚ್ 03: ಭಾರತೀಯ ವಾಯು ಸೇನೆಯ ವಿಂಗ್​ ಕಮಾಂಡರ್​ಪೈಲಟ್ ಅಭಿನಂದನ್ ವರ್ಧಮಾನ್ ಹೆಸರಲ್ಲಿ ಆರಂಭವಾಗಿರುವ ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟ್ಟರ್ ಖಾತೆ ನಕಲಿ ಎಂದು ಸರ್ಕಾರಿ ಮೂಲಗಳಿಂದ ತಿಳಿದು ಬಂದಿದೆ.

ಪಾಕಿಸ್ತಾನದಿಂದ ಶುಕ್ರವಾರದಂದು ಭಾರತಕ್ಕೆ ಮರಳಿದ ಅಭಿನಂದನ್ ಅವರ ಹೆಸರಿನಲ್ಲಿ @Abhinandan_wc ಎಂಬ ಅಕೌಂಟ್ ತೆರಯಲಾಗಿದೆ. ಹಲವು ಸಂದೇಶಗಳನ್ನು ಶೇರ್ ಮಾಡಲಾಗಿದೆ. ಇಂಗ್ಲಿಷ್​ಮತ್ತು ತಮಿಳಿನಲ್ಲಿ ಟ್ವೀಟ್​ಗಳನ್ನು ಮಾಡಲಾಗಿತ್ತು. ಹೀಗಾಗಿ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡ ಕೇಂದ್ರ ಸರ್ಕಾರ, ಇದು ಅಭಿನಂದನ್ ಅವರ ಅಧಿಕೃತ ಅಕೌಂಟ್​ ಅಲ್ಲ ಎಂದು ಸ್ಪಷ್ಟಪಡಿಸಿದೆ.

Fake Twitter Account named after IAF pilot Abhinandan Varthaman

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರದಂದು ಸೇನಾ ಆಸ್ಪತ್ರೆಗೆ ತೆರಳಿ, ಅಭಿನಂದನ್​ಅವರನ್ನು ಭೇಟಿ ಮಾಡಿದ ಚಿತ್ರಗಳು, ಈ ಬೆಳವಣಿಗೆಯನ್ನು ಆ ನಕಲಿ ಖಾತೆಯಲ್ಲಿ ಟ್ವೀಟ್​ ಮಾಡಲಾಗಿತ್ತು. "ನನ್ನನ್ನು ಗೌರವಿಸಿದ್ದಕ್ಕಾಗಿ, ನನ್ನತ್ತ ದೃಷ್ಟಿ ಹರಿಸಿದ್ದಕ್ಕಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್​ ಅವರಿಗೆ ಧನ್ಯವಾದಗಳು" ಎಂದು ಟ್ವೀಟ್​ ಮಾಡಲಾಗಿದೆ.

Fake Twitter Account named after IAF pilot Abhinandan Varthaman

ಪಾಕಿಸ್ತಾನದ ಎಫ್ 16 ಹೊಡೆದುರುಳಿಸಿದ ಮಿಗ್ 21 ಫೈಟರ್ ಜೆಟ್ ನಲ್ಲಿದ್ದ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲಕ್ಕುರುಳಿದ್ದರು. ಪಾಕ್ ಸೇನೆ ವಶದಲ್ಲಿದ್ದ ಅಭಿನಂದನ್ ಅವರನ್ನು ಶುಕ್ರವಾರದಂದು ಭಾರತಕ್ಕೆ ಕಳಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+