27 ಆಪ್ ಶಾಸಕರಿಗೆ ಚುನಾವಣಾ ಆಯೋಗದಿಂದ ನೋಟಿಸ್

ನವದೆಹಲಿ, ನವೆಂಬರ್, 2: ರಾಜಧಾನಿ ದೆಹಲಿ ಆಡಳಿತಾರೂಢ ಪಕ್ಷ ಆಪ್ ಆದ್ಮಿ ಪಾರ್ಟಿ (ಎಎಪಿ)ಯ 27 ಶಾಸಕರಿಗೆ ಲಾಭದಾಯಕ ಹುದ್ದೆ ಹೊಂದಿರುವ ಆರೋಪದ ಮೇಲೆ ಬುಧವಾರ ನೊಟೀಸ್ ಜಾರಿ ಮಾಡಿದೆ.

ಎಎಪಿಯ 27 ಶಾಸಕರು ಜನಪ್ರತಿನಿಧಿಗಳಾಗಿದ್ದುಕೊಂಡೇ ಲಾಭದಾಯಕ ಹುದ್ದೆ ಅನುಭವಿಸುತ್ತಿದ್ದು, ಅವರನ್ನು ಅನರ್ಹಗೊಳಿಸುವಂತೆ ಕೋರಿ ಜೂನ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

Election Commission issues notice to another 27 Delhi AAP MLA's

ಅರ್ಜಿಯನ್ನು ರಾಷ್ಟ್ರಪತಿ ಭವನದ ಮೂಲಕ ಸೆಪ್ಟೆಂಬರ್ ನಲ್ಲಿ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಈ ಕುರಿತು ನವೆಂಬರ್ 11 ರೊಳಗೆ ಪ್ರತಿಕ್ರಿಯೆ ನೀಡುವಂತೆ ಆಯೋಗ ಶಾಸಕರಿಗೆ ಸೂಚಿಸಿದೆ.

ಅರ್ಜಿಯನ್ನು ಕಾಂಗ್ರೆಸ್ ಮುಖಂಡರೊಬ್ಬರು ಸಲ್ಲಿಸಿದ್ದರು. ಎಎಪಿಯ 27ಶಾಸಕರನ್ನು ಅನರ್ಹಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬೇಕು ಎಂದು ಅವರು ಆಯೋಗಕ್ಕೆ ಒತ್ತಾಯಿಸಿದ್ದರು.

ಎಎಪಿ 27 ಶಾಸಕರು ಸಂಸದೀಯ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಸರ್ಕಾರದಿಂದ ಕಾರು, ಬಂಗಲೆ, ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.

ಇದು ಸರ್ಕಾರದ ನಿರ್ಣಯಗಳ ಮೇಲೂ ಪ್ರಭಾವ ಬೀರುವುದರಿಂದ ಈ ಶಾಸಕರಿಗೆ ವಿಶೇಷ ಅಧಿವೇಶನದ್ಲಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಮತ್ತು ಅವರನ್ನು ಅನರ್ಹಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+