ಹೊಟೇಲ್ ಮುಂದೆ ಗನ್ ಹಿಡಿದು ಮಾಜಿ ಸಂಸದರ ಪುತ್ರನ ಪುಂಡಾಟ

Recommended Video

      ಹೊಟೇಲ್ ಮುಂದೆ ಗನ್ ಹಿಡಿದು ಮಾಜಿ ಸಂಸದರ ಪುತ್ರನ ಪುಂಡಾಟ

      ನವದೆಹಲಿ, ಅಕ್ಟೋಬರ್ 16: ಬಹುಜನ ಸಮಾಜವಾದಿ ಪಕ್ಷದ ಮಾಜಿ ಸಂಸದರ ಪುತ್ರನೊಬ್ಬ ದೆಹಲಿಯ ಫೈವ್ ಸ್ಟಾರ್ ಹೊಟೇಲ್ ವೊಂದರ ಎದುರು ಗನ್ ಹಿಡಿದು ಓಡಾಡುತ್ತಿದ್ದ ಕಾರಣಕ್ಕೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

      ದೆಹಲಿಯ ಫೈವ್ ಸ್ಟಾರ್ ಹೊಟೇಲ್ ಎದುರು ಮಾಜಿ ಸಂಸದ ರಾಕೇಶ್ ಪಾಂಡೆ ಅವರ ಪುತ್ರ ಆಶಿಶ್ ಪಾಂಡೆ ಗನ್ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

      ಮೈಸೂರು ದಸರಾ - ವಿಶೇಷ ಪುರವಣಿ

      ಜೊತೆಗೆ ಹೊಟೇಲ್ ನ ಸಿಬ್ಬಂದಿ ಜೊತೆಗೂ ಮಾತಿನ ಚಕಮಕಿ ನಡೆಯುತ್ತಿರುವುದು ಕಂಡುಬಂದಿತ್ತು. ಆದರೆ ವಡಿಯೋದಲ್ಲಿರುವುದು ಯಾರು ಎಂಬುದು ಗೊತ್ತಾಗಿರಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಆಶಿಶ್ ಪಾಂಡೆ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಹೊಟೇಲ್ ನಲ್ಲಿದ್ದ ಇತರ ಸಿಸಿಟಿವಿ ಕ್ಯಾಮರಾ ಫೋಟೇಜ್ ಮೂಲಕ ಈತ ಆಶಿಶ್ ಪಾಂಡೆಯೇ ಎಂಬುದು ದೃಢವಾಗಿದೆ.

      Ex BSP MPs son brandishes gun outside a 5-star hotel in Delhi

      ಈ ಪ್ರಕರಣವನ್ನು ಪೊಲೀಸರ ಗಮನಕ್ಕೆ ತರದ ಫೈವ್ ಸ್ಟಾರ್ ಹೊಟೇಲ್ ಆಡಳಿತ ಮಂಡಳಿಯನ್ನೂ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+