ಕಾಂಗ್ರೆಸ್ ಫೇಸ್ ಬುಕ್ ಪುಟ ಬಂದ್ ಸುದ್ದಿಗೆ ಕಾಂಗ್ರೆಸ್ ಪ್ರತಿಕ್ರಿಯೆ ಏನು?

ನವದೆಹಲಿ, ಏಪ್ರಿಲ್ 01: ಸಾಮಾಜಿಕ ಜಾಲ ತಾಣ ದಿಗ್ಗಜ ಫೇಸ್ ಬುಕ್ ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಗೆ ಸೇರಿದ ಅನೇಕ ಪುಟಗಳು ಬಲಿಯಾಗಿವೆ. ಈ ಬಗ್ಗೆ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸುಮಾರು 687 ಪುಟ ಹಾಗೂ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಫೇಸ್ ಬುಕ್ ಹೇಳಿದೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಮನೀಶ್ ತಿವಾರಿ, ಈ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ನಿಖರ ಮಾಹಿತಿಯಿಲ್ಲ. ಈ ಸುದ್ದಿ ನಿಜ ಎಂದು ದೃಢಪಟ್ಟ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಬಹುದು. ಫೇಸ್ ಬುಕ್ ಪುಟಗಳು ನಮ್ಮ ಪಕ್ಷಕ್ಕೆ ಸೇರಿದ್ದವು ಎಂಬುದರ ಬಗ್ಗೆ ಕೂಡಾ ಮಾಹಿತಿಯಿಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆಗಸ್ಟ್ 2014ರಿಂದ ಮಾರ್ಚ್ 2019ರ ಅವಧಿಯಲ್ಲಿ ಸುಮಾರು 39000 ಡಾಲರ್ ಮೊತ್ತವನ್ನು ಜಾಹೀರಾತು ರೂಪದಲ್ಲಿ ಈ ಪುಟಗಳು ಖರ್ಚು ಮಾಡಿವೆ. ಈ ಪುಟಗಳು ಹಾಗೂ ಖಾತೆಗಳು ಫೇಕ್ ಸುದ್ದಿ ಹಬ್ಬಿಸುತ್ತಿವೆ ಎಂಬ ಕಾರಣಕ್ಕೆ ಮಾತ್ರ ಬಂದ್ ಮಾಡಿಲ್ಲ. ಬದಲಿಗೆ ದೃಢಪಡದ ಸುದ್ದಿಗಳನ್ನು ಸ್ಪಾಮ್ ಮಾದರಿ ಪ್ರಸಾರ ಮಾಡಿದ ಕಾರಣ ನೀಡಲಾಗಿದೆ.

Facebook removes 687 pages, Congress spokesman Manish Tewari reaction

ಸುಳ್ಳು ಸುದ್ದಿ, ಐಡೆಂಡೆಟಿ ಇಲ್ಲದ ಖಾತೆಗಳ ಬಗ್ಗೆ ಫೇಸ್ ಬುಕ್ ಬಹಳ ಮುಂಚಿತವಾಗಿ ಅಭಿಯಾನ ನಡೆಸಿದೆ. ಚುನಾವಣೆ ಸಂದರ್ಭದಲ್ಲಿ ಇದು ಕೈಗೊಂಡ ಕ್ರಮ ಎನ್ನಲಾಗುವುದಿಲ್ಲ. ಈ ಹಿಂದೆ ಬಿಜೆಪಿ ಬೆಂಬಲಿತ ಫೇಸ್ ಬುಕ್ ಪುಟಗಳಿಗೂ ಚುರುಕು ಮುಟ್ಟಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+