ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಯುನೈಟೆಡ್ ಕಿಂಗ್ ಡಮ್ ನಿಂದ ಮಲ್ಯ ಹಸ್ತಾಂತರ!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆಬ್ರವರಿ 22: ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಯುನೈಟೆಡ್ ಕಿಂಗ್ ಡಮ್ ಶೀಘ್ರದಲ್ಲಿ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಮೂಲಗಳು ಖಚಿತಪಡಿಸಿವೆ. ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ಹಾಗೂ ನಿಯಮಗಳ ಬಗ್ಗೆ ಭಾರತ-ಬ್ರಿಟಿಷ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಒನ್ಇಂಡಿಯಾ ಪ್ರಯತ್ನಿಸಿದಾಗ ವಿಜಯ್ ಮಲ್ಯ ವಿಚಾರ ಚರ್ಚೆಗೆ ಬಂದ ಬಗ್ಗೆ ಮಾತನಾಡಲು ಅಧಿಕಾರಿಗಳು ನಿರಾಕರಿಸಿದರು. ಇಂಥ ವಿಚಾರದಲ್ಲಿ ಎರಡೂ ದೇಶಗಳ ಮಧ್ಯೆ ಕಾನೂನು ಸಹಕಾರ ಇನ್ನೂ ಹೆಚ್ಚಾಗಬೇಕು ಎಂಬ ಸಂಗತಿಯ ಚರ್ಚೆ ನಡೆದಿದೆ.[ಯುಪಿಎ, ಎನ್ ಡಿಎ ಪಾಲಿಗೆ ನಾನು ಫುಟ್ಬಾಲ್ ಆಗಿದ್ದೇನೆ: ಮಲ್ಯ ವಿಷಾದ]

Vijay Mallya

ಭಾರತ-ಬ್ರಿಟಿಷ್ ಅಧಿಕಾರಿಗಳ ಮಧ್ಯೆ ಈಚೆಗೆ ಎರಡು ದಿನಗಳ ಭೇಟಿ ನಡೆದಿದ್ದು, ಯುಕೆಯಲ್ಲಿರುವ ಭಾರತಕ್ಕೆ 'ಬೇಕಾದ' ಶಂಕಿತರ ಬಗ್ಗೆ ಕೂಡ ಚರ್ಚೆ ನಡೆದಿದೆ. ಹಸ್ತಾಂತರ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ಆಗಲು ಬೇಕಾದ ಕಾನೂನು ಮಾರ್ಪಾಟಿನ ಬಗ್ಗೆ ಕೂಡ ನಿರ್ಧರಿಸಲಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಮಾತುಕತೆ ಫಲಪ್ರದವಾಗಿದೆ.

ಈ ಸಭೆಯಲ್ಲಿ ಭಾರತದ ಕಡೆಯಿಂದ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಇತರ ತನಿಖಾ ಸಂಸ್ಥೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

English summary
India has received a positive response from the United Kingdom on extraditions. This would mean that the extradition of liquor baron Vijay Mallya is likely to happen soon, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X