ಇಂಗ್ಲಿಷ್ ಕಾದಂಬರಿಕಾರ ಅಮಿತಾವ್ ಘೋಷ್‌ಗೆ ಜ್ಞಾನಪೀಠ ಪುರಸ್ಕಾರ

ನವದೆಹಲಿ, ಡಿಸೆಂಬರ್ 14: ಇಂಗ್ಲಿಷ್‌ ಭಾಷೆಯ ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಪುರಸ್ಕೃತ ಅಮಿತಾವ್ ಘೋಷ್, ಈ ಬಾರಿ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ನವದೆಹಲಿಯಲ್ಲಿ ಶುಕ್ರವಾರ ಜ್ಞಾನಪೀಠ ಪ್ರಶಸ್ತಿ ಸಮಿತಿ ಅವಿರೋಧವಾಗಿ ಘೋಷ್ ಅವರನ್ನು 54ನೇ ಜ್ಞಾನಪೀಠ ಪ್ರಶಸ್ತಿಗಾಗಿ ಆಯ್ಕೆ ಮಾಡಿತು.

ದಿ ಶಾಡೋ ಲೈನ್ಸ್, ಸೀ ಆಫ್ ಪೊಪ್ಪೀಸ್, ಡಿ ಸರ್ಕಲ್ ಆಫ್ ರೀಸನ್, ಡಿ ಕಲ್ಕತ್ತಾ ಕ್ರೋಮೋಸೋಮ್, ರಿವರ್ ಆಫ್ ಸ್ಮೋಕ್ ಮುಂತಾದ ಕಾದಂಬರಿಗಳನ್ನು ಅವರು ರಚಿಸಿದ್ದಾರೆ. 'ಡಿ ಗ್ರೇಟ್ ಡಾಕ್ಯುಮೆಂಟ್', ಇನ್ ಆನ್ ಆಂಟಿಕ್ ಲ್ಯಾಂಡ್' ಮುಂತಾದ ನಾನ್ ಫಿಕ್ಷನ್ ಪ್ರಕಾರದ ಕೃತಿಗಳನ್ನೂ ಬರೆದಿದ್ದಾರೆ.

English novelist Amitav Ghosh selected for 54th Jnanpith Award 2018

ಸಾಹಿತ್ಯ ಅಕಾಡೆಮಿಯ ಪುರಸ್ಕೃತರಾದ ಘೋಷ್ ಅವರ 'ಸೀ ಆಫ್ ಪೊಪ್ಪೀಸ್' ಮತ್ತು 'ರಿವರ್ ಆಫ್ ಸ್ಮೋಕ್' ಕೃತಿಗಳು ಕ್ರಮವಾಗಿ 2008 ಮತ್ತು 2012ರಲ್ಲಿ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಅಂತಿಮ ಪಟ್ಟಿಗೆ ಆಯ್ಕೆಯಾಗಿದ್ದವು.

2007ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿತ್ತು. ಎರಡು ವರ್ಷಗಳ ಹಿಂದೆ 'ಟಾಟಾ ಲಿಟರೇಚರ್ ಲಿವ್' ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದರು.

1956ರಲ್ಲಿ ಜನಿಸಿದ ಅವರು ಕೋಲ್ಕತಾ ಮತ್ತು ಬಾಂಗ್ಲಾದೇಶಗಳಲ್ಲಿ ಬೆಳೆದಿದ್ದರು. ಪ್ರಸ್ತುತ ಅವರು ನ್ಯೂಯಾರ್ಕ್ ಹಾಗೂ ಗೋವಾದಲ್ಲಿ ನೆಲೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+