ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೆ 24 ಗಂಟೆ ಭದ್ರತೆ ಕೊಡಿ: ಸುಪ್ರೀಂ

|
Google Oneindia Kannada News

ನವದೆಹಲಿ, ಜನವರಿ 18: ಶಬರಿಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೆ 24 ಗಂಟೆಯೂ ಭದ್ರತೆ ನೀಡಿ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ.

ಶಬರಿ ಮಲೆ ಅಯ್ಯಪ್ಪ ದೇಗುಲವ ಪ್ರವೇಶಿಸಿದ್ದ ಸಾಮಾಜಿಕ ಕಾರ್ಯಕರ್ತೆ ಕನಕದುರ್ಗ(39) ಹಾಗೂ ಕೇಳದ ಕಣ್ಣೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಬಿಂದು ಅಮ್ಮನಿ ಸುಪ್ರೀಂಗೆ ಮೊರೆ ಹೋಗಿದ್ದರು.

Ensure Round-The-Clock Security To 2 Women Who Entered Sabarimala: Court

ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾ ಮೇಲೆ ಅತ್ತೆಯಿಂದ ಹಲ್ಲೆಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾ ಮೇಲೆ ಅತ್ತೆಯಿಂದ ಹಲ್ಲೆ

ವಿರೋಧಗಳ ನಡುವೆ ಶಬರಿಮಲೆ ಅಯ್ಯಪ್ಪ ದೇಗುವ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದ ಇಬ್ಬರು ಮಹಿಳೆಯರಿಗೆ ಜೀವಬೆದರಿಕೆ ಇದೆ ನಮಗೆ ರಕ್ಷಣೆ ನೀಡಿ ಎಂದು ಗುರುವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅದಕ್ಕೆ ಸ್ಪಂದಿಸಿರುವ ಸುಪ್ರೀಂಕೋರ್ಟ್ ಮಹಿಳೆಯರಿಗೆ 24 ಗಂಟೆಯೂ ಭದ್ರತೆ ನೀಡುವಂತೆ ಆದೇಶ ನೀಡಿದೆ.

ಶಬರಿಮಲೆಗೆ ಪ್ರವೇಶಿಸಿದ್ದ ಮಹಿಳೆಯರಿಗೆ ಜೀವ ಬೆದರಿಕೆ: ಸುಪ್ರೀಂ ಮೊರೆಶಬರಿಮಲೆಗೆ ಪ್ರವೇಶಿಸಿದ್ದ ಮಹಿಳೆಯರಿಗೆ ಜೀವ ಬೆದರಿಕೆ: ಸುಪ್ರೀಂ ಮೊರೆ

50 ವರ್ಷದೊಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ ಕನಕ ದುರ್ಗಾ ಅವರು 40 ವರ್ಷದ ಬಿಂದು ಅಮ್ಮಿನಿ ಎಂಬ ಮಹಿಳೆ ಜತೆ ಶಬರಿಮಲೆ ದೇಗುಲ ಪ್ರವೇಶಿಸಿದ್ದರು.

ದೇಗುಲ ಪ್ರವೇಶಿದ ಇಬ್ಬರೂ ಮಹಿಳೆಯರಿಗೆ 24 ಗಂಟೆ ಪೊಲೀಸ್​ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಶುಕ್ರವಾರ ಸುಪ್ರೀಂ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ತಿಳಿಸಿದ್ದಾರೆ.

ಜ.2ರ ತಡರಾತ್ರಿ ಕನಕದುರ್ಗಾ ಮತ್ತು ಬಿಂದು ಪೊಲೀಸ್​ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ್ದರು. ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶ ಪಡೆಯಬಹುದು ಎಂದು ಸುಪ್ರೀಂ ತೀರ್ಪು ನೀಡಿದ್ದರೂ ಭಕ್ತರು ಸುಪ್ರೀಂ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂ ಅನುಮತಿ ನೀಡಿದ್ದರೂ ಸಾವಿರಾರು ಭಕ್ತರು ಮಹಿಳೆಯರ ದೇಗುಲ ಪ್ರವೇಶವನ್ನು ತಡೆದಿದ್ದರು.

English summary
The two women who entered Kerala's Sabarimala temple earlier this month need to be provided security round-the-clock, the Supreme Court said today while hearing a plea on their protection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X