"ಹಿಟ್ಲರ್ ಕೂಡ ದುಷ್ಕರ್ಮಿಗಳಿಗೆ ಕೆಲಸ ಕೊಟ್ಟಿದ್ದಾನೆ": ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ನವ ದೆಹಲಿ ಮಾರ್ಚ್ 25: "ಹಿಟ್ಲರ್ ಕೂಡ ದುಷ್ಕರ್ಮಿಗಳಿಗೆ ಕೆಲಸ ಕೊಟ್ಟಿದ್ದಾನೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. "ಹಿಟ್ಲರ್ ದಡ್ಡರಿಗೆ ಕೆಲಸ ಕೊಟ್ಟಿದ್ದಾನೆ. ಆದರೆ ಅವನು (ಮೋದಿ) ನಿಮಗೆ ಏನು ಕೊಟ್ಟನು?" ಎಂದು ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ. "ಆದರೆ ಕೇಜ್ರಿವಾಲ್ ನಿಮಗಾಗಿ ಕೆಲಸ ಮಾಡುತ್ತಾರೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಕೇಜ್ರಿವಾಲ್ ನಿಮಗೆ ಔಷಧಿಗಳನ್ನು ನೀಡುತ್ತಾರೆ, ಮೋದಿ ಔಷಧಿಗಳನ್ನು ನೀಡುವುದಿಲ್ಲ. ನಿಮ್ಮ ಕಣ್ಣು ತೆರೆಯಿರಿ, ಅದರಲ್ಲಿ ಬಿಜೆಪಿ ತೆಗೆದು ಆಪ್ ಸೇರಿಕೊಳ್ಳಿ" ಎಂದು ದೆಹಲಿ ಮುಖ್ಯಮಂತ್ರಿ ಜನರಿಗೆ ಅರಿವುವನ್ನು ಮೂಡಿಸಲು ಪ್ರಯತ್ನಿಸಿದರು.
ಜೊತೆಗೆ ತಮ್ಮ ಭಾಷಣದಲ್ಲಿ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಕಾಶ್ಮೀರ ಫೈಲ್‌ಗಳನ್ನು ತೆರಿಗೆ ಮುಕ್ತಗೊಳಿಸಬೇಕೆಂಬ ಬಿಜೆಪಿಯ ಬೇಡಿಕೆಯ ಬಗ್ಗೆ ವಾಗ್ದಾಳಿ ನಡೆಸಿದರು. "ನಮ್ಮನ್ನು ತೆರಿಗೆಮುಕ್ತಗೊಳಿಸುವಂತೆ ಏಕೆ ಕೇಳುತ್ತಿದ್ದೀರಿ? ನೀವು ಅಷ್ಟು ಉತ್ಸುಕವಾಗಿದ್ದರೆ, ವಿವೇಕ್ ಅಗ್ನಿಹೋತ್ರಿಯವರಿಗೆ ಕಾಶ್ಮೀರ ಫೈಲ್ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ. ಆಗ ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು'' ಎಂಬ ಕೇಜ್ರಿವಾಲ್ ಅವರ ಮಾತು ದೆಹಲಿ ವಿಧಾನಸಭೆ ಸದಸ್ಯರ ನಗು ಮತ್ತು ಡೆಸ್ಕ್‌ಗಳ ಬಡಿತಕ್ಕೆ ಕಾರಣವಾಯಿತು.
ನಂತರ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಎಂಟು ವರ್ಷಗಳ ಕಾಲ ದೇಶವನ್ನು ಆಳಿದ ನಂತರವೂ ಪ್ರಧಾನಿ "ರಾಜಕೀಯ ಲಾಭಕ್ಕಾಗಿ ಚಲನಚಿತ್ರದ ಸಹಾಯವನ್ನು ತೆಗೆದುಕೊಳ್ಳಬೇಕಾಗಿದೆ" ಎಂದು ವ್ಯಂಗ್ಯ ಮಾಡಿದರು.

ಆದರೆ ಮುಖ್ಯಮಂತ್ರಿಯವರ ಹೇಳಿಕೆಗೆ ದೆಹಲಿ ಬಿಜೆಪಿ ತಿರುಗೇಟು ನೀಡಿದೆ. ಕೇಜ್ರಿವಾಲ್ ಅವರ ಪ್ರತಿಕ್ರಿಯೆಯು ಕಾಶ್ಮೀರಿ ಪಂಡಿತರ ನೋವಿನ ಬಗ್ಗೆ ಅವರ ಅಸೂಕ್ಷ್ಮತೆಯನ್ನು ತೋರಿಸುತ್ತದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ್ದಾರೆ.
ಪಿಎಂ ಮೋದಿ ಈ ಹಿಂದೆ 'ಕಾಶ್ಮೀರ ಫೈಲ್' ಸಿನಿಮಾವನ್ನು ಶ್ಲಾಘಿಸಿದ್ದರು. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಜ್ಯೋತಿ ಎಂದು ಹೇಳಿಕೊಳ್ಳುವ, ಸತ್ಯವನ್ನು ಹೇಳಲು ಬಯಸದ "ಇಡೀ ಪರಿಸರ ವ್ಯವಸ್ಥೆ" ಯನ್ನು ಕೆಣಕಿದೆ ಎಂದು ಹೇಳಿದ್ದರು.

ಭಯೋತ್ಪಾದನೆಯ ಕಾರಣದಿಂದ ಕಾಶ್ಮೀರಿ ಪಂಡಿತರು ಕಾಶ್ಮೀರಿ ಕಣಿವೆಯಿಂದ ವಲಸೆ ಹೋಗಿರುವುದನ್ನು ಆಧರಿಸಿದ ಕಾಶ್ಮೀರ ಫೈಲ್ಸ್ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಬಿಜೆಪಿ ಆಡಳಿತದ ರಾಜ್ಯಗಳು ಈ ಸಿನಿಮಾವನ್ನು ನೋಡಲು ಜನರಿಗೆ ತೆರಿಗೆ ರಿಯಾಯಿತಿಗಳನ್ನು ನೀಡುತ್ತಿವೆ. ಅದನ್ನು ವೀಕ್ಷಿಸಲು ಸರ್ಕಾರಿ ನೌಕರರಿಗೆ ರಜೆ ನೀಡುತ್ತಿವೆ. ಇದರನ್ನು ಪ್ರತಿಪಕ್ಷಗಳು ಏಕಪಕ್ಷೀಯ ಎಂದು ಪ್ರತಿಪಾದಿಸುತ್ತವೆ. ಜೊತೆಗೆ ಇದನ್ನು ಅತಿಯಾದ ಹಿಂಸಾಚಾರದ ಚಿತ್ರಣವನ್ನು ಎಂದು ಟೀಕಿಸಿವೆ. ಉತ್ತರ ಪ್ರದೇಶ, ತ್ರಿಪುರಾ, ಗೋವಾ, ಹರಿಯಾಣ, ಗುಜರಾತ್ ಮತ್ತು ಉತ್ತರಾಖಂಡ ಸೇರಿದಂತೆ ಬಿಜೆಪಿ ಆಡಳಿತದ ಹೆಚ್ಚಿನ ರಾಜ್ಯಗಳಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಬಿಡುಗಡೆಯಾದ ದಿನದಿಂದ ದೇಶದ ಗಮನ ಸೆಳೆದಿದೆ. ಬಾಕ್ಸಾಫೀಸ್ನಲ್ಲಿ ನಿರೀಕ್ಷೆಗೂ ಮೀರಿ ಅತ್ಯುತ್ತಮ ಗಳಿಕೆ ಮಾಡುತ್ತಿರುವ ಚಿತ್ರದ ಒಟ್ಟಾರೆ ಕಲೆಕ್ಷನ್ 190 ಕೋಟಿ ರೂ ದಾಟಿದೆ. 1990ರಲ್ಲಿ ಕಾಶ್ಮೀರದಲ್ಲಿ ನಡೆದ ಘಟನೆಗಳು, ಕಾಶ್ಮೀರಿ ಪಂಡಿತರ ವಲಸೆ ಮೊದಲಾದ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗಿದೆ. ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ ಮೊದಲಾದ ತಾರೆಯರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೀವ್ರ ಚರ್ಚೆಯನ್ನೂ ಹುಟ್ಟುಹಾಕಿದೆ. ರಾಜಕೀಯ ನೇತಾರರೂ ಸೇರಿದಂತೆ ಅಧಿಕಾರಿಗಳು, ಸಿನಿಮಾ ಪ್ರೇಮಿಗಳು ಚಿತ್ರವನ್ನು ಬಗೆಬಗೆಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.












Click it and Unblock the Notifications