ಎಎಪಿಗಿಂತ ಬಿಜೆಪಿಯೇ ಮೇಲು ಎಂದ ಕಾಂಗ್ರೆಸ್!

ನವದೆಹಲಿ, ಡಿಸೆಂಬರ್ 22: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಿರುವ ಭಾರತ ರತ್ನವನ್ನು ವಾಪಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿರುವ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.

ನಮ್ಮ ರಾಜಕೀಯ ವೈರಿಯಾಗಿದ್ದರೂ ಬಿಜೆಪಿಯೇ ಎಂದಿಗೂ ಇಂಥ ಬೇಡಿಕೆಯನ್ನು ಇಟ್ಟಿರಲಿಲ್ಲ. ಆದರೆ ಇಂಥ ಬೇಡಿಕೆಯನ್ನು ಇಟ್ಟಿರುವ ಎಎಪಿಗಿಂತ ಬಿಜೆಪಿಯೇ ಮೇಲು ಎಂದು ಕಾಂಗ್ರೆಸ್ ಮುಖಂಡ ಅಜಯ್ ಮಕೆನ್ ಹೇಳಿದ್ದಾರೆ.

1984 ರಲ್ಲಿ ನಡೆದ ಸಿಖ್ ಹತ್ಯಾಕಾಂಡವನ್ನು ನಿಯಂತ್ರಿಸಲಾಗದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಭಾರತ ರತ್ನವನ್ನು ವಾಪಸ್ ಪಡೆಯಬೇಕೆಂದು ಎಎಪಿಯು ದೆಹಲಿ ವಿಧಾನಸಭೆಯಲ್ಲಿ ಅಂಗೀಕಾರ ಮಂಡಿಸಿತ್ತು.

Even BJP never sought withdrawal of Rajiv Gandhis Bharat Ratna: Congress

ಎಎಪಿಯು ಬಿಜೆಪಿಯ 'ಬಿ' ಟೀಮ್. ಎಎಪಿಯ ನಿಜವಾದ ಬಣ್ಣ ಈಗ ಬಯಲಾಗಿದೆ. ಗೋವಾ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಛತ್ತೀಸ್ ಗಢಗಳಲ್ಲಿ ಎಎಪಿಯು ಕಾಂಗ್ರೆಸ್ ವೋಟುಗಳನ್ನು ಒಡೆಯಲೆಂದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಈ ಮೂಲಕ ಬಿಜೆಪಿಗೆ ಲಾಭ ಮಾಡಿಕೊಟ್ಟಿದೆ ಎಂದೂ ಅವರು ದೂರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+