ವಿವಾದ ಏನೇ ಇರಲಿ, ಇವಿಎಂ ತಯಾರಕ ಕಂಪನಿಗಂತೂ ಭರ್ಜರಿ ಲಾಭ

ಹೈದರಾಬಾದ್, ಜನವರಿ 29: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಲಾಗಿದೆ ಎಂಬ ಆರೋಪ ಪ್ರತಿ ಚುನಾವಣೆಯಲ್ಲಿಯೂ ಕೇಳಿಬರುತ್ತಿದೆ. ಅದು ಸಾಧ್ಯವಿಲ್ಲ ಎಂಬ ವಾದವನ್ನು ಚುನಾವಣಾ ಆಯೋಗ ವಾದಿಸುತ್ತಿದೆ.

ವಿರೋಧ ಪಕ್ಷಗಳು ಮತಯಂತ್ರಗಳನ್ನು ಬಿಟ್ಟು ಈ ಹಿಂದಿನಂತೆಯೇ ಬ್ಯಾಲೆಟ್ ಪೇಪರ್ ಬಳಸುವ ಸಾಂಪ್ರದಾಯಿಕ ಪದ್ಧತಿಗೆ ಮರಳುವ ಬಗ್ಗೆ ಒತ್ತಾಯಿಸುತ್ತಿವೆ.

ಆದರೆ, ಅತ್ತ ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರಗಳನ್ನು ತಯಾರಿಸುವ ಇಸಿಐಎಲ್ ಕಂಪೆನಿಯ ಅದಾಯವಂತೂ ಹೆಚ್ಚಾಗುತ್ತಿದೆ.

evm vvpat maker ecil got order worth of Rs 1800 crore from election commission

ಹಳೆಯ ಇವಿಎಂಗಳ ಬದಲು ಎಂ3 ಆವೃತ್ತಿಯ ಯಂತ್ರಗಳನ್ನು ಒದಗಿಸಲು ಬೇಡಿಕೆ ಬಂದಿದ್ದು, ಇದರಿಂದ ಕಂಪೆನಿಗೆ ಒಳ್ಳೆಯ ಲಾಭ ದೊರಕುತ್ತಿದೆ.

2017-18ರ ಅವಧಿಯಲ್ಲಿ ಇಸಿಐಎಲ್ ವಾರ್ಷಿಕ ವ್ಯವಹಾರ 1,275 ಕೋಟಿ ರೂ. ಇತ್ತು. 2018-19ರ ಹಣಕಾಸು ವರ್ಷದಲ್ಲಿ ಚುನಾವಣಾ ಆಯೋಗ 1,800 ಕೋಟಿ ವೆಚ್ಚದ ಇವಿಎಂ ಮತ್ತು ವಿವಿಪ್ಯಾಟ್‌ಗಳ ಪೂರೈಕೆಗೆ ಬೇಡಿಕೆ ಇಟ್ಟಿದೆ. ಇದರಿಂದ ಇಸಿಐಎಲ್‌ನ ಒಟ್ಟಾರೆ ವಹಿವಾಟು 2,400 ಕೋಟಿ ರೂ.ಗೆ ಹೆಚ್ಚಲಿದೆ.

ಸೇನೆಗೆ ಎಲೆಕ್ಟ್ರಾನಿಕ್ ಫ್ಯೂಸ್‌ಗಳು, ಮಿಲಿಟರಿ ರೇಡಿಯೊಗಳು, ಜಾಮ್ಮರ್, ಅಣು ಸ್ಥಾವರಗಳಿಗೆ ಸಾಧನವನ್ನು ಕೂಡ ಇಸಿಐಎಲ್ ತಯಾರಿಸಿ ಕೊಡುತ್ತದೆ.

2019ರಲ್ಲಿ ಲೋಕಸಭೆ ಹಾಗೂ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುವುದರಿಂದ ನಮ್ಮ ವಹಿವಾಟು 2,600 ಕೋಟಿ ರೂ. ತಲುಪಲಿದೆ. ಹಳೆಯ ಯಂತ್ರಗಳ ಬದಲು ಹೊಸ ಯಂತ್ರಗಳನ್ನು ಬದಲಿಸುವುದರಿಂದ ಆದಾಯ ಹೆಚ್ಚಳವಾಗಲಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+