ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಹಿಡಿತದಲ್ಲಿದೆ: ಎಂಎಂ ನರವಾಣೆ

ನವದೆಹಲಿ, ಜೂನ್ 13: ಭಾರತ ಹಾಗೂ ಚೀನಾ ಗಡಿಯಲ್ಲಿ ಪರಿಸ್ಥಿತಿ ಹಿಡಿತದಲ್ಲಿದೆ ಎಂದು ಸೇನಾ ಮುಖ್ಯಸ್ಥ ಎಂಎಂ ನರವಾಣೆ ಹೇಳಿದ್ದಾರೆ.

Recommended Video

      ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ರು ಸಂಸದ ತೇಜಸ್ವಿ ಸೂರ್ಯ | Tejasvi Surya | Karnataka High Court

      ಕಮಾಂಡರ್ ಹಂತದ ಅಧಿಕಾರಿಗಳವರೆಗೂ ಸರಣಿ ಸಭೆಗಳನ್ನು ನಡೆಸದ್ದೇವೆ. ಸ್ಥಳೀಯ ಅಧಿಕಾರಿಗಳ ಜೊತೆಯೂ ಚರ್ಚೆ ನಡೆಸಿದ್ದೇವೆ ಎಂದರು. ನಾವು ನೇಪಾಳದ ಜೊತೆ ಗಟ್ಟಿ ಸಂಬಂಧವನ್ನು ಹೊಂದಿದ್ದೇವೆ.

      ಸಾಂಸ್ಕೃತಿಕ, ಭೌಗೋಳಿಕ, ಧಾರ್ಮಿಕ ಸಂಬಂಧ ಹೊಂದಿದದ್ದೇವೆ. ನಮ್ಮ ಸಂಬಂಧ ಎಂದಿಗೂ ಹೀಗೆಯೇ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಿತ್ಯ ಚೀನಾದ ಕಮಾಂಡರ್‌ಗಳ ಜೊತೆಗೂ ಮಾತುಕತೆ ನಡೆಸುತ್ತಿದ್ದೇವೆ ಎಂದರು.

      Entire Situation Along Our Borders With China Is Under Control

      ಪಾಂಗಾಂಗ್ ತ್ಸೊ ಸರೋವರದ ಬಳಿ ಭಾರತ ನಿರ್ಮಿಸುತ್ತಿರುವ ಒಂದು ಸೇತುವೆ ಹಾಗೂ ಚೀಣಾದ ಸೇನೆ ನಿರ್ಮಿಸಿರುವ ಒಂದು ಬಂಕರ್ , ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಶಮನಗೊಳಿಸುವ ಮಾತುಕತೆಗೆ ಅಡ್ಡಿಯಾಗಿದೆ. ಎರಡೂ ಸೇನೆಗಳ ವಿಭಾಗೀಯ ಕಮಾಂಡರ್ ಮಟ್ಟದ ಇನ್ನೊಂದು ಸುತ್ತಿನ ಸಭೆ ಶುಕ್ರವಾರ ನಡೆದಿದೆ.

      ಜೂನ್ 6 ರಂದು ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಬರಲಾದ ವಿಚಾರಗಳ ಅನುಷ್ಠಾನವನ್ನು ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ ಪಾಂಗಾಂಗ್ ತ್ಸೊ ಸರೋವರದ ದಂಡೆಯ ಫಿಂಗರ್ 4 ಪ್ರದೇಶದಲ್ಲಿ ನಿರ್ಮಿಸಿರುವ ಬಂಕರ್ ಅನ್ನು ಕೆವಲು ಚೀನಾ ನಿರಾಕರಿಸಿದ್ದರಿಂದ ಉದ್ವಿಗ್ನತೆಯನ್ನು ಪೂರ್ಣಪ್ರಮಾಣದಲ್ಲಿ ಶಮನಗೊಳಿಸಲು ಸಾಧ್ಯವಾಗಿಲ್ಲ.

      ಮತ್ತೊಂದೆಡೆ ತನ್ನ ಭೂಪ್ರದೇಶದಲ್ಲಿ ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿಯನ್ನು ಸ್ಥಗಿತೊಳಿಸುವಂತೆ ಚೀನಾ ಇಟ್ಟಿರುವ ಬೇಡಿಕೆಯನ್ನು ಭಾರತವು ತಿರಸ್ಕರಿಸಿದೆ. ದುರ್ಬಕ್‌ನಿಂದ ದೌಲತ್‌ಬೇಗ್ ಓಲ್ಡಿವರೆಗೆ ನಿರ್ಮಿಸುತ್ತಿರುವ 255 ಕಿ.ಮೀ ಉದ್ದದ ರಸ್ತೆಯ ಭಾಗವಾಗಿ ಭಾರತವು ಈ ಸೇತುವೆಯನ್ನು ನಿರ್ಮಿಸುತ್ತಿದೆ. ಭಾರತ ನಿರ್ಮಿಸುತ್ತಿರುವ ಸೇತುವೆಯು ನೈಜ ಗಡಿರೇಖೆಯ ಸಮೀಪದಲ್ಲಿಲ್ಲ, ಅಷ್ಟೇ ಅಲ್ಲ ಅದು ವಿವಾದಿತ ಪ್ರದೇಶವೂ ಅಲ್ಲ ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+