ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ
ನವದೆಹಲಿ, ಆಗಸ್ಟ್ 27: "ಜವಹರಲಾಲ್ ನೆಹರು ಸ್ಮಾರಕ ಸಂಕೀರ್ಣವನ್ನು ಹೇಗಿದೆಯೋ ಹಾಗೆ ಬಿಟ್ಟುಬಿಡಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ ಬರೆದಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನಕ್ಕೆ ಅಟಲ್ ಜೀ ಹೆಸರು?
ನವದೆಹಲಿಯ ತೀನ್ ಮೂರ್ತಿ ಸಂಕೀರ್ಣದಲ್ಲಿರುವ ನೆಹರು ಸ್ಮಾರಕ ಮತ್ತು ಗ್ರಂಥಾಲಯ(NMML)ದಲ್ಲಿ ಇನ್ನಿತರ ಪ್ರಧಾನಿಗಳ ಸ್ಮಾರಕವನ್ನೂ ನಿರ್ಮಿಸುವ ಕುರಿತು ಚಿಂತನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಮನಮೋಹನ್ ಸಿಂಗ್, "ನೆಹರು ಅವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಲ್ಲ. ಅವರು ಇಡೀ ಭಾರತದ ಆಸ್ತಿ. ಆದ್ದರಿಂದ ಅವರ ಸ್ಮಾರಕಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಆದರೆ ಸರ್ಕಾರ ಈ ಸಂಕೀರ್ಣದಲ್ಲಿ ಬದಲಾವಣೆ ತರುವ ಅಜೆಂಡಾ ಸರ್ಕಾರದ್ದು ಎನ್ನಿಸುತ್ತಿದೆ. ಇದು ಸರಿಯಲ್ಲ" ಎಂದು ಖಡಕ್ಕಾಗಿ ಬರೆದಿದ್ದಾರೆ.
"ನಮ್ಮ ಈ ಭಾವನೆಗೆ ಗೌರವ ನೀಡಿ. ಅಟಲ್ ಬಿಹಾರಿ ವಾಜಪೇಯಿ ಅವರೇ, ಪಂಡಿತ್ ಜೀ ಅವರು ಕಾಲವಾದಾಗ ಅವರ ಸ್ಥಾನವನ್ನು ತೀನ್ ಮೂರ್ತಿಯಲ್ಲಿ ಇನ್ಯಾರೂ ತುಂಬುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು. ಅದನ್ನು ನೆನಪಿಸಿಕೊಳ್ಳಿ" ಎಂದು ಪತ್ರದಲ್ಲಿ ಹೇಳಿದ್ದಾರೆ.